Kannada serial: ಲಕ್ಷ್ಮಿ ನಿವಾಸ ಧಾರವಾಹಿಯ ಎಲ್ಲರ ಈ ಅಚ್ಚುಮೆಚ್ಚಿನ ಅಪ್ಪ, ಮಾವ, ಶ್ರೀನಿವಾಸ್ ಪಾತ್ರಧಾರಿ ನಿಜಕ್ಕೂ ಯಾರು ಅಂತ ಗೊತ್ತಾ?

Kannada serial: ಇತ್ತೀಚಿನ ದಿನಗಳಲ್ಲಿ ಸಿನಿಮಗಳಿಗಿಂತ ಹೆಚ್ಚಾಗಿ ಕನ್ನಡದ ಧಾರವಾಹಿಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದಕ್ಕೆ ಪ್ರಾರಂಭಿಸಿದೆ. ಇನ್ನು ಜನರು ಇಷ್ಟ ಪಡುವಂತಹ ಧಾರವಾಹಿಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುವಂತಹ ಲಕ್ಷ್ಮಿ ನಿವಾಸ ಧಾರವಾಹಿ ಕೂಡ ಒಂದಾಗಿದ್ದು ಅದರಲ್ಲಿ ಪ್ರಮುಖವಾಗಿ ಶ್ರೀನಿವಾಸ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ವ್ಯಕ್ತಿಯ ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ ಹೀಗಾಗಿ ಅವರ ಬಗ್ಗೆ ತಿಳಿದುಕೊಳ್ಳಲು ತಪ್ಪದೆ ಕೊನೆವರೆಗೂ ಓದಿ.

ಲಕ್ಷ್ಮಿ ನಿವಾಸ ಧಾರವಾಹಿಯ ಶ್ರೀನಿವಾಸ ಪಾತ್ರಧಾರಿ ಯಾರು ಗೊತ್ತಾ?

ಲಕ್ಷ್ಮಿ ನಿವಾಸ್ ಧಾರವಾಹಿಯಲ್ಲಿ ಶ್ರೀನಿವಾಸ ಪಾತ್ರವನ್ನು ನಿರ್ವಹಿಸುತ್ತಿರುವವರು ಜಂಬೆ ಅಶೋಕ್ ಖ್ಯಾತಿಯ ಅಶೋಕ್ ಕುಮಾರ್ ರವರು. ಪ್ರತಿಯೊಬ್ಬರು ಕೂಡ ಈ ಧಾರವಾಹಿಯಲ್ಲಿ ಅವರ ಪಾತ್ರವನ್ನು ನೋಡುವುದರ ಮೂಲಕ ಅವರ ಬಗ್ಗೆ ತಿಳಿದುಕೊಳ್ಳುವಂತಹ ಕುತೂಹಲವನ್ನು ಹೊಂದಿದ್ದರು. ಕೊನೆಗೂ ಈ ಲೇಖನದ ಮೂಲಕ ಅವರ ಬಗ್ಗೆ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅಶೋಕ್ ಕುಮಾರ್ ಅವರು ಕಳೆದ ಎರಡು ದಶಕಗಳಿಂದಲೂ ಕೂಡ ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ರಂಗಭೂಮಿ ಕಲಾವಿದ ಆಗಿದ್ದಾರೆ. ಸಾಕಷ್ಟು ಯಶಸ್ವಿ ನಾಟಕಗಳಲ್ಲಿ ಕೂಡ ಕಲಾವಿದರಾಗಿ ಕಾಣಿಸಿಕೊಳ್ಳುವ ಮೂಲಕ ಕಲಾರಾಧಕರ ಮನಸನ್ನು ಗೆದ್ದಿದ್ದಾರೆ. ಕೇವಲ ಕಲಾವಿದ ಮಾತ್ರವಲ್ಲದೆ ಒಬ್ಬ ಸಂಗೀತ ಜ್ಞಾನಿ ಕೂಡ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಅಶೋಕ್ ಕುಮಾರ್ ರವರು ತಬಲಾ ಬಾರಿಸುವುದರಲ್ಲಿ ಎತ್ತಿದ ಕೈ. ಎಲ್ಲಕ್ಕಿಂತ ಪ್ರಮುಖವಾಗಿ ಆಫ್ರಿಕಾ ಮೂಲದ ಮ್ಯೂಸಿಕ್ ಇನ್ಸ್ಟ್ರುಮೆಂಟ್ ಆಗಿರುವ ಜಂಬೆ ಅನ್ನೋ ನುಡಿಸುವುದರಲ್ಲಿ ಕೂಡ ಅವರು ಎತ್ತಿದ ಕೈ. ಇದೇ ಕಾರಣಕ್ಕಾಗಿ ಅವರನ್ನು ಜಂಬೆ ಅಶೋಕ್ ಕುಮಾರ್ ಎಂಬುದಾಗಿ ಕರೆಯಲಾಗುತ್ತದೆ.

ಜಂಬೆ ಅಶೋಕ್ ಸಾಕಷ್ಟು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡುವಂತಹ ಕೆಲಸವನ್ನು ಮಾಡುವ ಮೂಲಕ ಕೂಡ ಯಶಸ್ವಿ ಕರಿಯರ್ ಅನ್ನು ಕಂಡಿದ್ದಾರೆ. ತ್ರಿಪುರ ಸುಂದರಿ ಪದ್ಮಾವತಿ ಅನುರೂಪಗಳಂತಹ ಬೇರೆ ಬೇರೆ ಯಶಸ್ವಿ ಧಾರವಾಹಿಗಳಲ್ಲಿ ಬೇರೆ ಬೇರೆ ವಾಹಿನಿಗಳಲ್ಲಿ ಅಶೋಕ್ ಕುಮಾರ್ ನಟಿಸಿದ್ದಾರೆ. ಯು ಆರ್ ಅನಂತಮೂರ್ತಿ ರವರ ಕಥೆ ಆಧಾರಿಸಿದ ಪ್ರಕೃತಿ ಎನ್ನುವ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುವ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಕೂಡ ಅಶೋಕ್ ಕುಮಾರ್ ಕೆಲಸ ಮಾಡಿದ್ದಾರೆ.

ಸಾಕಷ್ಟು ಸಿನಿಮಾ ಹಾಗೂ ನಾಟಕಗಳಲ್ಲಿ ಕಾಣಿಸಿಕೊಂಡಿರುವಂತಹ ಇವರು ಈಗ ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಶ್ರೀನಿವಾಸ ಎನ್ನುವಂತಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರಿ ಗಮನ ಸೆಳೆಯುತ್ತಿದ್ದಾರೆ. ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ಇರುವಂತಹ ಸಾಕಷ್ಟು ಪ್ರಮುಖ ಪಾತ್ರಗಳಲ್ಲಿ ಶ್ರೀನಿವಾಸ ಕೂಡ ಒಂದಾಗಿದ್ದು ತಮ್ಮ ಪಾತ್ರ ಪೋಷಣೆಯ ಮೂಲಕ ಈಗ ಜೀ ಕನ್ನಡ ವಾಹಿನಿಯ ಧಾರವಾಹಿ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ. ನೀವು ಕೂಡ ಈ ದಾರವಾಹಿಯನ್ನು ನೋಡ್ತಾ ಇದ್ರೆ ಖಂಡಿತವಾಗಿ ಶ್ರೀನಿವಾಸ ಪಾತ್ರದ ನಟನೆಯನ್ನು ನೀವು ಇಷ್ಟಪಡುತ್ತಿರಬಹುದಾಗಿದೆ.

Comments are closed.