Tirupati Darshanam: ತಿರುಪತಿ ದರ್ಶನ ಇನ್ನಷ್ಟು ಸುಲಭ; KSRTC ಬಸ್ ನ ಟೈಮಿಂಗ್ಸ್ ಟಿಕೆಟ್ ದರ ಎಲ್ಲದ್ರ ಮಾಹಿತಿ ಇಲ್ಲಿದೆ ನೋಡಿ!

Tirupati Darshanam: ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳಬೇಕು ಎನ್ನುವಂತಹ ಕನಸು ಖಂಡಿತವಾಗಿ ಪ್ರತಿಯೊಬ್ಬರಿಗೂ ಇರುತ್ತದೆ ಅಂತವರಿಗೆ ಇಲ್ಲಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಯಾವ ಸಮಯದಲ್ಲಿ ಹೋದರೆ ಎಷ್ಟು ಹಣ ಪಾವತಿ ಮಾಡಬೇಕಾಗಿರುತ್ತದೆ ಎನ್ನುವಂತಹ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ನೀಡುವುದಕ್ಕೆ ಹೊರಟಿದ್ದೇವೆ. ಒಂದು ವೇಳೆ ನೀವು ಕೂಡ ತಿರುಪತಿ ಹೋಗುವಂತಹ ಪ್ಲಾನ್ ಮಾಡಿಕೊಂಡಿದ್ದರೆ ಇದು ನಿಮಗೆ ಸಾಕಷ್ಟು ಉಪಯುಕ್ತಕಾರಿ ಮಾಹಿತಿಯಾಗಲಿದೆ.

ತಿರುಪತಿಗೆ ಹೋಗುವುದಕ್ಕೆ ಬಸ್ ವೇಳಾಪಟ್ಟಿ ಹಾಗೂ ಟಿಕೆಟ್ ದರ!

ಬೆಂಗಳೂರಿನಿಂದ ತಿರುಪತಿಗೆ

ಬೆಂಗಳೂರಿನಿಂದ ತಿರುಪತಿಗೆ ಹೋಗುವುದಕ್ಕೆ ಬೆಳಗ್ಗೆಯಿಂದ ಹಿಡಿದು ರಾತ್ರಿವರೆಗೂ ಕೂಡ ಸಾಕಷ್ಟು ಬಸ್ಸುಗಳು ನಿಮಗೆ ಸಿಗಬಹುದಾಗಿದೆ. ಬಸ್ ವಿಧ ಹಾಗೂ ಅದಕ್ಕೆ ಇರುವಂತ ಟಿಕೆಟ್ ದರದ ಬಗ್ಗೆ ಮಾತನಾಡುವುದಾದರೆ, ಎಸಿ ಸ್ಲಿಪರ್ ಬಸ್ಸಿಗೆ 803 ರೂಪಾಯಿ, ಐರಾವತ ಕ್ಲಬ್ ಕ್ಲಾಸ್ ಗೆ 654 ರೂಪಾಯಿಯಿಂದ 704 ರೂಪಾಯಿ, ನಾನ್ ಎಸಿ ಸ್ಲೀಪರ್ ಬಸ್ ನಲ್ಲಿ ನಿಮಗೆ 680 ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ, ರಾಜಹಂಸದಲ್ಲಿ 477 ಹಾಗೂ ಸಾಮಾನ್ಯ ಬಸ್ ನಲ್ಲಿ 351 ರೂಪಾಯಿಗಳನ್ನ ನೀಡಿ ನೀವು ಟಿಕೆಟ್ ಪಡೆದುಕೊಳ್ಳಬೇಕಾಗಿರುತ್ತದೆ.

ಮೈಸೂರಿನಿಂದ ತಿರುಪತಿಗೆ

ಮೈಸೂರಿನಿಂದ ತಿರುಪತಿಗೆ ಇರುವಂತಹ ಬಸ್ ಓಡಾಟದ ಬಗ್ಗೆ ಮಾತನಾಡುವುದಾದರೆ ಬೆರಳೆಣಿಕೆಯಷ್ಟು ಬಸ್ ಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ. ಐರಾವತ ಕ್ಲಬ್ ಕ್ಲಾಸ್ ಬಸ್ ಇಲ್ಲಿ ಓಡಾಟ ನಡೆಸಲಿದ್ದು ಸಂಜೆ 4:30 ರಿಂದ ಇದರ ಜರ್ನಿಯನ್ನು ಪ್ರಾರಂಭಿಸಿ ಬೆಳಗಿನ ಜಾವ ಮೂರು ಗಂಟೆಗೆ ತಿರುಪತಿಗೆ ತಲುಪುತ್ತದೆ. ಮತ್ತೊಂದು ರಾತ್ರಿ 8:25ಕ್ಕೆ ತನ್ನ ಪ್ರಯಾಣವನ್ನು ಮೈಸೂರಿನಿಂದ ಆರಂಭಿಸಿ ಬೆಳಗಿನ ಜಾವ ಮೂರು ಗಂಟೆಗೆ ತಿರುಪತಿಗೆ ತಲುಪುತ್ತದೆ. ಇಲ್ಲಿ ನಿಮಗೆ ಟಿಕೆಟ್ ಬೆಲೆ 1066 ರೂಪಾಯಿ ಆಗಿರುತ್ತದೆ. ನಂತರ ತಿರುಪತಿಯಿಂದ 8 ಗಂಟೆಗೆ ಹೊರಟು ಬೆಳಗ್ಗೆ 4:45 ಸುಮಾರಿಗೆ ಮೈಸೂರಿಗೆ ಬರುತ್ತದೆ. ಮತ್ತೊಂದು ರಾತ್ರಿ 9:32ಕ್ಕೆ ತಿರುಪತಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿ ಮೈಸೂರಿಗೆ 6 ಗಂಟೆಯ ಆಸು ಪಾಸಿನಲ್ಲಿ ತಲುಪುತ್ತದೆ.

ದಾವಣಗೆರೆಯಿಂದ ತಿರುಪತಿಗೆ

ದಾವಣಗೆರೆಯಿಂದ ತಿರುಪತಿಗೆ ಹೋಗುವ ಬಸ್ ವಿಚಾರದ ಬಗ್ಗೆ ಮಾತನಾಡುವುದಾದರೆ ಸಂಜೆ 4.06ಕ್ಕೆ ಬಸ್ ದಾವಣಗೆರೆಯಿಂದ ತಿರುಪತಿಗೆ ಹೊರಟುತ್ತದೆ. ಬೆಳಗಿನ ಜಾವ ನಾಲ್ಕು ಗಂಟೆಯ ಆಸು ಪಾಸಿನಲ್ಲಿ ತಿರುಪತಿಯನ್ನು ತಲುಪುತ್ತದೆ. ಈ ಬಸ್ಸಿನ ಟಿಕೆಟ್ ದರ 1357 ರೂಪಾಯಿ ಆಗಿದೆ. ಮತ್ತೊಂದು ಬಸ್ ರಾತ್ರಿ 7.15ಕ್ಕೆ ದಾವಣಗೆರೆಯಿಂದ ಹೊರಟು ಬೆಳಿಗ್ಗೆ 6.30ಕ್ಕೆ ತಿರುಪತಿ ತಲುಪಲಿದೆ. ಮತ್ತೊಂದು ಬಸ್ ನಿಮಗೆ ರಾತ್ರಿ 10.15ಕ್ಕೆ ಹೊರಟು ಬೆಳಗಿನ ಜಾವ 10.15ಕ್ಕೆ ತಿರುಪತಿಯಲ್ಲಿ ಇರುತ್ತದೆ. ಈ ಬಸ್ಸುಗಳ ಟಿಕೆಟ್ ದರ 560ಗಳಿಂದ ಪ್ರಾರಂಭಿಸಿ 625 ಗಳವರೆಗೆ ಇರುತ್ತದೆ.

ಮಂಗಳೂರಿಂದ ತಿರುಪತಿ

ಇಲ್ಲಿ ಕೂಡ ಐರಾವತ ಬಸ್ ಗಳು ಕಾಣಿಸಿಕೊಳ್ಳಲಿದ್ದು ಮಂಗಳೂರಿನಿಂದ ತಿರುಪತಿಗೆ 12 ಗಂಟೆಯಿಂದ ಪ್ರಾರಂಭಿಸಿ 3:30 ಕ್ಕೆ ತಿರುಪತಿ ತಲುಪುವ ಬಸ್ ಇದೆ. ಅದೇ ರೀತಿಯಲ್ಲಿ ಎರಡು ಗಂಟೆಯಿಂದ ಮಂಗಳೂರಿನಿಂದ ಹೊರಟು ತಿರುಪತಿಗೆ ಬೆಳಗಿನ ಜಾವ 6:00ಗೆ ತಲುಪುವ ಬಸ್ ಕೂಡ ಇದ್ದು ಮತ್ತೊಂದು ಬಸ್ ರಾತ್ರಿ 8:30 ಕ್ಕೆ ಹೊರಟು ಬೆಳಗ್ಗೆ 11:30ಕ್ಕೆ ತಿರುಪತಿಗೆ ಹೋಗಲಿದೆ. ಈ ಬಸ್ಗಳ ಟಿಕೆಟ್ ದರ 1684 ರೂಪಾಯಿ ಆಗಿದೆ.

Comments are closed.