Post office: ಪೋಸ್ಟ್ ಆಫೀಸ್ನಲ್ಲಿ ಇಷ್ಟು ಹಣ ಇಟ್ರೆ ತಿಂಗಳಿಗೆ ಬರತ್ತೆ 5,000 ದಿಂದ 9,000 ಬಡ್ಡಿ; ಬೇಗ ಈ ಸ್ಕೀಮ್ ನೀವೂ ಶುರು ಮಾಡಿ!

Post office: ಪ್ರತಿಯೊಬ್ಬರು ಕೂಡ ತಮ್ಮ ಮುಂದಿನ ಜೀವನದ ದೃಷ್ಟಿಯಲ್ಲಿ ಹಣವನ್ನು ಹೆಚ್ಚಿನ ರೀತಿಯಲ್ಲಿ ಹೂಡಿಕೆ ಮಾಡುವುದಕ್ಕೆ ಇಷ್ಟಪಡುತ್ತಾರೆ. ಇವತ್ತಿನ ಲೇಖನದಲ್ಲಿ ಪೋಸ್ಟ್ ಆಫೀಸ್ನಲ್ಲಿ ಇರುವಂತಹ ಯೋಜನೆ ಬಗ್ಗೆ ಹೇಳಲು ಹೊರಟಿದ್ದು ಈ ಮೂಲಕ ನೀವು ಮಾಸಿಕವಾಗಿ ಎಷ್ಟು ಹಣವನ್ನು ಆದಾಯದ ರೂಪದಲ್ಲಿ ಪಡೆದುಕೊಳ್ಳಬಹುದು ಅನ್ನುವುದರ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಹಾಗಿದ್ದರೆ ಎಷ್ಟು ಆದಾಯವನ್ನು ಪಡೆಯಬಹುದು ಯಾವ ಯೋಜನೆ ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

MIS ಪೋಸ್ಟ್ ಆಫೀಸ್ ಯೋಜನೆ

ಈ ಯೋಜನೆಯಲ್ಲೇ ಹಣವನ್ನು ಹೂಡಿಕೆ ಮಾಡುವ ಮೂಲಕ ಐದು ವರ್ಷಗಳವರೆಗೂ ಪ್ರತಿ ತಿಂಗಳ ಆದಾಯವನ್ನು ಈ ಯೋಜನೆಯ ಹೂಡಿಕೆದಾರರು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ನೀವು 7.4% ಬಡ್ಡಿದರವನ್ನು ಪಡೆದುಕೊಳ್ಳಬಹುದಾಗಿದೆ. ಸರ್ಕಾರಿ ಬೆಂಬಲಿತ ಯೋಜನೆ ಇದಾಗಿದ್ದು ಮಾಸಿಕವಾಗಿ ಆದಾಯವನ್ನು ಪಡೆದುಕೊಳ್ಳುವುದಕ್ಕೆ ಇದೊಂದು ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕ ಪೋಸ್ಟ್ ಆಫೀಸ್ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸಿಂಗಲ್ ಖಾತೆಯಲ್ಲಿ 5550 ರೂಪಾಯಿಗಳನ್ನು ಹಾಗೂ ಜಂಟಿ ಖಾತೆಯಲ್ಲಿ 9250 ರೂಪಾಯಿ ಗಳನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ನೀಡಲಾಗಿದೆ. ಈ ಯೋಜನೆಯಲ್ಲಿ ಒಂದು ಬಾರಿ ಹಣವನ್ನು ಡೆಪಾಸಿಟ್ ಹಾಗೂ ಪಡೆದುಕೊಳ್ಳುವುದಕ್ಕೆ ಅವಕಾಶವನ್ನು ಮಾಡಿಕೊಡಲಾಗುತ್ತದೆ. 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ ಮಾತ್ರ ಜಂಟಿ ಖಾತೆಯನ್ನು ಮಾಡುವುದಕ್ಕೆ ಅವಕಾಶ ನೀಡಲಾಗುತ್ತದೆ.

ನಿಯಮಿತ ಅವಧಿಯ ನಂತರ ಗ್ರಾಹಕರಿಗೆ ಅವರ ಹಣವನ್ನು ಹಿಂದಿರುಗಿಸಲಾಗುತ್ತದೆ ಹಾಗೂ ಅವರಿಗೆ ಬರುತ್ತಿರುವಂತಹ ಮಾಸಿಕ ಆದಾಯ ಕೂಡ ನಿಲ್ಲುತ್ತದೆ. ಸಮಯಕ್ಕಿಂತ ಮುಂಚೆ ಹಣವನ್ನು ಪಡೆದುಕೊಳ್ಳುವುದರ ಮೇಲೆ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. 10000 ದಿಂದ 15 ಲಕ್ಷ ರೂಪಾಯಿಗಳ ವರೆಗೂ ಕೂಡ ಹಣವನ್ನು ನೀವು ಹಣವನ್ನು ಹೂಡಿಕೆ ಮಾಡಬಹುದಾಗಿದೆ. 10,000 ಹಣವನ್ನು ಹೂಡಿಕೆ ಮಾಡಿದರೆ ತಿಂಗಳಿಗೆ 62, 50,000 ಹಣ ಹೂಡಿಕೆ ಮಾಡಿದರೆ ತಿಂಗಳಿಗೆ 308 ರೂಪಾಯಿ, 1 ಲಕ್ಷ ಹೂಡಿಕೆ ಮಾಡಿದರೆ 617, 2 ಲಕ್ಷಕ್ಕೆ 1233, ಐದು ಲಕ್ಷ ಹೂಡಿಕೆ ಮಾಡಿದ್ರೆ ತಿಂಗಳಿಗೆ 3083, 10 ಲಕ್ಷ ಹೂಡಿಕಿ ಮಾಡಿದರೆ ತಿಂಗಳಿಗೆ 6,167, 15 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ 9250 ರೂಪಾಯಿಗಳ ಮಾಸಿಕ ಆದಾಯ ಸಿಗಲಿದೆ.

ಪೋಸ್ಟ್ ಆಫೀಸ್ನ ಈ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಒಂದು ದೊಡ್ಡ ಮೊತ್ತವನ್ನು ಫಿಕ್ಸೆಡ್ ಡೆಪಾಸಿಟ್ ಮಾಡುವ ಮೂಲಕ ಐದು ವರ್ಷಗಳವರೆಗೂ ಕೂಡ ನಿರಂತರವಾಗಿ ಅದರ ಬಡ್ಡಿಯ ರೂಪದಲ್ಲಿ ಪ್ರತಿ ತಿಂಗಳ ಆದಾಯವನ್ನು ಪಡೆದುಕೊಳ್ಳಲಿದ್ದೀರಿ. ಈ ಮೂಲಕ ನೀವು ನಿಮ್ಮ ಆರ್ಥಿಕ ಸದೃಢತೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸಬಹುದಾಗಿದೆ.

Comments are closed.