Bigg Boss: ಗೆದ್ದಿದ್ದು 50 ಲಕ್ಷ ಆದರೆ ಕಾರ್ತಿಕ್ ಮಹೇಶ್ ಕೈಗೆ ಸಿಕ್ಕಿದ್ದು ಎಷ್ಟು ಹಣ ಗೊತ್ತಾ? ಪ್ರತಿ ಸಲ ಬಿಗ್ ಬಾಸ್ ತೈತಲ್ ಗೆದ್ದವ್ರ ಗೋಳು ಇದು!

Bigg Boss: ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಿಚ್ಚ ಸುದೀಪ್ ರವರು ನಡೆಸಿಕೊಡುವಂತಹ ಬಿಗ್ ಬಾಸ್ ಕನ್ನಡ ಸೀಸನ್ 10 ಈಗಾಗಲೇ ಮುಗಿದಿದ್ದು ಇದರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ರವರು ಹೊರಹೊಮ್ಮಿರುವುದು ಕೂಡ ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಕಾರ್ತಿಕ್ ಮಹೇಶ್ ರವರಿಗೆ ಬಿಗ್ ಬಾಸ್ ಕಡೆಯಿಂದ 50 ಲಕ್ಷ ರೂಪಾಯಿಗಳ ನಗದು ಬಹುಮಾನ ಒಂದು ಬ್ರೆಜ್ಜ ಕಾರ್ ಹಾಗೂ ಎಲೆಕ್ಟ್ರಿಕ್ ಬೈಕ್ ಅನ್ನು ಕೂಡ ನೀಡಲಾಗಿತ್ತು. ಇದೆಲ್ಲ ಹಳೆ ವಿಚಾರ ಈಗ ಯಾಕೆ ಮಾತಾಡ್ತಿದ್ದಾರೆ ಅನ್ನೋದಗಿ, ನೀವು ಕೂಡ ಭಾವಿಸ್ಬೋದು. ಇಷ್ಟರಲ್ಲಿ ಅವರಿಗೆ ನಿಜವಾಗಿಯೂ ಕೈಗೆ ಸಿಕ್ಕಿದ್ದು ಏನು ಅನ್ನೋದನ್ನ ಇವತ್ತಿನ ಈ ಲೇಖನದಲ್ಲಿ ನಿಮಗೆ ತಿಳಿಸುವುದಕ್ಕೆ ಹೊರಟಿದ್ದೇವೆ.

ನಿಜಕ್ಕೂ ಕಾರ್ತಿಕ್ ಮಹೇಶ್ ಅವರ ಕೈಗೆ ಸಿಕ್ಕಿದ್ದು ಎಷ್ಟು?

ಇದರ ಬಗ್ಗೆ ಮಾತನಾಡುತ್ತ ಖುದ್ದಾಗಿ ಕಾರ್ತಿಕ್ ಮಹೇಶ್ ರವರೆ ಕಾರು ಬರುವುದಕ್ಕೆ ಇನ್ನೂ ಕೂಡ ಸಾಕಷ್ಟು ಸಮಯ ಹಿಡಿಯುತ್ತೆ ಇನ್ನು ಬಿಗ್ ಬಾಸ್ದಿಂದ ಸಿಗುವಂತಹ ಹಣದಲ್ಲಿ ಮನೆ ಕಟ್ಟುವುದಕ್ಕೆ ಬೆಂಗಳೂರಲ್ಲಿ ಆಗೋದಿಲ್ಲ. ಆ ಹಣದಲ್ಲಿ ಬೆಂಗಳೂರಲ್ಲಿ ಮನೆ ಕಟ್ಬೇಕು ಅಂದ್ರೆ ಸಾಧ್ಯನೇ ಇಲ್ಲ ಅನ್ನೋದಾಗಿ ಖುದ್ದಾಗಿ ಕಾರ್ತಿಕ್ ಮಹೇಶ್ ರವರು ಹೇಳಿಕೊಂಡಿದ್ದಾರೆ. ಅದಕ್ಕಾಗಿ ನಾನು ಕೂಡ ದುಡಿಯಬೇಕು ಅಂತ ಕಾರ್ತಿಕ್ ಮಹೇಶ್ ರವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ನಲ್ಲಿ 50 ಲಕ್ಷ ರೂಪಾಯಿ ಗೆದ್ದ ತಕ್ಷಣ ಸಂಪೂರ್ಣವಾಗಿ 50 ಲಕ್ಷ ರೂಪಾಯಿ ಕೂಡ ಗೆದ್ದಿರುವಂತಹ ವ್ಯಕ್ತಿಯ ಕೈಗೆ ಬರುತ್ತದೆ ಎಂಬುದಾಗಿ ಸಾಕಷ್ಟು ಜನರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಟ್ಯಾಕ್ಸ್ ಹಣ ಕಡಿತಗೊಂಡು ನಂತರ ಅಷ್ಟೇ ಉಳಿದ ಹಣ ವಿನ್ನರ್ ಕೈಗೆ ಬರುತ್ತದೆ. ಕಾರ್ತಿಕ್ ಮಹೇಶ್ ರವರ ವಿಚಾರದಲ್ಲಿ ಕೂಡ ಆಗಿರುವುದು ಇದೆ. ಗೆದ್ದಿರುವಂತಹ 50 ಲಕ್ಷ ರೂಪಾಯಿ ಹಣದಲ್ಲಿ ಟ್ಯಾಕ್ಸ್ ಹಣ ಆಗಿರುವಂತಹ 15 ಲಕ್ಷ ರೂಪಾಯಿಗಳು ಕಡಿತಗೊಂಡು ಅವರ ಕೈಗೆ 35 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಇದನ್ನು ಅವರು ಖುದ್ದಾಗಿ ಹೇಳಿಕೊಂಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ಕಳೆದ ಬಿಗ್ ಬಾಸ್ ಕಿಂತ ಸಾಕಷ್ಟು ರೋಚಕ ಹಾಗೂ ಟ್ವಿಸ್ಟ್ ಗಳಿಂದ ಕೂಡಿತ್ತು. ಯಾರೊಬ್ಬರಿಗೂ ಕೂಡ ಕಾರ್ತಿಕ್ ಮಹೇಶ್ ರವರು ಗೆಲ್ಲುತ್ತಾರೆ ಅನ್ನೋ ಸುಳಿವು ಕೂಡ ಆರಂಭದಲ್ಲಿ ಇರಲಿಲ್ಲ.

ಆದರೆ ಕೊನೆಗೂ ಕೂಡ ಕಾರ್ತಿಕ್ ಮಹೇಶ್ ರವರು ಗೆದ್ದಿರೋದು ಅವರ ಅಭಿಮಾನಿಗಳಲ್ಲಿ ಸಂತೋಷ ತಂದಿದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಕಾರ್ತಿಕ್ ಮಹೇಶ್ ರವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಕೂಡ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಿಗ್ ಬಾಸ್ ನಿಜಕ್ಕೂ ಕೂಡ ಅವರ ಜೀವನದಲ್ಲಿ ಬದಲಾವಣೆಯ ಗಾಳಿಯನ್ನು ತಂದಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮುಂದಿನ ದಿನಗಳಲ್ಲಿ ಕೂಡ ಕನ್ನಡ ಚಿತ್ರರಂಗದಲ್ಲಿ ಅವರಿಗೆ ಇನ್ನಷ್ಟು ಹೆಚ್ಚಿನ ಅವಕಾಶಗಳು ಹುಡುಕಿಕೊಂಡು ಬರಲಿ ಎಂಬುದಾಗಿ ಹಾರೈಸೋಣ.

Comments are closed.