JIO: ಜಿಯೋ ಸಿಮ್ ಇರೋರೇ ಲಕ್ಕಿ ಕಣ್ರೀ; ಘೋಷಣೆ ಆಯ್ತು ಮತ್ತೊಂದು ಬಿಗ್ ಆಫರ್; ಏನದು ನೋಡಿ!

JIO: ಜಿಯೋ ಸಂಸ್ಥೆ ಟೆಲಿಕಾಂ ಇಂಡಸ್ಟ್ರಿಯಲ್ಲಿ ಕಾಲಿಟ್ಟ ನಂತರ ಯಾವ ರೀತಿಯಲ್ಲಿ ಭಾರತದ ಟೆಲಿಕಾಂ ಇಂಡಸ್ಟ್ರಿ ಬದಲಾಗಿದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಮೊದಲು ಜಿಯೋ ಸಿಮ್ ಅನ್ನು ಅನುಮಾನದಿಂದ ನೋಡುತ್ತಿದ್ದವರು ಈಗ ಪ್ರತಿಯೊಬ್ಬರೂ ಕೂಡ ಅದೇ ಸಿಮ್ ಅನ್ನು ಬಳಸುತ್ತಿದ್ದಾರೆ. ಜನಪ್ರಿಯವಾಗಿರುವ ಐಪಿಎಲ್ ಅನ್ನು ಕೂಡ ಜಿಯೋ ಉಚಿತವಾಗಿ ನೋಡುವುದಕ್ಕೆ ವ್ಯವಸ್ಥೆ ಮಾಡಿಕೊಟ್ಟಿದೆ. ಇಷ್ಟೊಂದು ಯಶಸ್ವಿಯಾಗಿ ವೇಗವಾಗಿ ಬೆಳೆದಿರುವ ಮತ್ತೊಂದು ಬ್ರಾಂಡ್ ಭಾರತದ ಯಾವ ಇಂಡಸ್ಟ್ರಿಯಲ್ಲಿ ಕೂಡ ಇಲ್ಲ. ಜಿಯೋ ಸಾಕಷ್ಟು ಅಪ್ಲಿಕೇಶನ್ಗಳನ್ನು ಕೂಡ ತನ್ನ ಹೆಸರಿನಲ್ಲಿ ಲಾಂಚ್ ಮಾಡುವ ಮೂಲಕ ಗ್ರಾಹಕರಿಗೆ ರಿಚಾರ್ಜ್ ಜೊತೆಗೆ ಉಚಿತ ಸೇವೆಗಳನ್ನು ಕೂಡ ನೀಡುವುದರ ಮೂಲಕ ಭಾರತದ ಅತ್ಯಂತ ಫೇವರೇಟ್ ಟೆಲಿಕಾಂ ಬ್ರಾಂಡ್ ಆಗಿದೆ ಜಿಯೋ.

ಜಿಯೋ ಸಂಸ್ಥೆ ಆದಾಯ

ಜಿಯೋ ಸಂಸ್ಥೆ ಈ ಐಪಿಎಲ್ ಸಂದರ್ಭದಲ್ಲಿ ಸಾಕಷ್ಟು ಜನಪ್ರಿಯವಾಗಲು ಮತ್ತೊಂದು ಕಾರಣ ಅಂದ್ರೆ ಐಪಿಎಲ್ ಪ್ರಸಾರವನ್ನು ಕೂಡ ಜಿಯೋ ಸಿನಿಮಾ ಅಪ್ಲಿಕೇಶನ್ ನಲ್ಲಿ ಉಚಿತವಾಗಿ ತನ್ನ ಗ್ರಾಹಕರಿಗೆ ನೀಡುತ್ತಿದೆ. ಇನ್ನು ಇದರಿಂದಲೂ ಕೂಡ ಜಿಯೋ ಸಂಸ್ಥೆ ಅಡ್ವಟೈಸ್ಮೆಂಟ್ ಪ್ರಸಾರ ಮಾಡುವ ಮೂಲಕ ಐಪಿಎಲ್ ನಿಂದ ಹಣವನ್ನು ಗಳಿಸುತ್ತಿದೆ. ಆದರೆ ಐಪಿಎಲ್ ಅನ್ನೋ ಜಿಯೋ ಸಿನಿಮಾದಲ್ಲಿ ನೋಡುವವರಿಗೂ ಕೂಡ ಪದೇ ಪದೇ ಜಾಹೀರಾತು ಬರುವ ಕಾರಣದಿಂದಾಗಿ ನೋಡೋದಕ್ಕೆ ಕೂಡ ಸ್ವಲ್ಪಮಟ್ಟಿಗೆ ಕಷ್ಟವಾಗುತ್ತಿದೆ ಎಂದು ಹೇಳುಬಹುದಾಗಿದೆ. ಜಿಯೋ ಸಿನಿಮಾದ ಮೂಲಕ ಐಪಿಎಲ್ ಅನ್ನು ಮೊಬೈಲ್ ನೋಡುತ್ತಿರುವವರಿಗೆ ಜಾಹೀರಾತು ಹೆಚ್ಚಾಗಿ ನೋಡುವುದೇ ಸಮಸ್ಯೆ ಆಗಿಬಿಟ್ಟಿದೆ. ಇದಕ್ಕೂ ಕೂಡ ಪರಿಹಾರ ತಂದಿರುವಂತಹ ಜಿಯೋ ಸಂಸ್ಥೆ ಒಂದು ವೇಳೆ ಜಿಯೋ ತಂದಿರುವಂತಹ ಹೊಸ ಆಫರ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಂಡರೆ ಇನ್ಮುಂದೆ ಯಾವುದೇ ರೀತಿಯ ಜಾಹೀರಾತುಗಳನ್ನು ನೀವು ನೋಡಬೇಕಾದ ಅಗತ್ಯ ಇರುವುದಿಲ್ಲ.

ಹೊಸ ಆಫರ್

ವರ್ಷಕ್ಕೆ 999 ಅಥವಾ ತಿಂಗಳಿಗೆ 99 ರೂಪಾಯಿಗಳ ಹೊಸ ರಿಚಾರ್ಜ್ ಪ್ಲಾನ್ ಅನ್ನು ನೀವು ಮಾಡಿಕೊಂಡರೆ ಇನ್ಮುಂದೆ ಐಪಿಎಲ್ ನೋಡುವ ಸಂದರ್ಭದಲ್ಲಿ ಯಾವುದೇ ಜಾಹೀರಾತುಗಳನ್ನು ನೋಡುವ ಅಗತ್ಯ ಇರುವುದಿಲ್ಲ. ಈ ರಿಚಾರ್ಜ್ ಪ್ಲಾನ್ ಅನ್ನು ನೀವು ಸಬ್ಸ್ಕ್ರೈಬ್ ಮಾಡಿಕೊಳ್ಳುವ ಮೂಲಕ ಜಿಯೋ ಸಿನಿಮಾದಲ್ಲಿ ಜಾಹೀರಾತುರಹಿತ ಕಾರ್ಯಕ್ರಮಗಳನ್ನು ಆನಂದಿಸಬಹುದಾಗಿದೆ. ಒಂದು ವೇಳೆ ನೀವು ಕೂಡ ಇದೇ ಕಾಯುವಿಕೆಯಲ್ಲಿ ಇದ್ದರೆ ಕೂಡಲೇ ರಿಚಾರ್ಜ್ ಮಾಡಿ ಹಾಗೂ ಐಪಿಎಲ್ ಮ್ಯಾಚ್ಗಳನ್ನು ತಡೆರಹಿತವಾಗಿ ಆನಂದಿಸಿ. ಪ್ರತಿಯೊಬ್ಬ ಐಪಿಎಲ್ ಅಭಿಮಾನಿ ಕೂಡ ಜಿಯೋ ಸಂಸ್ಥೆ ಜಾರಿಗೆ ತಂದಿರುವ ಈ ತಡೆರಹಿತ ರಿಚಾರ್ಜ್ ಪ್ಲಾನ್ ಅನ್ನು ಬಳಸಿಕೊಂಡು ಯಾವುದೇ ಜಾಹೀರಾತು ಇಲ್ಲದೆ ಐಪಿಎಲ್ ಮ್ಯಾಚ್ಗಳನ್ನು ಆನಂದಿಸುವುದಕ್ಕೆ ಇಷ್ಟಪಡ್ತಾರೆ. ಸಾಕಷ್ಟು ಸಮಯಗಳಿಂದ ಕಾಯುತ್ತಿದ್ದ ಅಪ್ಡೇಟ್ ಕೊನೆಗೂ ಕೂಡ ಬಂದಿರೋದು ಐಪಿಎಲ್ ಅಭಿಮಾನಿಗಳಿಗೆ ಅದರಲ್ಲೂ ವಿಶೇಷವಾಗಿ ಜಿಯೋಗ್ರಾಹಕರಿಗೆ ಸಂತೋಷ ತಂದಿದೆ.

Comments are closed.