Business Idea: ಮನೆಯಲ್ಲೇ ಕುಳಿತುಕೊಂಡು ಕೆಲಸ ಮಾಡಿ; ಸಕ್ಕತ್ ದುಡ್ಡು ಮಾಡಿ, ಅಮ್ಮಂದಿರೂ ಮಾಡ್ಬಹುದು!

Business Idea: ಇವತ್ತಿನ ಈ ಮುಂದುವರೆದಿರುವಂತಹ ಜಗತ್ತಿನಲ್ಲಿ ಯಾರು ಬೇಕಾದರೂ ಎಲ್ಲಿ ಕುಳಿತುಕೊಂಡು ಬೇಕಾದರೂ ಕೂಡ ಕೆಲಸವನ್ನು ಮಾಡಬಹುದು ಹಾಗೂ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ. ಕಂಪ್ಯೂಟರ್ ಜ್ಞಾನ ತಿಳಿದುಕೊಂಡಿದ್ದರೆ ಸಾಕು ಕಾಲೇಜಿಗೆ ಹೋಗುವಂತಹ ವಿದ್ಯಾರ್ಥಿಗಳು ಕೂಡ ಪಾರ್ಟ್ ಟೈಮ್ ಕೆಲಸ ಮಾಡುವ ಮೂಲಕ ಕೈತುಂಬ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಆ ರೀತಿ ಪಾರ್ಟ್ ಟೈಮ್ ಕೆಲಸ ಮಾಡಿ ಹಣವನ್ನು ಸಂಪಾದನೆ ಮಾಡುವಂತಹ ವಿಧಾನಗಳ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

  1. ಒಂದು ವೇಳೆ ನೀವು ಬುದ್ಧಿವಂತರಾಗಿದ್ದರೆ ಇತ್ತೀಚಿನ ದಿನಗಳಲ್ಲಿ ಕಾಲೇಜ್ ವಿದ್ಯಾರ್ಥಿಗಳು ಆನ್ಲೈನ್ ಟ್ಯೂಷನ್ ನಲ್ಲಿ ಕಲಿಯೋದಕ್ಕೆ ಬರ್ತಾರೆ. ಅವರಿಗೆ ಆನ್ಲೈನ್ ಟ್ಯೂಷನ್ ನೀಡುವ ಮೂಲಕ ನೀವು ಕೂಡ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ನೀವು ಕಲಿಸುವಂತಹ ವಿಷಯದಲ್ಲಿ ನಿಮಗೆ ಉತ್ತಮವಾದ ಜ್ಞಾನ ಇದ್ರೆ ಸಾಕು ಪ್ರೌಢಶಾಲಾ ಅಥವಾ ಶಾಲಾ ವಿದ್ಯಾರ್ಥಿಗಳಿಗೆ ನೀವು ಆನ್ಲೈನ್ ಟ್ಯೂಷನ್ ಮಾಡುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದು. Tutor.com, Wyzant.com ಈ ವೆಬ್ ಸೈಟ್ಗಳಿಗೆ ಭೇಟಿ ನೀಡುವ ಮೂಲಕ ನೀವು ಟ್ಯೂಷನ್ ಕೆಲಸವನ್ನು ಪಾರ್ಟ್ ಟೈಮ್ ಮಾಡಬಹುದಾಗಿದೆ.
  2. ಬಳಕೆದಾರರ ಫೀಡ್ ಅನ್ನು ಅವಲಂಬಿಸಿ ಗೂಗಲ್ ಹಾಗೂ ಬಿಂಗ್ ಕಾರ್ಯನಿರ್ವಹಿಸುತ್ತವೆ. ಆ ಸಂದರ್ಭದಲ್ಲಿ ಈ ಕಂಪನಿಗಳು ಆಲ್ಗೋರಿದಮ್ಸ್ ಫೀಲ್ ಮಾಡುವಂತಹ ಕೆಲಸವನ್ನು ನೀಡುತ್ತವೆ ಅವುಗಳನ್ನು ಕೂಡ ನೀವು ಮಾಡಬಹುದಾಗಿದೆ.
    https://www.leapforceathome.com/, https://www.thesmartcrowd.com/ಈ ವೆಬ್ ಸೈಟ್ ಗಳಿಗೆ ಭೇಟಿ ನೀಡುವ ಮೂಲಕ ನೀವು ಈ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ.
  3. ನಾವು ಪ್ರತಿ ದಿನ ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಸಮಯವನ್ನು ಕಳೆಯುತ್ತೇವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ ಹೀಗಾಗಿ ಅಲ್ಲಿರುವಂತಹ ಕೆಲವೊಂದು ಖಾತೆಗಳನ್ನು ಮ್ಯಾನೇಜ್ ಮಾಡುವ ಮೂಲಕ ಕೂಡ ನೀವು ಹಣವನ್ನು ಸಂಪಾದನೆ ಮಾಡಬಹುದಾಗಿದೆ. ಕೆಲವು ಕಂಪನಿಗಳು ತಮ್ಮ ಬ್ರಾಂಡ್ ಅನ್ನು ಮೈನ್ಟೈನ್ ಮಾಡುವುದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಖಾತೆಗಳನ್ನು ಹೊಂದಿರುತ್ತವೆ. ಅವುಗಳನ್ನು ಮ್ಯಾನೇಜ್ ಮಾಡುವುದರಿಂದ ಕೂಡ ನೀವು ಹಣವನ್ನು ಸಂಪಾದನೆ ಮಾಡಬಹುದಾಗಿದ್ದು ಇದನ್ನು ಕಂಪನಿಗಳ ಮಾರ್ಕೆಟಿಂಗ್ ಏಜೆನ್ಸಿಗಳ ಮೂಲಕ ನೀವು ಪಡೆದುಕೊಳ್ಳಬಹುದಾಗಿದೆ.
  4. freelancewritersden.com ಎನ್ನುವಂತಹ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಬರವಣಿಗೆಗಾಗಿ ಕೂಡ ಹಣವನ್ನು ಸಂಪಾದನೆ ಮಾಡಬಹುದಾಗಿದೆ. ನಮ್ಮಲ್ಲಿ ಸಾಕಷ್ಟು ಜನರು ಬರವಣಿಗೆಯಲ್ಲಿ ಸಾಕಷ್ಟು ಹಿಡಿತವನ್ನು ಹೊಂದಿರುತ್ತಾರೆ ಹೀಗಾಗಿ ಇಂತಹ ವೆಬ್ಸೈಟ್ಗಳಲ್ಲಿ ಫ್ರೀಲ್ಯಾನ್ಸಿಂಗ್ ಬರಹಗಳನ್ನು ಬರೆಯುವ ಮೂಲಕ ಉತ್ತಮ ಮಟ್ಟದ ಹಣವನ್ನು ಸಂಪಾದನೆ ಮಾಡಬಹುದು.
  5. ಪ್ರತಿಯೊಂದು ಹೊಸ ಕೆಲಸಕ್ಕೆ ಸೇರುವುದಕ್ಕಿಂತ ಮುಂಚೆ ನೀವು ನಿಮ್ಮ ರೆಸ್ಯೂಮ್ ಅನ್ನು ಕಂಪನಿಗಳಿಗೆ ಸೆಂಡ್ ಮಾಡಬೇಕಾಗಿರುತ್ತದೆ. ರೆಸುಮೆ ನೋಡೋದಕ್ಕೆ ಮಾತ್ರ ಸುಲಭವಾಗಿ ಕಾಣಿಸಿಕೊಳ್ಳುತ್ತದೆ ಆದರೆ ಅವುಗಳು ತುಂಬಾನೇ ಕಷ್ಟಕರವಾಗಿರುತ್ತದೆ ಯಾಕೆಂದರೆ ಸಾಕಷ್ಟು ಜನರ ರೆಸ್ಯೂಮ್ ನಲ್ಲಿ ನಿಮ್ಮ ರೆಸುಮೆ ಶಾರ್ಟ್ ಲಿಸ್ಟ್ ಆಗಬೇಕೆಂದರೆ ಅದರಲ್ಲಿ ಕೆಲವೊಂದು ವಿಶೇಷ ಅಥವಾ ವಿಭಿನ್ನ ಬರಹಗಳು ಇರಲೇಬೇಕು. ನಿರುದ್ಯೋಗಿಗಳಿಗೆ ಈ ರೀತಿಯ ಉತ್ತಮವಾದ ರೆಸ್ಯೂಮ್ ಮಾಡುವುದಕ್ಕಾಗಿ ನೀವು ಹಣ ಪಡೆದುಕೊಳ್ಳಬಹುದಾಗಿದ್ದು ಲಿಂಕ್ಡ್ಇನ್ ಪ್ರೊಫೈಲ್ ನಲ್ಲಿ ಅಥವಾ https://www.resumeedge.com ವೆಬ್ಸೈಟ್ನಲ್ಲಿ ಈ ಕೆಲಸವನ್ನು ನೀವು ಪಡೆದುಕೊಳ್ಳಬಹುದು.
  6. ಆಡಿಯೋ ಕೇಳಿ ಅದಕ್ಕೆ ತಕ್ಕಂತೆ ಅದನ್ನು ಬರೆದು ಕೊಡುವುದು ಕೂಡ ಒಂದು ಕೆಲಸಾನೆ‌. ಟ್ರಾನ್ಸ್‌ಕ್ರಿಪ್ಷನಿಸ್ಟ್‌ ಕೆಲಸದಲ್ಲಿ ಕಂಪ್ಯೂಟರ್ನಲ್ಲಿ ಸ್ಪೀಡ್ ಟೈಪಿಂಗ್ ಮಾಡುವವರು ಕೆಲಸವನ್ನು ಟ್ರೈ ಮಾಡಬಹುದಾಗಿದೆ. TranscribeMe, Rev ನಂತಹ ವೆಬ್ಸೈಟ್ ಗಳಲ್ಲಿ ನೀವು ಈ ಕೆಲಸವನ್ನು ಹುಡುಕಬಹುದಾಗಿದೆ.
  7. Fiverr.com ನಲ್ಲಿ ನೀವು ಬೇರೆ ಬೇರೆ ವಿಭಾಗದಲ್ಲಿ ಅಂದ್ರೆ ಡಬ್ಬಿಂಗ್ ಆರ್ಟಿಸ್ಟ್, ಫ್ರೀಲಾನ್ಸಿಂಗ್ ರೈಟರ್, ವಿಡಿಯೋ, ಟ್ರಾನ್ಸ್ಲೇಷನ್, ಬರವಣಿಗೆ ಸೇರಿದಂತೆ ಸಾಕಷ್ಟು ವಿಭಾಗದಲ್ಲಿ ಫ್ರೀಲ್ಯಾನ್ಸಿಂಗ್ ಕೆಲಸ ಮಾಡುವಂತಹ ಕೆಲಸಗಾರರ ಅಗತ್ಯವಿರುತ್ತದೆ. ಇದರಲ್ಲಿ ನೀವು ನಿಮ್ಮ ಅರ್ಹ ಕೆಲಸಕ್ಕೆ ಅಪ್ಲೈ ಮಾಡಬಹುದಾಗಿದೆ.
  8. SimplyHired, CareerBuilder ವೆಬ್ ಸೈಟ್ ಗಳಲ್ಲಿ ನೀವು ಬೇರೆ ಬೇರೆ ಕಂಪನಿಗಳಿಗೆ ಬೇಕಾಗಿರುವಂತಹ ಉದ್ಯೋಗಿಗಳನ್ನ ಲಿಂಕ್ಡಿನ್ ಹಾಗೂ ಬೇರೆ ಕಡೆಗಳಲ್ಲಿ ಅವರ ಪ್ರೊಫೈಲ್ ಹಾಗೂ Resume ನೋಡಿ ಶಾರ್ಟ್ ಲಿಸ್ಟ್ ಮಾಡಿ ರಿಕ್ರೂಟ್ ಮಾಡುವಂತಹ ಕೆಲಸವನ್ನು ಮಾಡುವ ಮೂಲಕ ಕೂಡ ಹಣವನ್ನು ಸಂಪಾದನೆ ಮಾಡುವಂತಹ ಅವಕಾಶವನ್ನು ನೀವು ಪಡೆದುಕೊಳ್ಳಬಹುದಾಗಿದೆ.

Comments are closed.