Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಸಾಧ್ಯವಾಗದಿದ್ದರೆ ಚಿನ್ನದ ಬೆಲೆಯ ಈ ವಸ್ತುಗಳನ್ನು ಖರೀದಿ ಮಾಡಿ ಲಕ್ಷ್ಮಿ ನಿಮ್ಮ ಮನೆಗೆ ಬಂದೇ ಬರುತ್ತಾಳೆ!

Akshaya Tritiya 2024: ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ಸ್ಥಿತಿ ಅಂದರೆ ಮೇ 10ನೇ ತಾರೀಕು ಶುಕ್ರವಾರ ಅಕ್ಷಯ ತೃತೀಯ ಬರುತ್ತದೆ. ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವಾದ ದಿನ ಇದು ಅಕ್ಷಯ ತೃತೀಯ ದಿನ ಸಾಮಾನ್ಯವಾಗಿ ದೇವರಿಗೆ ಪೂಜೆ ಮಾಡುವುದು ಜೊತೆಗೆ ಇನ್ನ ಖರೀದಿ ಮಾಡುವುದು ಬಹಳ ಮುಖ್ಯ. ಆದರೆ ಎಲ್ಲರಿಗೂ ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲ ಈಗಾಗಲೇ ಚಿನ್ನದ ಬೆಲೆ ಗಗನಕ್ಕೆ ಏರಿದೆ ಹಾಗಾದ್ರೆ ಲಕ್ಷ್ಮಿಯನ್ನು ಆಹ್ವಾನಿಸಲು ಚಿನ್ನದ ಬೆಲೆಯ ಈ ವಸ್ತುಗಳನ್ನು ಖರೀದಿ ಮಾಡಿ ಇದರಿಂದ ಲಕ್ಷ್ಮೀದೇವಿ ಸಂತುಷ್ಟಳಾಗಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ.

  • ಮೊದಲನೇದಾಗಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಅಕ್ಷಯ ತೃತೀಯದ ದಿನ ಗೋವಿನ ಲೋಹ ಅಥವಾ ಬೆಳ್ಳಿಯ ಮೂರ್ತಿಯನ್ನು ಖರೀದಿಸಿ ಇದನ್ನು ಲಕ್ಷ್ಮಿ ದೇವಿಯ ಪಾದದ ಬಳಿ ಇಟ್ಟು ಪೂಜೆ ಮಾಡಿ ನಂತರ ಕೆಂಪು ಬಟ್ಟೆಯಿಂದ ಸುತ್ತಿ ಸುರಕ್ಷಿತ ಜಾಗದಲ್ಲಿ ಇಡಬಹುದು ಅಥವಾ ಹಣ ಇಡುವ ಸ್ಥಳದಲ್ಲಿ ಇರಿಸಿದರೆ ನಿಮ್ಮ ಬಳಿ ಇರುವ ಹಣ ದುಪಟ್ಟಾಗುತ್ತದೆ ಎಂದು ಜೋತಿಷ್ಯ ಹೇಳುತ್ತದೆ.
  • ಎರಡನೆಯದಾಗಿ ಚಿನ್ನದ ನಾಣ್ಯದಂತೆ ಬೆಳ್ಳಿ ನಾಣ್ಯವನ್ನು ಕೂಡ ಖರೀದಿ ಮಾಡಬಹುದು ಇದನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಬೆಳ್ಳಿ ನಾಣ್ಯ ಮತ್ತು ಬೆಳ್ಳಿ ವಿಗ್ರಹ ಅಥವಾ ಯಾವುದೇ ಬೆಳ್ಳಿ ವಸ್ತುಗಳನ್ನ ಅಕ್ಷಯ ತೃತೀಯದ ದಿನ ಖರೀದಿ ಮಾಡುವುದು ಒಳ್ಳೆಯದು.
  • ಇನ್ನು ಮೂರನೆಯದಾಗಿ ಅಕ್ಷಯ ತೃತೀಯದ ದಿನ ಮಣ್ಣಿನ ಮಡಿಕೆ ಖರೀದಿ ಮಾಡುವುದು ಕೂಡ ಬಹಳ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ಮಡಿಕೆಯಲ್ಲಿ ಪಾನಕ ತುಂಬಿಸಿ ದಾನ ಮಾಡಬೇಕು ಅದೇ ರೀತಿ ಅಕ್ಷಯ ತೃತೀಯ ದಿನ ನೀರನ್ನು ದಾನ ಮಾಡುವುದು ಬಹಳ ಉತ್ತಮವಾದ ಕೆಲಸ.
  • ಇನ್ನು ನಾಲ್ಕನೆಯದಾಗಿ ಅಕ್ಷಯ ತೃತೀಯದ ದಿನ ಬಾರ್ಲಿಯನ್ನು ಖರೀದಿಸಿದರೆ ಚಿನ್ನ ಖರೀದಿಸಿದಷ್ಟೇ ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಬ್ರಹ್ಮಾಂಡದ ಮೊದಲ ಆಹಾರ ಎಂದು ಹೇಳಲು ಕೊಡುವ ಬಾರ್ಲಿ ವಿಷ್ಣುವಿನ ಸಂಕೇತ ಆದ್ದರಿಂದ ನೀವು ಬಾರ್ಲಿಯನ್ನು ಅಕ್ಷಯ ತೃತೀಯ ದಿನ ಖರೀದಿಸುವುದು ತುಂಬಾನೇ ಒಳ್ಳೆಯದು.
    ಈ ರೀತಿಯಾಗಿ ಅಕ್ಷಯ ತೃತೀಯ ದಿನಾಚರಣೆ ಖರೀದಿ ಮಾಡಲು ಸಾಧ್ಯವಾಗದೇ ಇದ್ದರೆ ಚಿನ್ನದಷ್ಟೇ ಬೆಲೆ ಬಾಳುವ ಈ ವಸ್ತುಗಳನ್ನು ಖರೀದಿ ಮಾಡಿ ಮನೆಗೆ ಲಕ್ಷ್ಮಿಯನ್ನು ಕರೆತನ್ನಿ.

Comments are closed.