Rajkumar: ರಾಜಕುಮಾರ್ ಅವರ ಕಂಪನಿ ಸಿನಿಮಾದಲ್ಲಿ ನಟನೆ ಮಾಡಿದ್ರೂ ನಟಿ ಆರತಿ ಊಟ ಮಾತ್ರ ಮಾಡ್ತಿರ್ಲಿಲ್ಲ ಯಾಕೆ ಗೊತ್ತಾ? ಪರದೆ ಹಿಂದಿನ ಸತ್ಯ ಬಿಚ್ಚಿಟ್ಟ ನಟಿ!

Rajkumar: ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದ ಜೋಡಿಗಳಲ್ಲಿ ರಾಜಕುಮಾರ್ ಹಾಗೂ ಆರತಿ ಜೋಡಿ ಕೂಡ ಒಂದಾಗಿದೆ. ಈ ಜೋಡಿ ಇಂದ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳು ಕೂಡ ಬಿಡುಗಡೆಯಾಗಿ. ರಾಜಕುಮಾರ್ ಅವರ ಜೊತೆಗೆ ನಾಯಕಿಯಿಂದ ಹಿಡಿದು ಯಾವುದೇ ಸಣ್ಣಪುಟ್ಟ ಪಾತ್ರಗಳು ಇದ್ದರೂ ಕೂಡ ಆರತಿ ಅವರು ಒಪ್ಪಿಕೊಂಡು ಮಾಡುತ್ತಿದ್ದರು ಎಂಬುದಾಗಿ ಕೂಡ ಹಿರಿಯ ಪತ್ರಕರ್ತರು ಹೇಳಿಕೊಳ್ಳುತ್ತಾರೆ. ಇನ್ನು ಇದೇ ವಿಚಾರದ ಬಗ್ಗೆ ಮಾತನಾಡುತ್ತಾ ಹಿರಿಯ ಪತ್ರಕರ್ತರೊಬ್ಬರು ನಟಿ ಆರತಿ ಅವರು ರಾಜಕುಮಾರ್ ಅವರ ಸಿನಿಮಾ ಪ್ರೊಡಕ್ಷನ್ ಸೆಟ್ ನಲ್ಲಿ ಊಟ ಮಾಡುವುದನ್ನು ಬಿಟ್ಟಿರುವ ಹಿಂದಿನ ಕಥೆಯನ್ನು ಹೇಳಿದ್ದು ಬನ್ನಿ ಅದನ್ನ ಸಂಪೂರ್ಣ ವಿವರವಾಗಿ ತಿಳಿಯೋಣ.

ರಾಜಕುಮಾರ್ ಅವರ ಸಿನಿಮಾ ನಿರ್ಮಾಣ ಸಂಸ್ಥೆಯ ಸೆಟಿನಲ್ಲಿ ಆರತಿ ಊಟ ಮಾಡೋದನ್ನ ಬಿಟ್ಟಿದ್ಯಾಕೆ?

ರಾಜಕುಮಾರ್ ಅವರ ಸಿನಿಮಾ ಚಿತ್ರೀಕರಣ ಇದೆ ಅಂದ್ರೆ ಹಾಗೂ ಅವರ ಪ್ರೊಡಕ್ಷನ್ ಹೌಸ್ ನಲ್ಲಿ ಅದು ನಿರ್ಮಾಣ ಆಗ್ತಿದೆ ಅಂದ್ರೆ ಅಲ್ಲಿ ಎಲ್ಲರೂ ಕೂಡ ಸಮಾನವಾಗಿ ಕುಳಿತು ಊಟ ಮಾಡ್ತಾ ಇದ್ರು. ರಾಜಕುಮಾರ್ ಅವರ ಜೊತೆಗೆ ಪ್ರತಿಯೊಬ್ಬರೂ ಕುಳಿತುಕೊಂಡು ಊಟ ಮಾಡುವ ಅವಕಾಶ ಸಿಕ್ತಾ ಇತ್ತು ಆದರೆ ಆರತಿ ಅವರು ಮಾತ್ರ ರಾಜಕುಮಾರ್ ಅವರ ಜೊತೆಗೆ ಒಟ್ಟಿಗೆ ಕುಳಿತುಕೊಂಡು ಊಟ ಮಾಡಲು ನಿರಾಕರಿಸುತ್ತಿದ್ದರು.

ಯಾಕೆಂದ್ರೆ ಬೇರೆ ಸಂದರ್ಭದಲ್ಲಿ ಆರತಿಯವರು ಊಟ ಮಾಡಿರುವುದನ್ನು ರಾಜಕುಮಾರ್ ಅವರು ನೋಡಿದ್ರು “ನಮ್ಮ ಜೊತೆಗೆ ಮಾತ್ರ ಯಾಕೆ ಊಟ ಮಾಡ್ತಾ ಇಲ್ಲ” ಅನ್ನೋದಾಗಿ ತುಂಬಾ ದಿನಗಳ ಕಾಲ ಕೇಳಿದಾಗ, “ಅಣ್ಣ ನೀವು ಊಟ ಮಾಡುತ್ತಿದ್ದೀರಿ ಅಂದ್ರೆ ಇಲ್ಲಿ ನಾನ್ ವೆಜ್ ಊಟ ಇರುತ್ತದೆ ನನಗೆ ನಾನ್ ವೆಜ್ ನೋಡಿದ್ರು ಕೂಡ ಆಗೋದಿಲ್ಲ ನಾನು ಪ್ಯೂರ್ ವೆಜ್ ಹೀಗಾಗಿಯೇ ಎಲ್ಲಿ ಹತ್ತಿರದಲ್ಲಿರುವಂತಹ ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆ” ಅನ್ನೋದಾಗಿ ಅವರು ಹೇಳ್ತಾರೆ. ಇದನ್ನು ಕೇಳಿದರೆ ರಾಜಕುಮಾರವರು ಆರತಿ ಅವರು ಇರೋವರೆಗೂ ಕೂಡ ಸೆಟ್ ನಲ್ಲಿ ವೆಜ್ ಊಟ ಮಾತ್ರ ಇರಬೇಕು ಅನ್ನೋದಾಗಿ ಹೇಳ್ತಾರೆ.

ಅಷ್ಟರಮಟ್ಟಿಗೆ ನಮ್ಮೆಲ್ಲರ ನೆಚ್ಚಿನ ರಾಜಕುಮಾರ್ ಅವರು ಮಹಿಳೆಯರಿಗೆ ಗೌರವ ಹಾಗೂ ಆದರವನ್ನು ತೋರಿಸುತ್ತಿದ್ದರು. ಅನ್ನೋದನ್ನ ನೀವು ಈ ಘಟನೆಯ ಮೂಲಕ ತಿಳಿದುಕೊಳ್ಳಬಹುದಾಗಿದೆ. ರಾಜಕುಮಾರ್ ಅವರು ಕೇವಲ ಸಿನಿಮಾ ಲೋಕಕ್ಕೆ ಮಾತ್ರ ತಮ್ಮ ಕೊಡುಗೆಗಳನ್ನು ನೀಡುವುದು ಮಾತ್ರವಲ್ಲದೆ ತಮ್ಮ ನಿಜ ಹಾಗೂ ತೆರೆಯ ಮೇಲಿನ ಜೀವನದ ಮೂಲಕ ಉತ್ತಮ ಆದರ್ಶಗಳನ್ನು ಕೂಡ ಸಮಾಜಕ್ಕೆ ಸಾರುವಂತ ಕೆಲಸವನ್ನು ಮಾಡಿದ್ದಾರೆ. ರಾಜಕುಮಾರ್ ರವರ ಸಿನಿಮಾ ಜೀವನದ ಈ ರೀತಿಯ ಸಾಕಷ್ಟು ಘಟನೆಗಳು ಪ್ರೇಕ್ಷಕರಿಗೆ ತಿಳಿದಿಲ್ಲ. ನಿಜಕ್ಕೂ ಕೂಡ ರಾಜಕುಮಾರ್ ರವರು ಬಂಗಾರದ ಮನುಷ್ಯ ಎನ್ನುವ ಹೆಸರಿಗೆ ಸರಿಹೊಂದುವ ವ್ಯಕ್ತಿತ್ವವನ್ನು ಹೊಂದಿದ್ದಾರೆ.

Comments are closed.