Varthur Santhosh: ನಮ್ಮ ತಾಯಿ ಊಟ ಮಾಡ್ತಿಲ್ಲ, ಬುಟ್ಬುಡ್ರಪ್ಪಾ.. ಅವ್ರನ್ನ ನಿವೇ ನೋಡ್ಕೋಬೇಕಪ್ಪಾ.. ಕಣ್ಣೀರು ಹಾಕಿದ ವರ್ತೂರು ಸಂತೋಷ್; ಅಸಲಿ ವಿಷ್ಯ ಏನಂತೆ ಅಂದ್ರೆ..!

Varthur Santhosh: ಬಿಗ್ ಬಾಸ್ ಕನ್ನಡ ಸೀಸನ್ 10 ಸಾಕಷ್ಟು ಕಾರಣಗಳಿಗಾಗಿ ಪ್ರೇಕ್ಷಕರ ನಡುವೆ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅವುಗಳಲ್ಲಿ ವರ್ತೂರು ಸಂತೋಷ್ ಕೂಡ ಒಬ್ಬರು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಬರುವುದಕ್ಕಿಂತ ಮುಂಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದ ವ್ಯಕ್ತಿ.

ತಮ್ಮ ಹಳ್ಳಿಕಾರ್ ತಳಿಯ ಹಸುಗಳನ್ನು ಸಾಕುವ ಮೂಲಕ ವರ್ತೂರು ಸಂತೋಷ್ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಜನಪ್ರಿಯರಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರವೂ ಕೂಡ ವರ್ತೂರು ಸಂತೋಷ್ ಅವರ ಜನಪ್ರಿಯತೆ ಅದೇ ರೀತಿಯಲ್ಲಿ ಉಳಿದುಕೊಂಡಿದೆ. ಆದರೆ ಕೆಲವೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅದೇ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ವಿಡಿಯೋದಲ್ಲಿ ತಮ್ಮ ಮೇಲೆ ಅಪವಾದವನ್ನು ಹರಿಸುತ್ತಿರುವವರ ವಿರುದ್ಧ ಮಾತನಾಡುತ್ತಾ ನೀವುಗಳು ನಾವು ನಡೆಸುತ್ತಿದ್ದ ರೇಸ್ ನಲ್ಲಿ ಹಣವನ್ನು ತಿನ್ನುತ್ತಿದ್ರಿ ನಾವಾಗಲಿ ನಮ್ಮ ಕುಟುಂಬದವರಾಗಲಿ ಯಾವತ್ತೂ ಕೂಡ ಹಣ ತಿನ್ನೋ ಕೆಲಸ ಮಾಡಿದವರಲ್ಲ ಅನ್ನೋದಾಗಿ ಹೇಳಿಕೊಂಡಿದ್ದಾರೆ.

ನನ್ನ ವಯಕ್ತಿಕ ವಿಚಾರವನ್ನು ನೀವು ಎಲ್ಲಿ ಬೇಕಾದರೂ ಮಾತನಾಡಿ ಆದರೆ ನಾನು ಯಾರ ಅನ್ನವನ್ನು ಕೂಡ ಕಿತ್ಕೊಂಡು ತಿಂದಿಲ್ಲ. ನೀವೇ ನನಗೆ ನ್ಯಾಯ ಕೊಡಿ ಅನ್ನೋದಾಗಿ ಜನರ ಬಳಿ ಕೇಳಿಕೊಂಡು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವರ್ತೂರು ಸಂತೋಷ್ ಅಪ್ಲೋಡ್ ಮಾಡಿಕೊಂಡಿದ್ದಾರೆ. ಕಣ್ಣೀರನ್ನು ಡ್ರಾಮಾ ಅಂತಾರೆ ಆದ್ರೆ ನಾವು ಮಾನ ಮರ್ಯಾದಿಗಾಗಿ ಬದುಕಿದವರು. ನಮ್ಮ ತಾಯಿ ಊಟ ಕೂಡ ಮಾಡ್ತಾ ಇಲ್ಲ ಅನ್ನೋದಾಗಿ ವರ್ತೂರು ಸಂತೋಷ್ ತಮ್ಮ ದುಃಖವನ್ನು ಕೂಡ ಈ ಸಂದರ್ಭದಲ್ಲಿ ಹೊರಹಾಕಿದ್ದಾರೆ.

ಬಿಗ್ ಬಾಸ್ ಮನೆಗೆ ಹೋಗೋದಕ್ಕಿಂತ ಮುಂಚೆ ಮದುವೆ ಹಾಗೂ ಮಗಳು ಇರೋ ಬಗ್ಗೆ ವರ್ತೂರು ಸಂತೋಷ್ ಹೇಳಿಕೊಂಡಿರಲಿಲ್ಲ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಒಂದಾದ ಮೇಲೆ ಒಂದರಂತೆ ಬೇರೆ ಬೇರೆ ಊರಿನ ಕಾರ್ಯಕ್ರಮಗಳಿಗೆ ವರ್ತೂರು ಸಂತೋಷ್ ಹೋಗಿ ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಲಹಂಕ ಮಂಜು ಸೇರಿದಂತೆ ಸಾಕಷ್ಟು ಜನರು ಯೂಟ್ಯೂಬ್ ಚಾನೆಲ್ ಗಳಲ್ಲಿ ವರ್ತೂರು ಸಂತೋಷ್ ರವರ ವಿರುದ್ಧ ಸಾಕಷ್ಟು ಅಪವಾದಗಳನ್ನು ಮಾಡುತ್ತಿದ್ದು ಅದೇ ಕಾರಣಕ್ಕಾಗಿಯೇ ವರ್ತೂರು ಸಂತೋಷ್ ರವರು ಈ ಅಪವಾದಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಇವುಗಳಿಂದಾಗಿ ತಮ್ಮ ತಾಯಿಯ ಮೇಲೆ ಕೂಡ ಇವುಗಳು ಪರಿಣಾಮವನ್ನು ಬೀರುತ್ತಿವೆ ಅದಕ್ಕಾಗಿ ಅವರು ಊಟವನ್ನು ಕೂಡ ಮಾಡುತ್ತಿಲ್ಲ ಅನ್ನುವುದಾಗಿ ವರ್ತೂರು ಸಂತೋಷ್ ಹೇಳಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನಿಂದ ಹೊರಬಂದ ನಂತರ ವರ್ತೂರು ಸಂತೋಷ್ ಜನಪ್ರಿಯತೆಯನ್ನು ಪಡೆದುಕೊಂಡ ರೀತಿಯಲ್ಲೇ ಸಾಕಷ್ಟು ವಿವಾದಗಳಲ್ಲಿ ಕೂಡ ಕಾಣಿಸಿಕೊಂಡಿರುವುದು ಕಂಡುಬಂದಿದೆ. ಅವುಗಳಲ್ಲಿ ಇದು ಕೂಡ ಒಂದಾಗಿದ್ದು ವರ್ತೂರು ಸಂತೋಷ್ ವಿಡಿಯೋ ದಲ್ಲಿ ಈ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿರುವುದು ಕೂಡ ವೈರಲಾಗುತ್ತಿದೆ.

Comments are closed.