Ram Mandir: ಈ ಒಂದು ಸ್ಥಳಕ್ಕೆ ಹಣವನ್ನು ದೇಣಿಗೆ ಕೊಟ್ರೆ ಟ್ಯಾಕ್ಸ್ ಕಟ್ಟೋದೇ ಬೇಡ; ಆದರೆ ಇದರಿಂದ ಹುಷಾರಾಗಿರಿ.

Ram Mandir: ಇದೇ ಜನವರಿ 22ರಂದು ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ರಾಮಲಲ್ಲಾನ ಬಹು ನಿರೀಕ್ಷಿತ ದೇವಸ್ಥಾನ ಈಗಾಗಲೇ ಲೋಕಾರ್ಪಣೆಗೊಂಡಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. 500 ವರ್ಷಗಳಿಗಿಂತಲೂ ಹೆಚ್ಚಿನ ಸಮಯದ ಕಾಯುವುದಕ್ಕೆ ಕೊನೆಗೂ ಕೂಡ ಪೂರ್ತಿಯಾಗಿದ್ದು ಸನಾತನ ಹಿಂದೂ ಸಂಸ್ಕೃತಿಯನ್ನು ಪರಿಪಾಲಿಸುವಂತಹ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಇದು ಹಬ್ಬದ ಸನ್ನಿವೇಶವನ್ನು ತಂದಿತ್ತು. ಇನ್ನು ಈಗಾಗಲೇ ಭಕ್ತಾಭಿಮಾನಿಗಳು ಲಕ್ಷ ಲಕ್ಷ ಮತದಲ್ಲಿ ದೇವಸ್ಥಾನಕ್ಕೆ ಹಣವನ್ನು ದೇಣಿಗೆ ರೂಪದಲ್ಲಿ ನೀಡುತ್ತಿದ್ದಾರೆ. ನೀವು ಕೂಡ ದೇವಸ್ಥಾನಕ್ಕೆ ಹಣವನ್ನು ಬೇಣಿಗೆ ರೂಪದಲ್ಲಿ ನೀಡುವ ಮೂಲಕ ಟ್ಯಾಕ್ಸ್ ರಿಯಾಯಿತಿಯನ್ನು ಪಡೆದುಕೊಳ್ಳುವಂತಹ ಅವಕಾಶ ಕೂಡ ಇದೆ.

ಈಗಾಗಲೇ ರಾಮಮಂದಿರದ ವತಿಯಿಂದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ನಿರ್ಮಿಸಲಾಗಿದೆ. ಇದರ ಅಧಿಕೃತ ವೆಬ್ಸೈಟ್ಗೆ ಹೋಗುವ ಮೂಲಕ ನೀವು ಹಣವನ್ನು ದೇಣಿಗೆ ರೂಪದಲ್ಲಿ ದಾನ ಮಾಡಬಹುದಾಗಿದೆ. NEFT, UPI ಸೇರಿದಂತೆ ಸಾಕಷ್ಟು ವಿಧಾನಗಳ ಮೂಲಕ ನೀವು ಹಣವನ್ನು ಟ್ರಾನ್ಸ್ಫರ್ ಮಾಡಬಹುದಾಗಿದೆ. ನೀವು ಗೇಟ್ವೇ ಮುಖಾಂತರ ಹಣವನ್ನು ಪಾವತಿ ಮಾಡಿದರೆ ಕೂಡಲೇ ರಿಸಿಟ್ ಪಡೆದುಕೊಳ್ಳುತ್ತೀರಿ. ಬೇರೆ ಯಾವುದೇ ವಿಧಾನದ ಮೂಲಕ ಹಣವನ್ನು ಪಾವತಿ ಮಾಡಿದ್ರು ಕೂಡ ರಿಸಿಟ್ ನಿಮಗೆ ಬಂದು ತಲುಪೋದಕ್ಕೆ 15 ದಿನಗಳ ಸಮಯ ಬೇಕಾಗುತ್ತದೆ. ಎಲ್ಲದಕ್ಕಿಂತ ಪ್ರಮುಖವಾಗಿ ನೀವು ದೇಣಿಗೆ ನೀಡಿರುವಂತಹ ಹಣದ 50 ಪ್ರತಿಶತ 80 G (2) (B) ಅಡಿಯಲ್ಲಿ ರಿಯಾಯಿತಿ ಪಡೆದುಕೊಳ್ಳಲು ಅವಕಾಶವಿದೆ. ಒಂದು ವೇಳೆ ನೀವು ಕ್ಯಾಶ್ ರೂಪದಲ್ಲಿ ಹಣವನ್ನು ದೇಣಿಗೆ ರೂಪದಲ್ಲಿ ನೀಡಿದರೆ ರಿಯಾಯಿತಿಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿದೆ.

ಇದರಿಂದ ಎಚ್ಚರವಾಗಿರಿ

ಸೈಬರ್ ತಜ್ಞರು ನೀಡಿರುವಂತಹ ಸಲಹೆಗಳ ಪ್ರಕಾರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ನಕಲಿ ವೆಬ್ಸೈಟ್ ಗಳನ್ನು ಕೂಡ ಈಗಾಗಲೇ ನಿರ್ಮಾಣ ಮಾಡಲಾಗಿದ್ದು ಇದರಿಂದ ಭಕ್ತರು ಜಾಗೃತರಾಗಿರಬೇಕಾಗಿದೆ. https://srjbtkshetra.org ಇದು ನಿಜವಾದ ವೆಬ್ ಸೈಟ್ ಆಗಿದ್ದು ಇದೇ ರೀತಿ ಸುಳ್ಳು ಹೇಳಿಕೊಂಡು ಕೆಲವರು ಬೇರೆ ಬೇರೆ ವೆಬ್ಸೈಟ್ಗಳ ಮೂಲಕ ಹಣವನ್ನು ಪಡೆದುಕೊಳ್ಳುವಂತಹ ಜಾಲವನ್ನು ರಚಿಸುತ್ತಿದ್ದಾರೆ. ಒಂದು ವೇಳೆ ನಿಮಗೆ ಯಾವುದೇ ರೀತಿಯಲ್ಲಿ ಬೇರೆ ವೆಬ್ ಸೈಟ್ ನಲ್ಲಿ ಜನರ ಹಣವನ್ನು ಕೊಳ್ಳೆ ಹೊಡೆಯುವಂತಹ ಪ್ಲಾನಿಂಗ್ ಅನ್ನು ಮಾಡುತ್ತಿದ್ದಾರೆ ಎಂಬುದಾಗಿ ಅನಿಸಿದರೆ ಕೂಡಲೇ ಸೈಬರ್ ಗೆ ಅಥವಾ ಸಂಬಂಧಪಟ್ಟವರಿಗೆ ಇದರ ಬಗ್ಗೆ ಮಾಹಿತಿಗಳನ್ನು ನೀಡಿ ಆಕ್ಷನ್ ತೆಗೆದುಕೊಳ್ಳುವಂತೆ ಮಾಡಿ. ತಮ್ಮ ನಂಬಿಕೆಗೆ ಅನುಗುಣವಾಗಿ ಜನರು ದೇವರ ಸೇವೆಗೆ ಉಪಯೋಗವಾಗಲಿ ಎನ್ನುವ ಕಾರಣಕ್ಕಾಗಿ ಟ್ರಸ್ಟಿಗೆ ಹಣವನ್ನು ನೀಡುತ್ತಾರೆ. ಆದರೆ ಅವರಿಗೆ ಈ ರೀತಿ ಕಳ್ಳತನದಿಂದ ಹಣವನ್ನು ಕೊಳ್ಳೆ ಹೊಡೆಯುವವರು ಕೂಡ ಇದ್ದಾರೆ ಅನ್ನೋದು ತಿಳಿದಿರುವುದಿಲ್ಲ. ಹೀಗಾಗಿ ಆದಷ್ಟು ಜಾಗೃತರಾಗಿ ಹಣವನ್ನು ಡೊನೇಟ್ ಮಾಡಿ.

Comments are closed.