Shani:ಶನಿಯ ವಕ್ರ ಚಲನೆಯಿಂದಾಗಿ ಈ ರಾಶಿಯವರಿಗೆ ಲಾಭವೋ ಲಾಭ!

Shani:ಚಲನೆಯಿಂದಾಗ ಪ್ರತಿಯೊಬ್ಬರು ಕೂಡ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದಾಗಿ ಭಾವಿಸುತ್ತಾರೆ ಆದರೆ ಶನಿಯ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿರುವ ವಿಚಾರ ಏನೆಂದರೆ ಶನಿ ನ್ಯಾಯದಾತ ಆಗಿರುತ್ತಾನೆ. ಕರ್ಮಗಳಿಗೆ ಸರಿಯಾಗಿ ಫಲವನ್ನು ನೀಡುವಂತಹ ಆತ ಈಗ ವಕ್ರಿಯ ಚಲನೆಯಲ್ಲಿ ಇದ್ದಾನೆ. ಶನಿಯ ಈ ಹಿಮ್ಮುಖ ಚಲನೆ ಅನ್ನೋದು ಜೂನ್ 29ರಿಂದ ಪ್ರಾರಂಭವಾಗಲಿದೆ ಹಾಗಿದ್ದರೆ ಬನ್ನಿ ಇದರಿಂದಾಗಿ ಲಾಭವನ್ನು ಪಡೆಯಲಿರುವ ನಾಲ್ಕು ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ(Aries)

ಕೆಲಸದ ಕ್ಷೇತ್ರದಲ್ಲಿ ಸಾಕಷ್ಟು ಮುನ್ನಡೆಯನ್ನು ಮೇಷ ರಾಶಿಯವರ ಸಂಪಾದನೆ ಮಾಡಲಿದ್ದು ಹಣದ ವಿಚಾರದಲ್ಲಿ ಕೂಡ ಸಾಕಷ್ಟು ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಹೂಡಿಕೆಯಿಂದ ಕೂಡ ನೀವು ಹಣವನ್ನು ದುಪ್ಪಟ್ಟು ಮಾಡಿಕೊಳ್ಳುವಂತಹ ಅವಕಾಶವನ್ನು ಪಡೆದುಕೊಳ್ಳಲಿದ್ದೀರಿ. ಕೇವಲ ಆದಾಯವನ್ನು ಗಳಿಕೆ ಮಾಡುವುದು ಮಾತ್ರವಲ್ಲದೆ ಉಳಿತಾಯ ಮಾಡುವಂತಹ ಅಭ್ಯಾಸ ಕೂಡ ನಿಮ್ಮಿಂದ ಪ್ರಾರಂಭವಾಗಲಿದೆ. ಸಮಾಜದಲ್ಲಿ ಜನರಿಗೆ ನಿಮ್ಮ ಮೇಲೆ ಇರುವಂತಹ ಗೌರವ ಹೆಚ್ಚಾಗಲಿದೆ ಆದರೆ ವಾಹನ ಚಲಾಯಿಸುವಾಗ ಸ್ವಲ್ಪ ಮಟ್ಟಿಗೆ ನೋಡಿಕೊಂಡು ಚಲಾಯಿಸಿ.

ವೃಷಭ ರಾಶಿ(Taurus)

ಉದ್ಯೋಗ ಕ್ಷೇತ್ರದಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಾಧನೆ ಮಾಡಲಿದ್ದೀರಿ ಹಾಗೂ ಅದಕ್ಕಿಂತಲೂ ಹೆಚ್ಚಿನ ಫಲಿತಾಂಶವನ್ನು ಪ್ರತಿಫಲವನ್ನು ಪಡೆಯಲಿದ್ದೀರಿ. ಕೆಲಸ ಮಾಡುವಂತಹ ಸ್ಥಳದಲ್ಲಿ ನಿಮಗೆ ವರಿಷ್ಠ ಅಧಿಕಾರಿಗಳಿಂದ ಹೊಸ ಜವಾಬ್ದಾರಿಯನ್ನು ನೀಡಲಾಗುತ್ತದೆ. ಹಣದ ಗಳಿಕೆ ಹೆಚ್ಚಾಗಲಿದ್ದು ಜೀವನದಲ್ಲಿ ಕೂಡ ಸಾಕಷ್ಟು ಒತ್ತಡಗಳು ಕಡಿಮೆಯಾಗಲಿವೆ. ಒಂದು ವೇಳೆ ವ್ಯಾಪಾರ ಅಥವಾ ಉದ್ಯಮ ಮಾಡುತ್ತಿದ್ದರೆ ಅದರಿಂದಲೂ ಕೂಡ ಹಣ ಸಂಪಾದನೆ ಹೆಚ್ಚಾಗಲಿದೆ.

ತುಲಾ ರಾಶಿ(Libra)

ತುಲಾ ರಾಶಿಯ ಅಧಿಪತಿ ಶುಕ್ರ ಆಗಿರುವ ಕಾರಣದಿಂದಾಗಿ ಹಾಗೂ ಶುಕ್ರ ಮತ್ತು ಶನಿಯಾ ನಡುವೆ ಉತ್ತಮ ಸ್ನೇಹ ಇರುವ ಮೂಲಕ ತುಲಾ ರಾಶಿಯವರಿಗೆ ಅದೃಷ್ಟ ಸಂಪಾದನೆ ವಿಶೇಷವಾಗಿರಲಿದೆ. ನಿಮ್ಮ ಮೇಲೆ ವಹಿಸಿರುವಂತಹ ಜವಾಬ್ದಾರಿಯನ್ನು ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡಲಿದ್ದೀರಿ ಹಾಗೂ ಹೊಸ ಹೊಸ ಪ್ರಾಜೆಕ್ಟ್ ಗಳನ್ನು ಕೂಡ ನೀವು ಪಡೆದುಕೊಳ್ಳಲಿದ್ದೀರಿ. ಹಣದ ಲಾಭ ಮಾತ್ರವಲ್ಲದೆ ಜೀವನದಲ್ಲಿ ಪ್ರಮುಖವಾಗಿ ಬೇಕಾಗಿರುವಂತಹ ಶಾಂತಿಯುತ ಸಮಯಗಳನ್ನು ನೀವು ಈ ಸಂದರ್ಭದಲ್ಲಿ ಕಳೆಯಲಿದ್ದೀರಿ.

ಧನು ರಾಶಿ(Sagittarius)

ಉದ್ಯೋಗ ಜೀವನದಲ್ಲಿ ನೀವು ಉತ್ತಮವಾಗಿ ಯಶಸ್ಸನ್ನು ಪಡೆದುಕೊಳ್ಳಬಹುದಾದಂತಹ ಎಲ್ಲಾ ಘಟನೆಗಳು ಕೂಡ ಈ ಸಂದರ್ಭದಲ್ಲಿ ನಡೆಯಲಿವೆ. ನಿಮ್ಮ ಉತ್ತಮ ಕೆಲಸಗಳಿಗಾಗಿ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೆ ನಿಂತಿರುವಂತಹ ಕೆಲಸಗಳನ್ನು ಕೂಡ ಸಂಪೂರ್ಣ ಯಶಸ್ವಿಯಾಗಿ ಮುಗಿಸಿಕೊಡುವುದರಲ್ಲಿ ನೀವು ಸಫಲನಾಗುತ್ತೀರಿ. ನಿಮ್ಮ ಮನೆಯಲ್ಲಿ ಈ ಸಂದರ್ಭದಲ್ಲಿ ಶುಭಕಾರ್ಯಗಳು ನಡೆಯಲಿವೆ. ಉತ್ತಮ ಆರೋಗ್ಯ ಕೂಡ ನಿಮ್ಮದಾಗಲಿದೆ. ಹೀಗಾಗಿ ಧನುರಾಶಿಯವರಿಗೆ ಈ ಸಂದರ್ಭದಲ್ಲಿ ಉತ್ತಮ ಲಾಭದಾಯಕ ಶಾಂತಿದಾಯಕ ದಿನಗಳು ಕಾಣಿಸಿಕೊಳ್ಳಲಿದೆ ಎನ್ನಬಹುದಾಗಿದೆ.

Comments are closed.