Ground Water: ತೆಂಗಿನಕಾಯಿ ಕೈಯಲ್ ಹಿಡ್ದು ನಿಜವಾಗ್ಲೂ ನೀರೆಲ್ಲಿದೆ ಅಂತ ಕಂಡುಹಿಡಿಯಬಹುದಾ? ಇದು ಸತ್ಯನೋ? ಅವೈಜ್ಞಾನಿಕವೋ?

Ground Water: ಸಾಕಷ್ಟು ಬಾರಿ ಊರಿನ ಕಡೆಗಳಲ್ಲಿ ನೀವು ಗಮನಿಸಿರಬಹುದು ಯಾರೇ ಆಗಲಿ ಬಾವಿ ಅಥವಾ ಬೋರ್ವೆಲ್ ತೋರಿಸಬೇಕು ಎಂದರೆ ಮೊದಲಿಗೆ ಅಲ್ಲಿ ತೆಂಗಿನಕಾಯಿಯನ್ನು ಇಟ್ಟು ಅದು ಯಾವ ದಿಕ್ಕಿನಲ್ಲಿ ತಿರುಗುತ್ತದೆಯೋ ಅಲ್ಲಿ ಭಾವಿ ಅಥವಾ ಬೋರ್ವೆಲ್ ತೋಡಿಸಿರುವುದನ್ನು ನೀವು ಗಮನಿಸಿರಬಹುದಾಗಿದೆ. ಇಂತಹ ಮುಂದುವರೆದ ಕಾಲದಲ್ಲೂ ಕೂಡ ಅದೇ ತಂತ್ರಜ್ಞಾನವನ್ನ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಜನರು. ಸಾಕಷ್ಟು ವೈಜ್ಞಾನಿಕ ಕ್ರಮಗಳು ಬಂದಿದ್ರು ಕೂಡ ಈ ಗ್ರಾಮಗಳನ್ನು ಹೆಚ್ಚಾಗಿ ಮಾಡುವುದು ಹೀಗಾಗಿ ಅವರು ಹೆಚ್ಚಾಗಿ ಮೊದಲಿನಿಂದಲೂ ಕೂಡ ಮಾಡಿಕೊಂಡು ಬಂದಿರುವಂತಹ ಸಂಪ್ರದಾಯವನ್ನೇ ಈಗಲೂ ಕೂಡ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ಸರಿ ಅಥವಾ ವೈಜ್ಞಾನಿಕ ಅನ್ನೋದು ಕೂಡ ತಿಳಿದುಕೊಳ್ಳಬೇಕಾಗಿರುವ ವಿಚಾರವಾಗಿದೆ.

ಸಾಮಾನ್ಯವಾಗಿ ಬಾವಿ ಹಾಗೂ ಬೋರ್ವೆಲ್ ತೋರಿಸುವುದಕ್ಕಿಂತ ಮುಂಚೆ ಈ ರೀತಿ ತೆಂಗಿನಕಾಯಿ ಹಾಗೂ ಕಡ್ಡಿ ಹಾಗೂ ಬಟ್ಟಲಿನಲ್ಲಿ ನೀರನ್ನು ಇಟ್ಟು ಪರೀಕ್ಷಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಈಗಲೂ ಕೂಡ ಭೂವಿಜ್ಞಾನಿಗಳನ್ನು ಈ ಕೆಲಸಕ್ಕಾಗಿ ಕರೆಯೋದುಂಟು. ಸೈನ್ಸ್ ಪ್ರಕಾರ ವೈಜ್ಞಾನಿಕವಾಗಿ ಕಂಡುಹಿಡಿಯುವದರಿಂದ ನೀರು ಎಲ್ಲಿದೆ ಎಂಬುದನ್ನು ಸರಿಯಾಗಿ ಕಂಡುಹಿಡಿಯಬಹುದು ಎಂಬುದಾಗಿ ಹೇಳಲಾಗುತ್ತದೆ. ಆದರೆ ಭೂ ವಿಜ್ಞಾನಿಗಳು ಕೂಡ ಈ ರೀತಿಯ ಸಾಂಪ್ರದಾಯಿಕ ವಿಧಾನಗಳಿಂದ ನೀರಿನ ಜಾಡನ್ನು ಕಂಡುಹಿಡಿಯುವುದು ಕೆಲವೊಂದು ಬಾರಿ ಪರಿಣಾಮಕಾರಿಯಾಗಿದೆ ಎಂಬುದಾಗಿ ಕೂಡ ಅವರು ಒಪ್ಪಿಕೊಳ್ಳುತ್ತಾರೆ.

ಇನ್ನು ಸಾಕಷ್ಟು ಕಡೆಗಳಲ್ಲಿ ಎಲ್ಲಾ ಕಡೆ ನೀರು ಇದ್ದೇ ಇರುತ್ತದೆ ಹೀಗಾಗಿ ವೈಜ್ಞಾನಿಕ ಅಥವಾ ಸಾಂಪ್ರದಾಯಕ ಎರಡು ವಿಧಾನಗಳಿಂದ ಕಂಡು ಹಿಡಿಯೋದಕ್ಕೆ ಪ್ರಯತ್ನಪಟ್ಟರು ಕೂಡ ನೀರು ಸಿಕ್ಕೇ ಸಿಗುತ್ತದೆ. ಇವರಲ್ಲಿ ಯಾವುದೇ ಕ್ರಮವನ್ನು ಪಾಲಿಸಿದರು ಕೂಡ ಬೋರ್ ಅಥವಾ ಬಾವಿಯನ್ನು ಕೊರೆಸುತ್ತಿರುವವರಿಗೆ ನೀರು ಖಂಡಿತವಾಗಿ ಸಿಕ್ಕೇ ಸಿಗುತ್ತದೆ. ಕೆಲವೊಮ್ಮೆ ನೀರು ಇಲ್ಲದ ಪ್ರದೇಶಗಳಲ್ಲಿ ವಿದ್ಯುತ್ ನಿರೋಧಕ ಮೀಟರ್ ಹಿಡಿದುಕೊಂಡು ಭೋವಿಜ್ಞಾನಿಗಳು ಮಾಡುವಂತಹ ಪ್ರಕ್ರಿಯೆಯಿಂದಾಗಿಯೇ ನೀರು ಎಲ್ಲಿದೆ ಎಂಬುದಾಗಿ ಕಂಡು ಹಿಡಿಯಲು ಸಾಧ್ಯವಾಗಿರುತ್ತದೆ.

ಅವಜ್ಞಾನಿಕ ವಿಧಾನಗಳಿಂದ ಈ ಸಂದರ್ಭದಲ್ಲಿ ಮಾಡುವಂತಹ ಕ್ರಮಗಳು ನೀರನ್ನು ಹುಡುಕಲು ಸಾಧ್ಯವಾಗದೇ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವೈಜ್ಞಾನಿಕ ವಿಧಾನಗಳಿಂದ ಕೆಲವೊಮ್ಮೆ ಮಾತ್ರ ನಂಬಲು ಸಾಧ್ಯವಾಗಿರುತ್ತದೆ ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ಅವರನ್ನು ನಂಬಿಕೊಂಡು ಬಾವಿ ಅಥವಾ ಬೋರ್ ತೋಡಿಸಲು ಸಾಧ್ಯವಿಲ್ಲ. ಸಾಕಷ್ಟು ವೈಜ್ಞಾನಿಕ ವಿಧಾನಗಳ ಮೂಲಕ ಭೂವಿಜ್ಞಾನಿಗಳು ಮಾತ್ರ ಈ ರೀತಿಯ ಸಂದರ್ಭಗಳಲ್ಲಿ ಸರಿಯಾದ ನೀರಿನ ಮೂಲ ಎಲ್ಲಿದೆ ಎಂಬುದನ್ನು ಹೇಳಬಹುದಾಗಿದೆ. ಈ ಮೂಲಕ ಸಾಂಪ್ರದಾಯಿಕ ವಿಧಾನಗಳು ಎಲ್ಲೋ ಕೆಲವು ಬಾರಿ ಮಾತ್ರ ಯಶಸ್ವಿಯಾದ ಫಲಿತಾಂಶಗಳನ್ನು ನೀಡುತ್ತದೆ ಆದರೆ ಪರಿಪಕ್ವ ಪರ್ಫೆಕ್ಟ್ ಪರಿಣಾಮಗಳಿಗಾಗಿ ನೀವು ಭೂವಿಜ್ಞಾನಿಗಳನ್ನೆ ಈ ಕೆಲಸಕ್ಕಾಗಿ ಸಂಪರ್ಕಿಸಬೇಕಾಗುತ್ತದೆ.

Comments are closed.