LPG Cylinder: ಈ ಏಳು ದಾಖಲೆಗಳನ್ನು ನೀಡಿದ್ರೆ ಮಾತ್ರ ಉಚಿತ ಗ್ಯಾಸ್ ಸ್ಟವ್ಚ್ ಸಿಲೆಂಡರ್ ಸಿಗತ್ತೆ; ಇಲ್ಲಾಂದ್ರೆ ಅರ್ಜಿ ಸಲ್ಲಿಸೋದು ವೇಸ್ಟ್!

LPG Cylinder: ಕೇಂದ್ರ ಸರ್ಕಾರ ಮಹಿಳೆಯರನ್ನು ಪ್ರಮುಖವಾಗಿ ಗುರಿಯನ್ನು ಇಟ್ಟುಕೊಂಡು ಅವರಿಗೆ ಸುಲಭವಾಗುವ ರೀತಿಯಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿಯಲ್ಲಿ ಅಡುಗೆ ಮಾಡೋದಕ್ಕೆ ನಮ್ಮ ಭಾರತ ದೇಶದ ಹೆಣ್ಣು ಮಕ್ಕಳು ಕಷ್ಟಪಡಬಾರದು ಎನ್ನುವ ಕಾರಣಕ್ಕಾಗಿ ನರೇಂದ್ರ ಮೋದಿಯವರು ಉಜ್ವಲ ಯೋಜನೆ ಅಡಿಯಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಎಲ್ಪಿಜಿ ಗ್ಯಾಸ್ ಕನೆಕ್ಷನ್ ಅನ್ನು ಸುಲಭವಾಗಿ ನೀಡುವಂತಹ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಈಗಾಗಲೇ 70 ಲಕ್ಷಕ್ಕೂ ಅಧಿಕ ಕುಟುಂಬಗಳಲ್ಲಿ ಎಲ್‌ಪಿಜಿ ಕನೆಕ್ಷನ್ ಅನ್ನು ಕೇಂದ್ರ ಸರ್ಕಾರ ನೀಡಿದೆ.

ಉಜ್ವಲ ಯೋಜನೆ ಅಡಿಯಲ್ಲಿ ಈಗಾಗಲೇ ಸಾಕಷ್ಟು ಜನರಿಗೆ ಎಲ್‌ಪಿಜಿ ಕನೆಕ್ಷನ್ ನೀಡಲಾಗಿದ್ದು ಡಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರುವವರಿಗೆ ಉಚಿತವಾದ ಗ್ಯಾಸ್ ಸಿಲಿಂಡರ್ ಅನ್ನು ನೀಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದ್ದು ಇದರಿಂದಾಗಿ ಬಡ ಕುಟುಂಬದ ಕಷ್ಟವನ್ನ ನಿವಾರಣೆ ಮಾಡುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

ಉಜ್ವಲ ಯೋಜನೆ ಪಡೆದುಕೊಳ್ಳಲು ಇರ ಬೇಕಾಗಿರುವ ಅರ್ಹತೆ

ಬಡತನದ ರೇಖೆಗಿಂತ ಕೆಳಗಿರುವಂತಹ ಕುಟುಂಬದವರು ಅದರಲ್ಲಿ ವಿಶೇಷವಾಗಿ ಕನಿಷ್ಠಪಕ್ಷ 18 ವರ್ಷ ವಯಸ್ಸು ತುಂಬಿರಬೇಕು. ಉಜ್ವಲ ಯೋಜನೆ ಅಡಿಯಲ್ಲಿ ಮನೆಯ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ಬಿಪಿಎಲ್ ರೇಷನ್ ಕಾರ್ಡ್ ಅನ್ನ ಹೊಂದಿರುವಂತಹ ಕುಟುಂಬದವರಿಗೆ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಎಲ್ಪಿಜಿ ಕನೆಕ್ಷನ್ ದೊರಕಲಿದೆ.

ಎಲ್ಲಕ್ಕಿಂತ ವಿಶೇಷ ಎನ್ನುವ ರೀತಿಯಲ್ಲಿ ಉಜ್ವಲ ಯೋಜನೆ ಅಡಿಯಲ್ಲಿ ಎಲ್‌ಪಿಜಿ ಕನೆಕ್ಷನ್ ಅನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ 300 ರೂಪಾಯಿಗಳ ಸಬ್ಸಿಡಿಯನ್ನು ಕೂಡ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ. ಒಂದು ವೇಳೆ ನೀವು ಕೂಡ ಉಜ್ವಲ ಯೋಜನೆಯನ್ನು ಪಡೆದುಕೊಳ್ಳಬೇಕು ಹಾಗೂ ಎಲ್ ಪಿ ಜಿ ಕನೆಕ್ಷನ್ ಅನ್ನು ಹಾಕಿಸಿ ಕೊಳ್ಳಬೇಕು ಎನ್ನುವಂತಹ ಯೋಜನೆಯನ್ನು ಹೊಂದಿದ್ರೆ ನಿಮ್ಮ ಬಳಿ ಕೇವಲ ಈ ಡಾಕ್ಯುಮೆಂಟ್ಸ್ ಗಳು ಇದ್ರೆ ಸಾಕು.

ಉಜ್ವಲ ಯೋಜನೆ ಅಡಿಯಲ್ಲಿ ಎಲ್ಪಿಜಿ ಕನೆಕ್ಷನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು

  • ಬಿಪಿಎಲ್ ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ವೋಟರ್ ಐಡಿ
  • ಬ್ಯಾಂಕ್ ಅಕೌಂಟ್ ಡೀಟೇಲ್ಸ್
  • ಪಾಸ್ಪೋರ್ಟ್ ಸೈಜ್ ಫೋಟೋ
  • ಮೊಬೈಲ್ ನಂಬರ್
  • ಇನ್ಕಮ್ ಸರ್ಟಿಫಿಕೇಟ್

pmujjwalayojana.com ಇದು ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಹೋಗಿ ಕ್ಲಿಕ್ ಮಾಡುವ ಮೂಲಕ ನೀವು ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉಜ್ವಲ ಯೋಜನೆ ಅಡಿಯಲ್ಲಿ ಪ್ರತಿಯೊಂದು ಮನೆಗಳಲ್ಲಿ ಅಡುಗೆ ಒಲೆಯನ್ನು ಬಳಸುವುದನ್ನು ನಿಲ್ಲಿಸಿ ಆರೋಗ್ಯಕ್ಕೆ ಪೂರಕವಾಗಿರುವಂತಹ ಎಲ್ಪಿಜಿ ಗ್ಯಾಸ್ ಕನೆಕ್ಷನ್ ಅನ್ನು ನೀಡುವಂತಹ ನರೇಂದ್ರ ಮೋದಿ ಅವರ ಉದ್ದೇಶವನ್ನು ಉಜ್ವಲ ಯೋಜನೆ ಪೂರೈಸುತ್ತಿದೆ. ಹೀಗಾಗಿ ಒಂದು ವೇಳೆ ನೀವು ಕೂಡ ಡತನದ ರೇಖೆಗಿಂತ ಕೆಳಗಿದ್ದು ಎಲ್‌ಪಿಜಿ ಕನೆಕ್ಷನ್ ಹಾಕಿಸಿಕೊಳ್ಳಬೇಕು ಎನ್ನುವಂತಹ ಆಸಕ್ತಿಯನ್ನು ಹೊಂದಿದ್ದರೆ ಈ ಮೇಲೆ ಹೇಳಿರುವಂತಹ ನಿಯಮಗಳನ್ನು ಪಾಲಿಸಿ ಪಡೆದುಕೊಳ್ಳಬಹುದಾಗಿದೆ.

Comments are closed.