Bathing: ಮೈಮೇಲೆ ಬಟ್ಟೆ ಇಲ್ಲದೆ ಹಾಗೇ ಸ್ನಾನ ಮಾಡಬಾರದಂತೆ; ಜ್ಯೋತಿಷ್ಯ ಶಾಸ್ತ್ರ ಹೇಳೋ ಮಾತೇ ಬೇರೆ!

Bathing: ಪ್ರತಿದಿನದ ಚಟುವಟಿಕೆಗಳಲ್ಲಿ ನಾವು ಬೆಳಗ್ಗೆಯಿಂದ ಪ್ರಾರಂಭಿಸಿ ರಾತ್ರಿ ತನಕ ಬೇರೆ ಬೇರೆ ಕೆಲಸಗಳನ್ನು ಮಾಡುತ್ತೇವೆ. ಇನ್ನು ವಿಶೇಷವಾಗಿ ಸ್ನಾನದ ಬಗ್ಗೆ ಮಾತನಾಡುವುದಾದರೆ ಸಾಕಷ್ಟು ಜನರು ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಬೇಕು, ಕೆಲವು ಮಹಿಳೆಯರಂತೂ ಸ್ನಾನ ಮಾಡದೇ ಅಡುಗೆ ಮನೆಗೆ ಕೂಡ ಪ್ರವೇಶಿಸುವುದಿಲ್ಲ. ಸ್ನಾನ ಮಾಡುವುದರಿಂದ ಪ್ರತಿಯೊಬ್ಬರ ದೇಹ ಹಾಗೂ ಮನಸ್ಸು ಎರಡು ಕೂಡ ಸ್ವಚ್ಛ ಹಾಗೂ ನಿರಾಳವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸ್ನಾನ ಮಾಡುವ ಬಗ್ಗೆ ಕೂಡ ಸರಿಯಾದ ಮಾಹಿತಿಗಳನ್ನು ನೀಡಲಾಗಿದ್ದು ಯಾವ ರೀತಿ ಸ್ನಾನ ಮಾಡಿದರೆ ವಿಧಾನ ಸರಿಯಾಗಿರುತ್ತದೆ ಎನ್ನುವುದರ ಬಗ್ಗೆ ಕೂಡ ಮಾಹಿತಿ ನೀಡಲಾಗಿದೆ.

ಶಾಸ್ತ್ರಗಳ ಪ್ರಕಾರ ಸ್ನಾನ ಮಾಡುವ ಸರಿಯಾದ ವಿಧಾನ

ಸಂಪೂರ್ಣವಾಗಿ ಬಟ್ಟೆ ಹಾಕದೆ ಸ್ನಾನ ಮಾಡಿದರೆ ಜೀವನದಲ್ಲಿ ಬೇರೆ ಬೇರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹೆಚ್ಚು ಹೊತ್ತು ಸಂಪೂರ್ಣವಾಗಿ ನಗ್ನ ವಾಗಿದ್ದರೆ ಆ ಸಂದರ್ಭದಲ್ಲಿ ಮನೆಗೆ ದುಷ್ಟಶಕ್ತಿಗಳು ಕಾಲಿಡುತ್ತವೆ ಹಾಗೂ ಮನೆಯಲ್ಲಿರುವಂತಹ ನೆಮ್ಮದಿಯನ್ನು ಹಾಳು ಮಾಡುತ್ತವೆ ಎಂಬುದಾಗಿ ಹೇಳಲಾಗುತ್ತದೆ ಇದೇ ಕಾರಣಕ್ಕಾಗಿ ಸ್ನಾನ ಮಾಡುವಾಗ ಕನಿಷ್ಠಪಕ್ಷ ಏನನ್ನಾದರೂ ಮೈಯಲ್ಲಿ ಧರಿಸಬೇಕಾಗಿರುತ್ತದೆ.

ಇನ್ನು ಕನಿಷ್ಠ ಪಕ್ಷ ಸ್ನಾನ ಮಾಡುವಾಗ ಒಳಉಡುಪನ್ನಾದರೂ ಧರಿಸದೆ ಹೋದಲ್ಲಿ ಸಂಪತ್ತು ಹಾಗೂ ಸಮೃದ್ಧಿ ಅಧಿದೇವತೆ ಆಗಿರುವಂತಹ ಲಕ್ಷ್ಮಿ ದೇವಿ ಕೂಡ ಕೋಪಗೊಳ್ಳುತ್ತಾಳೆ ಹಾಗೂ ಇದರಿಂದಾಗಿ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಕೂಡ ಮತ್ತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ. ಈ ಸಂದರ್ಭದಲ್ಲಿ ನೀವು ಬಟ್ಟೆಯಲ್ಲಿ ಸ್ನಾನ ಮಾಡಿದರೆ ಇದನ್ನು ನೋಡಿ ಪಿತೃಗಳು ಕೂಡ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ.

ಇನ್ನು ಕೇವಲ ಶಾಸ್ತ್ರಗಳ ಪ್ರಕಾರ ಮಾತ್ರವಲ್ಲದೆ ಸಾಮಾನ್ಯ ಜ್ಞಾನದ ಪ್ರಕಾರ ಮಾತನಾಡುವುದಾದರೂ ಕೂಡ ಈ ಹಿಂದೆ ಬಚ್ಚಲು ಮನೆಗಳಲ್ಲಿ ಕೆಲವೊಮ್ಮೆ ಕೀಟ ಅಥವಾ ಹಾವಿನಂತಹ ಜೀವಿಗಳು ಬರುತ್ತಿದ್ದವು. ಆ ಸಂದರ್ಭದಲ್ಲಿ ಕೂಡಲೇ ಹೊರಗೆ ಓಡಿ ಬರಲು ಕೂಡ ಸಾಧ್ಯವಾಗುವುದಿಲ್ಲ ಯಾಕೆಂದರೆ ನೀವು ಮೈ ಮೇಲೆ ಚಿಕ್ಕ ವಸ್ತ್ರವನ್ನು ಕೂಡ ಧರಿಸಿರುವುದಿಲ್ಲ. ಹೀಗಾಗಿ ಎಲ್ಲಾ ವಿಚಾರಗಳನ್ನು ಸರಿದ ರೀತಿಯಲ್ಲಿ ಗಮನಿಸಿ ಒಂದೇ ವಾಕ್ಯದಲ್ಲಿ ಹೇಳುವುದಾದರೆ ಬಟ್ಟೆ ಇಲ್ಲದ ಸ್ಥಾನ ಮಾಡುವುದು ಶಾಸ್ತ್ರಗಳ ಪ್ರಕಾರ ಹಾಗೂ ಸಾಮಾನ್ಯ ಜ್ಞಾನದ ಪ್ರಕಾರ ಕೂಡ ತಪ್ಪು ಅಥವಾ ಸಮಂಜಸವಲ್ಲ ಎಂದು ಹೇಳಬಹುದು.

ಮಹಾಭಾರತದಲ್ಲಿ ನೀವು ಗಮನಿಸಿರಬಹುದು ಗೋಕುಲದಲ್ಲಿದ್ದ ಕೃಷ್ಣನು ಹೆಂಗಳೆಯರು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಬಟ್ಟೆಗಳನ್ನು ಕದ್ದು ಓಡಿ ಹೋಗಿದ್ದ. ನಂತರ ಗೋಪಿಕೆಯರು ಬೇಡಿಕೊಂಡ ನಂತರ ಅವರ ವಸ್ತ್ರಗಳನ್ನು ಮತ್ತೆ ಕೃಷ್ಣ ತಂದು ಕೊಡುತ್ತಾನೆ. ಇದು ಚಿಕ್ಕ ಉದಾಹರಣೆ ಅಷ್ಟೇ ಆದರೆ ಶಾಸ್ತ್ರಗಳು ನೀಡುವಂತಹ ಸಲಹೆ ಪ್ರಕಾರ ಯಾವುದೇ ಕಾರಣಕ್ಕೂ ಒಂದು ಚಿಕ್ಕ ಬಟ್ಟೆಯನ್ನಾದರೂ ಸುತ್ತಿ ಕೊಳ್ಳದೆ ಸ್ನಾನ ಮಾಡುವುದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಸಾಕಷ್ಟು ಸಮಸ್ಯೆಗಳನ್ನು ಹಾಗೂ ದರಿದ್ರಗಳನ್ನು ಮನೆಗೆ ಆಹ್ವಾನ ಮಾಡಿದಂತಾಗುತ್ತದೆ ಎಂದು ಹೇಳಬಹುದಾಗಿದೆ. ಇದೇ ಕಾರಣಕ್ಕಾಗಿ ಪ್ರತಿ ಬಾರಿ ಬೆತ್ತಲೆಯಾಗಿ ಸ್ನಾನ ಮಾಡುವುದಕ್ಕಿಂತ ಚಿಕ್ಕ ಬಟ್ಟೆಯನ್ನು ಧರಿಸಿಕೊಂಡು ಸ್ನಾನ ಮಾಡಿ ಈ ರೀತಿಯ ಸಮಸ್ಯೆಗಳಿಂದ ದೂರ ಇರುವಂತೆ ನೋಡಿಕೊಳ್ಳಿ.

Comments are closed.