Sandalwood: ಕನ್ನಡ ಚಿತ್ರರಂಗದ ಖ್ಯಾತ ನಟಿಯರ ಅಸಲಿ ಹೆಸರುಗಳು ಇವು ಹೆಸರು ಬದಲಾಯಿಸಿದ್ದೇ ಅದೃಷ್ತವೂ ಬದ್ಲಾಯ್ತು ಗೊತ್ತಾ?

Sandalwood: ನಮ್ಮ ಕನ್ನಡ ಚಿತ್ರರಂಗ ಇದುವರೆಗೂ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರು ದೊಡ್ಡಮಟ್ಟದ ಸ್ಟಾರ್ಗಳಾಗಿ ಹೊರಹೊಮ್ಮುವುದಕ್ಕೆ ಕಾರಣವಾಗಿದೆ. ಸಾಕಷ್ಟು ಜನರು ಕೇವಲ ಕರ್ನಾಟಕದಿಂದ ಮಾತ್ರವಲ್ಲದೇ ಬೇರೆ ಭಾಷೆಗಳಿಂದಲೂ ಕೂಡ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದು ಇಲ್ಲೇ ತಮ್ಮ ನೆಲೆಯನ್ನು ಕಂಡುಕೊಂಡಿರುವಂತಹ ಉದಾಹರಣೆ ಕೂಡ ಇದೆ. ಇಂಥವರಲ್ಲಿ ಸಾಕಷ್ಟು ಕನ್ನಡ ಚಿತ್ರರಂಗದ ನಟಿಯರು ಚಿತ್ರರಂಗಕ್ಕೆ ಬಂದ ನಂತರ ಹೆಸರನ್ನು ಬದಲಾಯಿಸಿಕೊಂಡಿರುವುದು ಅಥವಾ ತಮ್ಮ ನಿಜವಾದ ಹೆಸರಿಗಿಂತ ವಿಭಿನ್ನವಾದ ಹೆಸರನ್ನು ಹೊಂದಿರುವುದು ಕೂಡ ಇದೆ. ಹಾಗಿದ್ರೆ ಬನ್ನಿ ಆ ರೀತಿಯ ನಟಿಯರು ಯಾರು ಹಾಗು ಅವರ ನಿಜವಾದ ಹೆಸರು ಏನು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯುವಂತಹ ಪ್ರಯತ್ನವನ್ನು ಮಾಡೋಣ.

ಕನ್ನಡದ ನಟಿಯರ ನಿಜವಾದ ಹೆಸರು ಇಲ್ಲಿದೆ ನೋಡಿ!

  • ಕನ್ನಡ ಚಿತ್ರರಂಗದ ಕ್ವೀನ್ ಆಗಿರುವಂತಹ ರಮ್ಯಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಭಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಕಾಣಿಸಿಕೊಳ್ಳುವ ಅವರು ಕೇವಲ ನಟನೆ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಇವರ ನಿಜವಾದ ಹೆಸರು ದಿವ್ಯ ಸ್ಪಂದನ ಎಂಬುದಾಗಿ. ಸಿನಿಮಾಕ್ಕೆ ಕಾಲಿಟ್ಟ ಮೇಲೆ ರಮ್ಯಾ ಅವರಿಗೆ ರಮ್ಯಾ ಎನ್ನುವಂತಹ ಹೆಸರು ಕೊಟ್ಟಿದ್ದು ಪಾರ್ವತಮ್ಮ ರಾಜಕುಮಾರ್.
  • ಮತ್ತೊಬ್ಬ ಕನ್ನಡ ಚಿತ್ರರಂಗದ ಖ್ಯಾತ ನಟಿ ಅಂದ್ರೆ ಅದು ಸುಧಾರಾಣಿ. ನಟಿ ಸುಧಾರಾಣಿ ರವರು ನಿಮಗೆಲ್ಲರಿಗೂ ತಿಳಿದಿರಬಹುದು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗಕ್ಕೆ ನಾಯಕನಟಿಯಾಗಿ ಆನಂದ್ ಸಿನಿಮಾದ ಮೂಲಕ ಶಿವರಾಜ್ ಕುಮಾರ್ ರವರ ಜೊತೆಗೆ ಪಾದರ್ಪಣೆ ಮಾಡುತ್ತಾರೆ. ಅತ್ಯಂತ ಕಡಿಮೆ ವಯಸ್ಸಿನಲ್ಲೇ ವೇಗವಾಗಿ ನಾಯಕಿಯಾಗಿ ಬೆಳೆದಿರುವಂತಹ ಕೆಲವೇ ಕೆಲವು ನಾಯಕಿಯರಲ್ಲಿ ಸುಧಾರಾಣಿ ಕೂಡ ಒಬ್ಬರು. ಇವರ ನಿಜವಾದ ಹೆಸರು ಜಯಶ್ರೀ ಎಂಬುದಾಗಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಹಾಗೂ ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಸುಧಾರಾಣಿ ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ಧಾರವಾಹಿಗಳಲ್ಲಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
  • ಸಂಗೀತ ಶೃಂಗೇರಿ ಅವರು ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. 777 ಚಾರ್ಲಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿರುವ ಇವರು ಕಿರುತೆರೆಯಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವ ಇವರ ನಿಜವಾದ ಹೆಸರು ಶ್ರೀದೇವಿ ಎನ್ನುವುದಾಗಿ.
  • ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡದ ಪದ್ಯಹದ ಮನಸ್ಸಿನ ಗೆದ್ದಿರುವಂತಹ ನಟಿ ಪೂಜಾ ಗಾಂಧಿ ಅವರ ನಿಜ ಹೆಸರು ಕೂಡ ಸಂಜನಾ ಗಾಂಧಿಯಾಗಿದ್ದು ಸಿನಿಮಾ ಗಾಗಿ ಪೂಜಾ ಗಾಂಧಿ ಎಂಬುದಾಗಿ ಹೆಸರನ್ನು ಬದಲಾಯಿಸಿಕೊಂಡಿದ್ದರು.
  • ಕಾಟೇರ ಸಿನಿಮಾದ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿರುವ ಮಾಲಾಶ್ರೀ ರವರ ಮಗಳಾಗಿರುವಂತಹ ಆರಾಧನಾ ರವರು ಅನನ್ಯ ಎನ್ನುವುದಾಗಿ ಇದ್ದ ಹೆಸರನ್ನು ಆರಾಧನ ಎಂಬುದಾಗಿ ಬದಲಾವಣೆ ಮಾಡಿಕೊಂಡಿದ್ದಾರೆ.
  • ಚಿಕ್ಕ ವಯಸ್ಸಿನಿಂದಲೂ ಸಿನೆಮಾ ರಂಗದಲ್ಲಿ ಕಾಣಿಸಿಕೊಂಡಿರುವ ನಟಿ ಅಮೂಲ್ಯ ಅವರ ನಿಜವಾದ ಹೆಸರು ಮೌಲ್ಯ ಆಗಿದೆ. ಚಿಕ್ಕ ವಯಸ್ಸಿನಲ್ಲಿ ಸುದೀಪ್ ಹಾಗೂ ದರ್ಶನ್ ಅವರಂತ ದಿಗ್ಗಜ ನಟರ ಜೊತೆಗೆ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದರು.

Comments are closed.