Sandalwood: ಮೂರು ಮದ್ವೆ ಆದ ಸ್ಯಾಂಡಲ್ ವುಡ್ ಬ್ಯೂಟಿ ಲಕ್ಷ್ಮಿ ಈಗಿನ್ ಪತಿ ಬಗ್ಗೆ ಹೀಗ್ ಯಾಕ್ ಹೇಳಿದ್ರು? ಲಕ್ಷ್ಮಿ ಬಿಚ್ಚಿಟ್ಟ ಸಂಸಾರದ ಗುಟ್ಟು!

Sandalwood: ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ನಟಿಸಿರುವಂತಹ ಬಹುಭಾಷ ತಾರೆಯಾಗಿರುವಂತಹ ಲಕ್ಷ್ಮಿ ಅಮ್ಮನವರ ಬಗ್ಗೆ ನಿಮಗೆ ತಿಳಿದಿದೆ. 70 ಹಾಗೂ 80ರ ದಶಕದಲ್ಲಿ ದಕ್ಷಿಣಭಾರತ ಚಿತ್ರರಂಗದಲ್ಲಿ ಲಕ್ಷ್ಮಿ ಅವರು ಅತ್ಯಂತ ಬಹು ಬೇಡಿಕೆ ನಾಯಕ ನಟಿಯಾಗಿದ್ದರು. ಒಟ್ಟಾರೆಯಾಗಿ 400 ಕ್ಕೂ ಅಧಿಕ ಸಿನಿಮಾಗಳಲ್ಲಿ ಲಕ್ಷ್ಮಿ ಅವರು ಕಾಣಿಸಿಕೊಂಡಿದ್ದಾರೆ. ಈಗ ವಯಸ್ಸಾಗಿದ್ರೂ ಕೂಡ ಪೋಷಕನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಲಕ್ಷ್ಮಿ ಅವರ ವೈಯಕ್ತಿಕ ಜೀವನ ಮಾತ್ರ ಸ್ವಲ್ಪ ಮಟ್ಟಿಗೆ ಬೇಸರ ತರುವಂತೆ ಇತ್ತು.

ಲಕ್ಷ್ಮಿ ಅವರು ಮೊದಲಿಗೆ ಭಾಸ್ಕರನ್ ಎನ್ನುವವರನ್ನು ಮದುವೆಯಾಗುತ್ತಾರೆ ಅವರಿಂದ ಐಶ್ವರ್ಯ ಭಾಸ್ಕರನ್ ಎನ್ನುವಂತಹ ಮಗಳನ್ನು ಪಡೆಯುತ್ತಾರೆ. ಅವರಿಗೆ ವಿವಾಹ ವಿಚ್ಛೇದನ ನೀಡಿದ ನಂತರ ಮೋಹನ್ ಶರ್ಮ ಎನ್ನುವವರನ್ನು ಲಕ್ಷ್ಮಿ ಅವರು ಎರಡನೇ ಮದುವೆಯಾಗುತ್ತಾರೆ. ಇವರ ಜೊತೆಗೆ ಕೂಡ ಮದುವೆ ಸಂಬಂಧ ಮುರಿದು ಬಿದ್ದು ನಂತರ ಶಿವಚಂದ್ರನ್ ಎನ್ನುವ ನಿರ್ದೇಶಕರನ್ನು ಮದುವೆಯಾಗುತ್ತಾರೆ. ಮಗಳೊಬ್ಬಳನ್ನು ದತ್ತು ಪಡೆದುಕೊಂಡಿದ್ದಾರೆ.

ತಮ್ಮ ಮೊದಲ ಗಂಡ ಭಾಸ್ಕರನ್ ರವರನ್ನು ಮದುವೆ ಆಗುವಾಗ ಲಕ್ಷ್ಮಿ ಅವರಿಗೆ 17 ವರ್ಷ ವಯಸ್ಸು ಹಾಗೂ ಮಗಳು ಜನಿಸುವಾಗ 19 ವರ್ಷ ವಯಸ್ಸು. ಅದಾದ ನಂತರ ಅವರಿಗೆ ಸಿನಿಮಾ ಅವಕಾಶಗಳು ಹೆಚ್ಚಾಗಲು ತೊಡಗಿದವು ಹಾಗೂ ಗಂಡನಿಂದ ಸಿನಿಮಾದಲ್ಲಿ ನಟಿಸುವುದಕ್ಕೆ ಅಡ್ಡಿಯಾಗುತ್ತಿದ್ದ ಕಾರಣದಿಂದಾಗಿ ಹಾಗೂ ಹೆಣ್ಣು ಮಗಳ ವಿಚಾರದಲ್ಲಿ ಕೂಡ ನೋಡಿಕೊಳ್ಳದ ಕಾರಣದಿಂದಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳಬೇಕಾಗಿ ಬಂದಿತು.

ಎರಡನೇ ಬಾರಿಗೆ ಮೋಹನ್ ಶರ್ಮ ಅವರ ಜೊತೆಗೆ ಮದುವೆ ಆಗೋದಕ್ಕಿಂತ ಮುಂಚೆ ಅವರ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಹೊರಗೆ ಸುತ್ತಾಡೋಕೆ ಹೋಗಿದ್ದು ಸಂದರ್ಭದಲ್ಲಿ ಇಬ್ರು ದೈಹಿಕವಾಗಿ ಮೊದಲಿಗೆ ಬೆರೆತಿರುವುದನ್ನು ಕೂಡ ಮೋಹನ್ ಶರ್ಮ ಇಂಟರ್ವ್ಯೂನಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಲವೊಂದು ಮಾಹಿತಿಗಳ ಪ್ರಕಾರ ಲಕ್ಷ್ಮಿ ಅವರಿಗೆ ಮೋಹನ್ ಶರ್ಮ ರವರ ಅಹಂಕಾರದ ವಿರುದ್ಧ ನಾನು ಸೋಲಬಾರದು ಎನ್ನುವ ಕಾರಣಕ್ಕಾಗಿ ಮದುವೆ ಆದ ಮೇಲೆ ಬಂದಂತಹ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ವಿವಾಹವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎನ್ನುವಂತಹ ಮಾತುಗಳು ಕೂಡ ಕೇಳಿ ಬರುತ್ತದೆ.

ಸದ್ಯಕ್ಕೆ ಶಿವಚಂದ್ರ ಅವರನ್ನು ಮದುವೆಯಾಗಿರುವಂತಹ ಲಕ್ಷ್ಮಿ ಅವರು ಉತ್ತಮವಾದ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದು ಸದ್ಯಕ್ಕೆ ಆಗಾಗ ಕೆಲವೊಂದು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಲಕ್ಷ್ಮಿಯವರ ನಟನ ಜೀವನವನ್ನು ನೋಡಿದರೆ ಖಂಡಿತವಾಗಿ ಯಾರಿಗೂ ಕೂಡ ಅವರ ವೈಯಕ್ತಿಕ ಜೀವನದಲ್ಲಿ ಈ ರೀತಿಯಾಗಿ ಮೂರು ಮದುವೆಯಾಗಿದ್ದಾರೆ ಅಥವಾ ದಾಂಪತ್ಯ ಜೀವನದಿಂದ ಬಳಲಿ ಹೋಗಿದ್ದಾರೆ ಅನ್ನೋದು ತಿಳಿದುಬರುವುದಿಲ್ಲ. ಈ ವಿಚಾರವನ್ನು ನೋಡಿದ್ರೆ ಸಾಕಷ್ಟು ಜನರು ಲಕ್ಷ್ಮಿ ಅವರ ಜೀವನದಲ್ಲಿ ಈ ರೀತಿ ಆಗಿರಬಹುದು ಅಂತ ನಂಬೋಕೆ ಕೂಡ ರೆಡಿಯಾಗಿರುವುದಿಲ್ಲ.

Comments are closed.