Astrology: ಮೀನ ರಾಶಿಗೆ ಬುಧನ ಎಂಟ್ರಿ; ಈ ನಾಲ್ಕು ರಾಶಿವರಿಗೆ ಆಪತ್ತು, ಹುಷರಾಗಿರಿ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗೃಹಗಳ ರಾಜಕುಮಾರ ಆಗಿರುವಂತಹ ಬುಧ ಮೀನ ರಾಶಿಗೆ ಕಾಲಿಡಲಿದ್ದಾನೆ. ಪ್ರತಿಯೊಂದು ಸಂದರ್ಭದಲ್ಲಿ ಯಾವುದೇ ಗ್ರಹ ರಾಶಿಗೆ ಕಾಲಿಟ್ಟ ಸಂದರ್ಭದಲ್ಲಿ ಕೆಲವು ರಾಶಿಯವರಿಗೆ ಶುಭ ಪರಿಣಾಮ ಉಂಟಾಗುತ್ತದೆ ಇನ್ನೂ ಕೆಲವು ರಾಶಿಯವರಿಗೆ ಅಶುಭ ಪರಿಣಾಮ ಉಂಟಾಗುತ್ತದೆ. ಇನ್ನು ಇವತ್ತಿನ ಈ ಲೇಖನದಲ್ಲಿ ನಾವು ಹೇಳೋದಕ್ಕೆ ಹೊರಟಿರೋದು ಇದರಿಂದಾಗಿ ಕೆಟ್ಟ ಪರಿಣಾಮಗಳನ್ನು ಅನುಭವಿಸಬಹುದಾದ ಸಾಧ್ಯತೆಯನ್ನು ಹೊಂದಿರುವಂತಹ ಆ ನಾಲ್ಕು ರಾಶಿಯವರು ಯಾರು ಎನ್ನುವುದನ್ನು ನಿಮಗೆ ತಿಳಿಸುವುದಕ್ಕೆ.

ಮೇಷ ರಾಶಿ(Aries)

ಯಾವುದೇ ಹೊಸ ಕೆಲಸಗಳನ್ನು ಮಾಡೋದಕ್ಕೆ ಹೋಗಬೇಡಿ ಯಾಕೆಂದರೆ ಅದು ಯಶಸ್ವಿ ಆಗದೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಮಯ ಸ್ವಲ್ಪ ನಿಮ್ಮ ವಿರುದ್ಧವಾಗಿರುವ ಕಾರಣದಿಂದಾಗಿ ಕೆಲಸದ ಕ್ಷೇತ್ರದಲ್ಲಿ ಕೂಡ ತೊಂದರೆಗಳನ್ನು ಎದುರಿಸಬೇಕಾಗಿರುತ್ತದೆ. ಸಾಕಷ್ಟು ಕಷ್ಟಪಟ್ಟು ದುಡಿದರು ಕೂಡ ನಿರೀಕ್ಷಿತ ಫಲಿತಾಂಶ ನಿಮಗೆ ಸಿಗುವುದಿಲ್ಲ ಅನ್ನುವ ಬೇಸರ ನಿಮ್ಮಲ್ಲಿ ಇರುತ್ತದೆ. ಆರ್ಥಿಕ ವಿಚಾರದಲ್ಲಿ ಕೂಡ ಸಾಕಷ್ಟು ಸಮಸ್ಯೆಗಳನ್ನು ನೀವು ಎದುರಿಸಬೇಕಾಗಿ ಬರುತ್ತದೆ. ಮೇಷ ರಾಶಿಯವರು ಪ್ರಮುಖವಾಗಿ ಈ ಸಮಯದಲ್ಲಿ ಯೋಚಿಸ ಬೇಕಾಗಿರುವುದು ಅವರ ಖರ್ಚು ಹಾಗೂ ಆದಾಯದ ಬಗ್ಗೆ ಯಾಕೆಂದರೆ ಆರ್ಥಿಕ ನಷ್ಟ ಅನ್ನೋದು ಈ ಸಂದರ್ಭದಲ್ಲಿ ನಿಮಗೆ ಖಂಡಿತವಾಗಿ ಕಾಡಲಿದೆ.

ಸಿಂಹ ರಾಶಿ (Leo)

ಬುಧನ ಚಲನೆಯಿಂದಾಗಿ ಸಿಂಹ ರಾಶಿಯವರಿಗೆ ತಮ್ಮ ಜೀವನದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಕಷ್ಟಗಳ ಕಗ್ಗಂಟು ಎದುರಾಗಲಿದೆ. ವೈಯಕ್ತಿಕ ಜೀವನ ಇರಬಹುದು ಇಲ್ಲವೇ ವ್ಯಾಪಾರ ವೃತ್ತಿ ಜೀವನ ಇರಬಹುದು. ಕಷ್ಟಗಳು ಬಂದಾಗ ಹಿಂಜರಿಯುವುದಕ್ಕೆ ಹೋಗಬೇಡಿ ಹಾಗೂ ಯಾವುದೇ ರೀತಿಯ ಅರ್ಜೆಂಟಿನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ ಅದು ನಿಮ್ಮ ವಿರುದ್ಧ ಕೆಲಸ ಮಾಡಬಹುದಾಗಿದೆ. ದೂರ ದೂರ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾಗಿ ಬರಬಹುದು ಆದರೆ ಯಾವುದು ಕೂಡ ಲಾಭ ನೀಡುವುದಿಲ್ಲ ಬದಲಾಗಿ ನಿಮ್ಮ ಖರ್ಚನ್ನು ಹೆಚ್ಚು ಮಾಡುತ್ತದೆ. ಹಣದ ವಿಚಾರದ ಬಗ್ಗೆ ಯಾವುದೇ ರೀತಿಯ ಹೊಸ ದೊಡ್ಡ ಮಟ್ಟದ ಯೋಜನೆಗಳನ್ನು ಪ್ರಾರಂಭ ಮಾಡಬೇಡಿ ಸ್ವಲ್ಪಮಟ್ಟಿಗೆ ಮುಂದೂಡಿ. ಯಾವುದೇ ಯೋಜನೆಗಳನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಅದರ ಸಾಧಕ ಬಾದಕಗಳನ್ನು ನೀವು ಸರಿಯಾದ ರೀತಿಯಲ್ಲಿ ಯೋಚಿಸಿ ಅವುಗಳನ್ನು ತಡೆಯೋದಕ್ಕೆ ನಿಮ್ಮ ಕೈಯಲ್ಲಿ ಸಾಧ್ಯವಾದರೆ ಮಾತ್ರ ಪ್ರಾರಂಭಿಸಿ.

ಮೀನ ರಾಶಿ(Pisces)

ಈ ಸಮಯದಲ್ಲಿ ಮೀನ ರಾಶಿಯವರು ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಬರುವಂತಹ ಹಣ ಅವರ ಖರ್ಚುಗಳಿಗೆ ಸರಿಹೋಗುತ್ತದೆ. ಯಾವುದೇ ರೀತಿಯಲ್ಲಿ ಹೆಚ್ಚಿನ ಉಳಿತಾಯವನ್ನು ಮಾಡುವುದಕ್ಕೆ ಮೀನ ರಾಶಿಯವರಿಗೆ ಸಾಧ್ಯವಾಗಿರುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಯಾವತ್ತೂ ಕೂಡ ನಿಮ್ಮ ಎಚ್ಚರ ತಪ್ಪಬೇಡಿ ಯಾಕೆಂದರೆ ಸ್ವಲ್ಪ ಮಟ್ಟಿಗೆ ಯಾಮಾರಿದ್ರೂ ಕೂಡ ಸಹೋದ್ಯೋಗಿಗಳ ಜೊತೆಗೆ ಜಗಳ ಆಡಿ ಕೆಲಸವನ್ನು ಕಳೆದುಕೊಳ್ಳುವಂತಹ ಸಾಧ್ಯತೆ ಕೂಡ ಇದೆ. ಇನ್ನು ಹೊಸ ವ್ಯಾಪಾರ ವ್ಯವಹಾರವನ್ನು ಮಾಡಬೇಕು ಎನ್ನುವಂತಹ ನಿಮಗೆ ಹೇಳುವಂತಹ ಉತ್ತಮ ಸಲಹೆ ಏನೆಂದರೆ ಸ್ವಲ್ಪ ದಿನ ಹೋದ ನಂತರ ಹಣ ಹೂಡಿಕೆ ಮಾಡಿ ವ್ಯಾಪಾರವನ್ನು ಪ್ರಾರಂಭಿಸಬಹುದಾಗಿದೆ ಸದ್ಯಕ್ಕಂತು ಬೇಡ.

ವೃಶ್ಚಿಕ ರಾಶಿ(Scorpion)

ಕೆಲಸದಲ್ಲಿ ನೀವು ನಿಜಕ್ಕೂ ಕೂಡ ಉತ್ತಮ ಕೆಲಸವನ್ನು ತೋರಿಪಡಿಸುತ್ತೀರಿ ಆದರೆ ನಿಮ್ಮ ಮೇಲಾಧಿಕಾರಿಗಳಿಗೆ ನೀವು ಮಾಡುವಂತಹ ಕೆಲಸದಲ್ಲಿ ಸಂತುಷ್ಠಿ ಸಿಗೋದಿಲ್ಲ ಎನ್ನುವ ಕಾರಣಕ್ಕಾಗಿ ನಿಮ್ಮ ಮೇಲೆ ಇನ್ನಷ್ಟು ಒತ್ತಡ ಹೇರುತ್ತಾರೆ. ಈ ಸಮಯದಲ್ಲಿ ಆ ಕೆಲಸವನ್ನು ಬಿಟ್ಟುಬಿಡಬೇಕು ಎನ್ನುವಂತಹ ಯೋಚನೆ ನಿಮ್ಮ ಬಳಿ ಬರಬಹುದು ಆದರೆ ಆದಷ್ಟು ತಾಳ್ಮೆಯಿಂದ ಈ ಸಂದರ್ಭದಲ್ಲಿ ಮುಂದುವರೆಯಿರಿ. ಹಣಗಳಿಸುವ ವಿಚಾರದಲ್ಲಿ ಕೂಡ ಸಾಕಷ್ಟು ಹಿನ್ನಡೆಯನ್ನು ಕಾಣಲಿರುವಂತಹ ನೀವು ಖರ್ಚನ್ನು ನೋಡಿಕೊಂಡು ಮಾಡಿ.

Comments are closed.