NPS: ಇಲ್ಲಿ ಕೇವಲ ಹತ್ತು ಸಾವಿರ ಕೂಡಿಟ್ರೆ ಸಾಕು, ತಿಂಗಳಿಗೆ 1.5 ಲಕ್ಷ ರಿಟರ್ನ್ ಸಿಗುತ್ತೆ!

NPS: ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಹೂಡಿಕೆಯ ವಿಭಾಗದಲ್ಲಿ ಜಾರಿಗೆ ತಂದಿದ್ದು ಅವುಗಳಲ್ಲಿ ನ್ಯಾಷನಲ್ ಪೆನ್ಷನ್ ಸ್ಕೀಮ್(NPS) ಕೂಡ ಒಂದಾಗಿದೆ. ಮೊದಲು ಕೇವಲ ಕೇಂದ್ರ ಸರ್ಕಾರದ ನೌಕರರಿಗೆ ಮಾತ್ರ ಈ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿತ್ತು ಆದರೆ ಈಗ ರಾಜ್ಯದ ಮುಖಾಂತರ ಖಾಸಗಿ ವಲಯದ ನೌಕರರಿಗೆ ಕೂಡ ಈ ಯೋಜನೆಯನ್ನು ನೀಡಲಾಗಿದೆ.

ನ್ಯಾಷನಲ್ ಪೆನ್ಶನ್ ಸ್ಕೀಮ್ – NPS

ಇನ್ಕಮ್ ಟ್ಯಾಕ್ಸ್ ಸೆಕ್ಷನ್ 80 ಸಿ ಪ್ರಕಾರ 1.5 ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿಯನ್ನು ಕೂಡ ನೀವು ಇದರಲ್ಲಿ ಪಡೆದುಕೊಳ್ಳಬಹುದು. NPS Tier 1 ಖಾತೆ ಅಡಿಯಲ್ಲಿ ಕೂಡ 80 ಸಿಸಿಡಿ ಪ್ರಕಾರ 50,000 ಐದು ಪ್ರಕಾರ 50,000ಗಳ ವರೆಗೆ ತೆರಿಗೆ ರಿಯಾಯಿತಿಯನ್ನು ಪಡೆದುಕೊಳ್ಳುತ್ತಾರೆ.

NPS ಕೆಲಸ ಮಾಡುವ ವಿಧಾನ

ಎನ್‌ಪಿಎಸ್ ನಲ್ಲಿ ಹೂಡಿಕೆದಾರರು ಮಾಡುವಂತಹ ಹೂಡಿಕೆ ಹಣವನ್ನು ಬೇರೆ ಬೇರೆ ಭದ್ರತಾ ಬಾಂಡ್ ಗಳಲ್ಲಿ ಹಾಗೂ ಬೇರೆ ಕಾರ್ಯಕ್ರಮಗಳಲ್ಲಿ ಸರ್ಕಾರ ಹೂಡಿಕೆ ಮಾಡುತ್ತದೆ. ಹೂಡಿಕೆ ಹಳೆಯದಾಗುತ್ತ ಹೋದಂತೆ ಕಾರ್ಪಸ್ ಬೆಳೆಯುತ್ತದೆ. 60ನೇ ವಯಸ್ಸಿಗೆ ಬರುವ ಸಂದರ್ಭದಲ್ಲಿ ಹೂಡಿಕೆದಾರರಿಗೆ ಹಣದ 60 ಪ್ರತಿಶತ ಹಣವನ್ನು ಪಡೆದುಕೊಳ್ಳುವ ಅವಕಾಶ ನೀಡಲಾಗುತ್ತದೆ. ಉಳಿದ 40 ಪ್ರತಿಶತ ಹಣವನ್ನು ಸರ್ಕಾರ ಖಾತರಿ ಆದಾಯವನ್ನು ರಿಟನ್ ರೂಪದಲ್ಲಿ ನೀಡುವಂತಹ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದೆ ಹಾಗೂ ಅದರಿಂದ ಬರುವಂತಹ ಹಣವನ್ನು ಪ್ರತಿ ತಿಂಗಳಿಗೆ ಹೂಡಿಕೆ ಮಾಡಿರುವಂತಹ ನಾಗರಿಕರಿಗೆ ಪೆನ್ಷನ್ ರೂಪದಲ್ಲಿ ನೀಡುತ್ತದೆ.

10,000 ಹೂಡಿಕೆಗೆ 1.50 ಲಕ್ಷಕ್ಕೂ ಹೆಚ್ಚಿನ ರಿಟರ್ನ್ ಹೇಗೆ

ಒಂದು ವೇಳೆ 25 ನೇ ವಯಸ್ಸಿನಿಂದ 10000 ರೂಪಾಯಿಗಳ ಹೂಡಿಕೆಯನ್ನು ಮಾಡಿಕೊಂಡು ಬರುತ್ತಿದ್ರೆ ತಿಂಗಳಿಗೆ 1.50 ಲಕ್ಷ ರೂಪಾಯಿಗಳ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ. ಮುಂದಿನ 35 ವರ್ಷಗಳ ವರೆಗೆ ಅಂದರೆ ನಿಮ್ಮ ಅರವತ್ತನೆ ವಯಸ್ಸಿನವರೆಗೆ ಹಣವನ್ನು ಹೂಡಿಕೆ ಮಾಡಿಕೊಂಡು ಹೋಗುತ್ತಿದ್ರೆ ಪ್ರತಿ ವರ್ಷ 10 ಪ್ರತಿಶತ ಲಾಭವನ್ನು ಪಡೆದುಕೊಳ್ಳುತ್ತಿದ್ದೀರಿ ಎಂದರ್ಥ. ಈ ಸಂದರ್ಭದಲ್ಲಿ ನಿಮ್ಮ ಹೂಡಿಕೆ ಒಟ್ಟಾರೆಯಾಗಿ 35 ವರ್ಷಗಳಲ್ಲಿ 42 ಲಕ್ಷ ರೂಪಾಯಿ ಆಗಿರುತ್ತದೆ ಹಾಗೂ ನಿಮ್ಮ ಹೂಡಿಕೆಯನ್ನು ಸೇರಿಸಿ ನಿಮಗೆ ಸಿಕ್ಕಿರುವಂತಹ ಒಟ್ಟಾರೆ ಆದಾಯ 3.41 ಕೋಟಿ ಆಗಿರುತ್ತದೆ. ಒಟ್ಟಾರೆಯಾಗಿ ಕಾರ್ ಪಾಸ್ 3.83 ಕೋಟಿ ರೂಪಾಯಿ ಆಗಿರುತ್ತದೆ.

ಈ ಸಂದರ್ಭದಲ್ಲಿ ನೀವು ೬೦ ಪ್ರತಿಶತ ಹಣವನ್ನು ಹಿಂಪಡೆಯುವುದರಿಂದಾಗಿ ಅದರ ಮೊತ್ತ 2.29 ಕೋಟಿ ರೂಪಾಯಿ ಆಗಿರುತ್ತದೆ. ಈ ಸಂದರ್ಭದಲ್ಲಿ ನಿಮಗೆ ವರ್ಷಕ್ಕೆ ಸಿಗುವಂತಹ ಮೊತ್ತ 1.53 ಕೋಟಿ ರೂಪಾಯಿ ಆಗಿರುತ್ತದೆ. ಇದರಲ್ಲಿ ಆರು ಪ್ರತಿಶತ ವಾರ್ಷಿಕ ಆದಾಯವನ್ನು ಪಡೆದುಕೊಂಡರೆ ತಿಂಗಳಿಗೆ ನಿಮಗೆ 76566 ರೂಪಾಯಿಗಳ ಆದಾಯ ಸಿಗುತ್ತದೆ. 60 ಪ್ರತಿಶತದ ಮೊದಲು 40%ವನ್ನು ಹಿಂಪಡೆದರೆ ನಿಮಗೆ ವರ್ಷಾಸನದ ರೂಪದಲ್ಲಿ 2.29 ಕೋಟಿ ರೂಪಾಯಿ ಸಿಗುತ್ತದೆ. ಆರು ಪ್ರತಿಶತ ವಾರ್ಷಿಕ ಆದಾಯವನ್ನು ಪಡೆದರೆ ಪ್ರತಿ ತಿಂಗಳಿಗೆ ನಿಮಗೆ 1.14 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣ ಸಿಗುತ್ತದೆ. ಅದೇ ರೀತಿಯಲ್ಲಿ 20 ಪ್ರತಿಶತ ರಿಟನ್ ಪಡೆದುಕೊಂಡರೆ ವರ್ಷಾಸನ 3.06 ಕೋಟಿ ರೂಪಾಯಿ ಆಗಿರುತ್ತದೆ ಹಾಗೂ ಪ್ರತಿ ತಿಂಗಳಿಗೆ ನಿಮಗೆ 1.53 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣ ಸಿಗುತ್ತದೆ.

Comments are closed.