LPG Gas: ಕೇಂದ್ರ ಸರ್ಕಾರದಿಂದ ಎಲ್ ಪಿಜಿ ಇರುವ ಮನೆಗಳಿಗೆ ಹೊಸ ಸೂಚನೆ! ನಿಮಗೂ ಅನ್ವಯವಾಗುತ್ತೆ ನೋಡಿ!

LPG Gas: ಭಾರತ ದೇಶದಲ್ಲಿ ಮಹಿಳೆಯರು ನಿಮಗೆಲ್ಲರಿಗೂ ಗೊತ್ತಿರಬಹುದು ಸೌದೆ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ದಿನವಿಡೀ ಹೊಗೆಯಿಂದ ಆರೋಗ್ಯ ಸಮಸ್ಯೆಯನ್ನು ತಂದುಕೊಳ್ಳಬೇಕಾಗಿತ್ತು ಆದರೆ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಉಜ್ವಲ ಯೋಜನೆ ಜಾರಿಗೆ ಬಂದ ನಂತರ ಎಲ್ಲರಿಗೂ ಎಲ್ಪಿಜಿ ಕನೆಕ್ಷನ್ ಸಿಗುವಂತಹ ಯೋಗ ಮೂಡಿಬಂದಿದೆ. ಈಗ ಗ್ಯಾಸ್ ನಿಂದಲೇ ಅಡುಗೆ ಮಾಡಿ ಮನೆ ಮಂದಿ ಊಟ ಮಾಡುವಂತಹ ಸಂತೋಷದ ಗಳಿಗೆ ಕಂಡುಬರುತ್ತದೆ. ಉಜ್ವಲ ಯೋಜನೆ ಅಡಿಯಲ್ಲಿ ದೇಶದ 75 ಲಕ್ಷಕ್ಕೂ ಹೆಚ್ಚಿನ ಮನೆಗಳಲ್ಲಿ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ಸಿಕ್ಕಿದೆ.

ಸಿಲಿಂಡರ್ ಬಳಸುವಾಗ ಕಾಣುವಂತ ತೊಂದರೆಗಳು

ಮನೆಯಲ್ಲಿ ಎಲ್ಪಿಜಿ ಸಿಲಿಂಡರ್ ಬಳಸಿ ಅಡುಗೆ ಮಾಡುವುದರಿಂದಾಗಿ ನಿಮ್ಮ ಸಮಯ ಉಳಿಯುತ್ತದೆ ನಿಜ ಆದರೆ ಈ ಸಂದರ್ಭದಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಬಳಸಿಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಯಾಕೆಂದರೆ ಎಲ್‌ಪಿಜಿ ಬಳಸಿಕೊಂಡು ಅಡುಗೆ ಮಾಡುವುದು ಕೂಡ ಅಪಾಯದಿಂದ ನಿಮ್ಮನ್ನು ದೂರಕ್ಕೆ ಹೋಗುವಂತೆ ಮಾಡುವುದಿಲ್ಲ.

ಈ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗಿ ಬರಬಹುದು. ಎಲ್ಪಿಜಿ ಬಳಕೆಯನ್ನು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದ್ದು ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಮಾತ್ರ ಎಲ್ಲರಿಗೂ ಕ್ಷೇಮ. ಸಣ್ಣ ತಪ್ಪು ನಡೆದರೂ ಅಥವಾ ಯಾಮಾರಿದ್ರೂ ಕೂಡ ದೊಡ್ಡ ಅನಾಹುತ ಆಗುವಂತಹ ಸಾಧ್ಯತೆ ಕೂಡ ಇರುತ್ತೆ.

ಸಿಲಿಂಡರ್ ನಲ್ಲಿ Expiry Date ನೋಡ್ಕೊಳ್ಬೇಕು

ಮುಕ್ತಾಯದ ದಿನಾಂಕದ ನಂತರ ಕೂಡ ಎಲ್ಪಿಜಿ ಸಿಲಿಂಡರ್ ಗ್ಯಾಸ್ ಅನ್ನು ನೀವು ಬಳಕೆ ಮಾಡುತ್ತಿದ್ದರೆ ಸಾಕಷ್ಟು ದೊಡ್ಡ ಮಟ್ಟದ ಅನಾಹುತವನ್ನು ನೀವು ಆಹ್ವಾನ ಮಾಡಿಕೊಳ್ಳುತ್ತಿದ್ದೀರಿ ಎಂಬುದಾಗಿ ಅರ್ಥ ಆಗಿರುತ್ತದೆ. ಹಾಗಿದ್ರೆ ಮುಕ್ತಾಯದ ದಿನಾಂಕವನ್ನು ಅಥವಾ ತಿಂಗಳನ್ನು ಯಾವ ರೀತಿಯಲ್ಲಿ ತಿಳಿದುಕೊಳ್ಳುವುದು ಅನ್ನೋದಕ್ಕೆ ಕೂಡ ನಿಮಗೆ ಮಾಹಿತಿಯನ್ನು ಒದಗಿಸುತ್ತೇವೆ ಬನ್ನಿ.

A- ಅಂದ್ರೆ ಜನವರಿಯಿಂದ ಮಾರ್ಚ್ ತಿಂಗಳು
B- ಏಪ್ರಿಲ್ ನಿಂದ ಜೂನ್ ತಿಂಗಳು
C- ಜುಲೈನಿಂದ ಸೆಪ್ಟೆಂಬರ್ ತಿಂಗಳು
D – ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಾಗಿದೆ

ಉದಾಹರಣೆಗೆ ಒಂದು ವೇಳೆ A-25 ಅಂದರೆ 2025 ರ ಜನವರಿಯಿಂದ ಮಾರ್ಚ್ ತಿಂಗಳ ಒಳಗೆ ಇದರ ಮುಕ್ತಾಯದ ದಿನಾಂಕ ಮುಗಿಯುತ್ತದೆ ಹಾಗೂ ಆ ಸಂದರ್ಭದಲ್ಲಿ ಸೂಚಕವಾಗಿರುತ್ತದೆ. ಇದನ್ನ ಬದಲಾವಣೆ ಮಾಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ನೀವು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಬೇಕಾದ ಸಾಧ್ಯತೆ ಇರುತ್ತದೆ. ಎಲ್ಪಿಜಿ ಬಳಕೆಯನ್ನು ಸಾಕಷ್ಟು ನಿಗಾವಹಿಸಿ ಮಾಡಬೇಕಾಗಿರುತ್ತದೆ ಹೀಗಾಗಿ ಈ ವಿಚಾರವನ್ನು ಮನೆಯಲ್ಲಿ ಹಿರಿಯರು ಅದರಲ್ಲೂ ವಿಶೇಷವಾಗಿ ತಾಯಂದಿರು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹೀಗಾಗಿ ಈ ಮಾಹಿತಿಯನ್ನು ಅವರಿಗೆ ಶೇರ್ ಮಾಡುವುದನ್ನು ಮರೆಯಬೇಡಿ.

Comments are closed.