Astrology:ಎಪ್ರೀಲ್ 2ರಿಂದ ಬುಧನ ಹಿಮ್ಮುಖ ಚಲನೆ ಈ ರಾಶಿಯವರಿಗೆ ಕಾದಿದೆ ಸಮಸ್ಯೆ; ಹುಷಾರಾಗಿರಿ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಜಕುಮಾರ ಆಗಿರುವಂತ ಬುಧ ಗ್ರಹಗಳ ರಾಜ ಆಗಿರುವಂತಹ ಸೂರ್ಯನ ಬಳಿ ಸಮೀಪಿಸುತ್ತಿದ್ದು ಅಲ್ಲಿಯೇ ಅಸ್ತನಾಗಲಿದ್ದಾನೆ. ಮೇಷ ರಾಶಿಯಲ್ಲಿ ಬುಧ ಇದೆ ಏಪ್ರಿಲ್ 2ನೇ ತಾರೀಖಿನಂದು ಹಿಮ್ಮೆಟ್ಟಲಿದ್ದಾನೆ. ಇದು 12 ರಾಶಿಯವರ ಮೇಲೆ ಕೂಡ ಪ್ರಭಾವವನ್ನು ಬೀರಲಿದ್ದು ವಿಶೇಷವಾಗಿ ಮೂರು ರಾಶಿಯವರ ಮೇಲೆ ನಕರಾತ್ಮಕ ಪ್ರಭಾವವನ್ನು ಬೀರಲಿದೆ. ಹಾಗಿದ್ರೆ ಬನ್ನಿ ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ(Aries)

ಮೇಷ ರಾಶಿಯಲ್ಲಿಯೇ ಇದು ನಡೆಯುವುದರಿಂದಾಗಿ ಬುಧ ಮೇಷ ರಾಶಿಯವರಿಗೆ ಸಾಕಷ್ಟು ಸಮಸ್ಯೆಗಳನ್ನು ಹೊತ್ತು ತರಬಹುದು. ಈ ಸಂದರ್ಭದಲ್ಲಿ ಮೇಷ ರಾಶಿಯವರ ನಿರ್ಲಕ್ಷ್ಯದಿಂದಾಗಿ ಸಾಕಷ್ಟು ನಷ್ಟ ಉಂಟಾಗುವಂತಹ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಇರುವಂತಹ ಮೇಷ ರಾಶಿಯವರು ತಮ್ಮ ಕೆಲಸದಲ್ಲಿ ಸ್ವಲ್ಪಮಟ್ಟಿಗೆ ನಿರ್ಲಕ್ಷ ತೋರಿದರು ಕೂಡ ನೀವು ನಿಮ್ಮ ಕೆಲಸವನ್ನೇ ಕಳೆದುಕೊಳ್ಳಬೇಕಾದಂತಹ ಸಾಧ್ಯತೆ ಇದೆ. ವಿಶೇಷವಾಗಿ ಆರ್ಥಿಕವಾಗಿ ಸಾಕಷ್ಟು ನಷ್ಟವನ್ನು ನೀವು ಈ ಸಮಯದಲ್ಲಿ ಕಾಣಬಹುದಾಗಿದ್ದು ಹಣದ ಖರ್ಚಿನ ಅಥವಾ ಹಣದ ವಿಚಾರದ ಬಗ್ಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ನಿಗ ವಹಿಸುವುದು ಒಳ್ಳೆಯದು.

ವೃಷಭ ರಾಶಿ(Taurus)

ಯಾರ ಜೊತೆಗೂ ಕೂಡ ಮಾತಿನ ಭರಕ್ಕೆ ಜಗಳ ಆಡೋದಕ್ಕೆ ವೃಷಭ ರಾಶಿಯವರು ಹೋಗಲೇಬಾರದು ಯಾಕೆಂದರೆ ಈ ಜಗಳ ತಾರಕಕ್ಕೆ ಏರುವಂತಹ ಸಾಧ್ಯತೆ ದಟ್ಟವಾಗಿದೆ. ಇಂತಹ ಜಗಳಗಳು ಎಲ್ಲಿ ಹೋಗಿ ಕೊನೆಗೊಳ್ಳುತ್ತವೆ ಎಂದು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಇನ್ನು ಕೆಲಸ ಮಾಡುವ ಕ್ಷೇತ್ರದಲ್ಲಿ ಕೂಡ ತಾಳ್ಮೆಯಿಂದ ಕೆಲಸ ಮಾಡಬೇಕಾಗಿರುತ್ತದೆ. ಹಣದ ವಿಚಾರದಲ್ಲಿ ಕೆಲವೊಂದು ಸಮಸ್ಯೆಗಳನ್ನು ನೀವು ಎದುರಿಸುವಂತಹ ಸಾಧ್ಯತೆ ಇರುತ್ತದೆ ಹೀಗಾಗಿ ಹಣದ ಖರ್ಚಿನ ವಿಚಾರದಲ್ಲಿ ನೀವು ಸ್ವಲ್ಪ ಮಟ್ಟಿಗೆ ಕಂಟ್ರೋಲ್ ಇಟ್ಟುಕೊಳ್ಳುವುದು ಒಳ್ಳೆಯದು. ಅನಗತ್ಯ ಖರ್ಚುಗಳಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಹಿಂದೆ ಮುಂದೆ ಹೋಗಬಹುದಾಗಿದೆ.

ಕರ್ಕ ರಾಶಿ(Cancer)

ಈ ಚಲನೆ ಎನ್ನುವುದು ಕರ್ಕ ರಾಶಿಯವರ ಕೆಲಸದ ಜೀವನದ ಮೇಲೆ ವಿಪರೀತ ಪರಿಣಾಮ ಬೀರುವಂತಹ ಸಾಧ್ಯತೆ ಇರುತ್ತದೆ. ಕೆಲಸದಲ್ಲಿ ಕೆಲವೊಮ್ಮೆ ಆಸಕ್ತಿ ಇಲ್ಲದೆ ಕೆಲಸದಲ್ಲಿ ವಿಳಂಬ ಆಗುವಂತಹ ಸಾಧ್ಯತೆ ಕೂಡ ಇರುತ್ತದೆ. ವ್ಯಾಪಾರದಲ್ಲಿ ತೊಡಗಿರುವವರಿಗೆ ಹಣದ ನಷ್ಟ ಉಂಟಾಗುವ ಸಾಧ್ಯತೆ ಇದೆ. ಯಾವ ರೀತಿ ಕೆಲಸ ಮಾಡಿದ್ರೂ ಕೂಡ ನಿಮ್ಮ ವರಿಷ್ಠ ಅಧಿಕಾರಿಗಳಿಗೆ ನಿಮ್ಮ ಕೆಲಸ ಇಷ್ಟ ಆಗುವುದಿಲ್ಲ. ಇದೇ ಕಾರಣಕ್ಕಾಗಿ ನಿಮ್ಮ ಮನಸ್ಸಿನಲ್ಲಿ ಕೂಡ ಬೇಸರದ ಭಾವನೆ ಹೆಚ್ಚಾಗುತ್ತದೆ ಹಾಗೂ ಕೆಲಸ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ. ನಿಮ್ಮ ಕೆಲಸ ಕೂಡ ಅತ್ಯಂತ ನಿಧಾನವಾಗಿ ಮುನ್ನಡೆಯುತ್ತದೆ. ಈ ಸಂದರ್ಭದಲ್ಲಿ ಇದೇ ರೀತಿಯ ಸಾಕಷ್ಟು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.

Comments are closed.