Relationship: ಒಬ್ಬರ ಜೊತೆ ಪ್ರೀತಿಯಲ್ಲಿರುವಾಗ ಇನ್ನೊಬ್ಬರು ಇಷ್ಟವಾಗಕ್ಕೆ ಶುರುವಾಗ್ತಾರೆ ಯಾಕೆ ಗೊತ್ತಾ; ನಿಜವಾದ ಕಾರಣ ಇಲ್ಲಿದೆ!

Relationship: ಪ್ರೀತಿ ಅನ್ನೋದು ಕುರುಡು ಯಾರಿಗೆ ಯಾವಾಗ ಬೇಕಾದರೂ ಕೂಡ ವಯಸ್ಸಿನ ಹಾಗೂ ಆಸ್ತಿ ಅಂತಸ್ತಿನ ವ್ಯತ್ಯಾಸ ಇಲ್ಲದೆ ಆಗಿಬಿಡುತ್ತದೆ ಅನ್ನೋದಾಗಿ ಸಿನಿಮಾಗಳಲ್ಲಿ ದೊಡ್ಡದಾಗಿ ಮಾತುಗಳನ್ನು ಹೇಳಲಾಗುತ್ತದೆ. ಸಾಕಷ್ಟು ಬಾರಿ ನಿಜ ಜೀವನದಲ್ಲಿ ಕೂಡ ಇದೇ ರೀತಿ ನಡೆದಿರುವಂತಹ ಉದಾಹರಣೆಗಳು ಕೂಡ ಇರುತ್ತದೆ. ಆದರೆ ಇತ್ತೀಚಿನ ಯುವಜನತೆ ಒಬ್ಬರ ಜೊತೆಗೆ ಪ್ರೀತಿಯಲ್ಲಿ ಇರುವಾಗಲೇ ಇನ್ನೊಬ್ಬರ ಕುರಿತಂತೆ ಆಕರ್ಷಿತರಾಗುತ್ತಾರೆ. ಅದು ಯಾತಕ್ಕಾಗಿ ಅನ್ನೋದನ್ನ ಇವತ್ತಿನ ಲೇಖನದಲ್ಲಿ ವಿಶ್ಲೇಷಣೆ ಮಾಡಲು ಹೊರಟಿದ್ದು ತಪ್ಪದೇ ಒಂದೊಂದೇ ಅಂಶಗಳನ್ನು ನೀವು ಕೊನೆವರೆಗೂ ಓದುವ ಮೂಲಕ ತಿಳಿದು ಅರ್ಥಮಾಡಿಕೊಳ್ಳಿ.

ಪ್ರೀತಿಯಲ್ಲಿ ಇರೋವಾಗಲೇ ಇನ್ನೊಬ್ಬರ ಬಗ್ಗೆ ಆಕರ್ಷಿತರಾಗುವುದಕ್ಕೆ ಪ್ರಮುಖ ಕಾರಣಗಳು

  1. ಸಾಕಷ್ಟು ಬಾರಿ ಸಂಗಾತಿಗಳ ನಡುವೆ ಸ್ವಲ್ಪಮಟ್ಟಿಗೆ ದೂರ ಹೆಚ್ಚಾದ್ರೂ ಕೂಡ ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಇರುವಂತಹ ಪ್ರೀತಿಯ ಸಂಬಂಧದಲ್ಲಿ ಇಬ್ಬರಲ್ಲಿಯೂ ಕೂಡ ಗೊಂದಲ ಮೂಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಇಬ್ಬರ ನಡುವೆ ನಡೆಯುತ್ತಿರುವಂತಹ ಕೆಲವೊಂದು ಘಟನೆಗಳು ಸರಿಯೋ ತಪ್ಪೋ ಅನ್ನುವಂತಹ ಕ್ಲಾರಿಟಿ ಕೂಡ ಅವರಿಗೆ ಸಿಗೋದಿಲ್ಲ ಹೀಗಾಗಿ ಕಾಣಿಸುವಂತಹ ಬೇರೆ ಆಕರ್ಷಣೆಯ ಕಡೆಗೆ ತಮ್ಮ ಮನಸ್ಸನ್ನು ವಾಲಿಸುತ್ತಾರೆ.
  2. ಪ್ರೀತಿಯಲ್ಲಿ ಯಾರು ಒಪ್ಪಿಕೊಳ್ಳಲು ಅಥವಾ ಬಿಡಲಿ ಖಂಡಿತವಾಗಿ ಪರಸ್ಪರ ಪ್ರೀತಿಸುವುದಕ್ಕೆ ದೈಹಿಕ ಆಕರ್ಷಣೆ ಕೂಡ ಒಂದು ಕಾರಣವಾಗಿರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ತಮ್ಮ ಸಂಗಾತಿ ಆಕರ್ಷಕವಾಗಿಲ್ಲ ಅಂತ ಅನಿಸುವುದಕ್ಕೆ ಪ್ರಾರಂಭಿಸಿದ್ರೆ ಸಾಕು ಬೇರೆ ಕಡೆಗೆ ದೈಹಿಕ ಆಕರ್ಷಣೆಯನ್ನು ಅರಿಸಿಕೊಂಡು ಹೋಗೋದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಈ ಸಂದರ್ಭದಲ್ಲಿ ನಿಜವಾದ ಪ್ರೀತಿಯನ್ನು ಹೊಂದಿರುವಂತಹ ಸಂಗತಿಗಳು ತಮ್ಮ ಸಂಗಾತಿಯ ದೈಹಿಕ ಆಕರ್ಷಣೆಗಿಂತ ಹೆಚ್ಚಾಗಿ ಯಾವೆಲ್ಲ ಸಂದರ್ಭಗಳಲ್ಲಿ ಅವರು ನಿಮ್ಮ ಜೊತೆಗೆ ನಿಂತಿದ್ದಾರೆ ಹಾಗೂ ನಿಮ್ಮನ್ನು ಎಷ್ಟು ಪ್ರೀತಿ ಮಾಡುತ್ತಾರೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿರುತ್ತದೆ. ಅಂದ ಅನ್ನೋದು ಅವರ ಮುಖದಲ್ಲಿರುವಂತಹ ಸೌಂದರ್ಯ ಅಥವಾ ಅವರು ತೊಡುವಂತಹ ಬಟ್ಟೆಯಿಂದಲ್ಲ ಬದಲಾಗಿ ಅವರು ನಿಮಗಾಗಿ ತೋರಿಸುವಂತ ಪ್ರೀತಿಯಲ್ಲಿ ಇದೆ ಅನ್ನೋದನ್ನ ತಿಳಿದುಕೊಳ್ಳಬೇಕು.
  3. ಈಗ ನಾವು ಹೇಳಲು ಹೊರಟಿರುವಂತಹ ಒಂದು ವಿಚಾರ ಖಂಡಿತವಾಗಿ ಪ್ರಮುಖವಾಗಿ ಪರಿಣಾಮ ಬೀರುತ್ತದೆ. ಸಾಕಷ್ಟು ಜನರು ಒಬ್ಬರನ್ನ ಪ್ರೀತಿಸೋದು ಅವರಲ್ಲಿ ಇರುವಂತಹ ಹಣವನ್ನು ನೋಡಿ. ಒಂದು ವೇಳೆ ಅವರ ಬಳಿ ಇರುವಂತಹ ಹಣ ಕಡಿಮೆಯಾಗುತ್ತಾ ಬಂತು ಅಂದ್ರೆ ಇಲ್ಲವೇ ತಮಗೆ ಬೇಕಾದಾಗ ಹಣವನ್ನು ನೀಡುತ್ತಿಲ್ಲ ಎಂದಾದಲ್ಲಿ ಅವರನ್ನು ಹೊರತುಪಡಿಸಿ ಬೇರೆ ಯಾರಾದರೂ ಆರ್ಥಿಕ ಸಹಾಯವನ್ನು ನೀಡುತ್ತಿದ್ದಾರೆ ಅಂದರೆ ಅವರ ಕಡೆಗೆ ಆಕರ್ಷಿತರಾಗುವಂತಹ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಹಣ ಕೂಡ ಈ ರೀತಿ ಸಂಬಂಧದಲ್ಲಿ ಇದ್ದರೂ ಕೂಡ ಬೇರೆಯವರ ಕಡೆಗೆ ಆಕರ್ಷಣೆ ಆಗೋದಕ್ಕೆ ಕಾರಣವಾಗಿರುತ್ತದೆ.
  4. ಯಾವತ್ತೂ ಕೂಡ ನೀವು ನಿಮ್ಮ ಸಂಗತಿಯ ಜೊತೆಗೆ ಪ್ರಾಮಾಣಿಕರಾಗಿರಬೇಕು ಹಾಗೂ ಯಾವುದೇ ವಿಚಾರ ಇದ್ರೂ ಕೂಡ ನೇರವಾಗಿ ವ್ಯಕ್ತಪಡಿಸಬೇಕು. ಯಾವಾಗ ನೀವು ನಿಮ್ಮ ಸಂಗಾತಿಯಿಂದ ಕೆಲವೊಂದು ವಿಚಾರಗಳನ್ನು ಮರೆಮಾಚುವುದಕ್ಕೆ ಪ್ರಾರಂಭ ಮಾಡ್ತಿರೋ ಆ ಸಂದರ್ಭದಲ್ಲಿ ನೀವು ಅವರನ್ನು ಹೊರತುಪಡಿಸಿ ಬೇರೆಯವರ ಆಕರ್ಷಣೆಗೆ ಒಳಗಾಗುತ್ತಿದ್ದೀರಿ ಅನ್ನೋದರ ಮುನ್ಸೂಚನೆಯಾಗಿದೆ. ಇದು ಅವರಿಗೆ ಮೋಸ ಮಾಡುವಂತಹ ವಿಚಾರ ಕೂಡ ಆಗಿರಬಹುದು.
  5. ನಿರ್ಧಾರ ಕೂಡ ಪ್ರೀತಿಯ ವಿಚಾರದಲ್ಲಿ ಸಾಕಷ್ಟು ಪ್ರಮುಖವಾಗಿರುತ್ತದೆ. ಮೊದಲಿಗೆ ಯಾರನ್ನ ಪ್ರೀತಿಸಬೇಕು ಅನ್ನೋ ನಿರ್ಧಾರದ ಬಗ್ಗೆ ಕೂಡ ನೀವು ಸಾಕಷ್ಟು ಬಾರಿ ಯೋಚನೆ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು ಯಾಕೆಂದರೆ ಪ್ರೀತಿ ಒಂದು ಪವಿತ್ರವಾದ ಬಾಂಧವ್ಯ ಆಗಿದ್ದು ಅದನ್ನು ಕಳೆದುಕೊಳ್ಳುವುದಕ್ಕೆ ಯಾರು ಕೂಡ ಇಷ್ಟಪಡುವುದಿಲ್ಲ. ಪ್ರಾರಂಭಿಸಿದ ನಂತರ ಅದನ್ನು ಕೊನೆವರೆಗೂ ಮುಂದುವರಿಸಿಕೊಂಡು ಹೋಗುವಂತಹ ಶಕ್ತಿ ಇಬ್ಬರಲ್ಲಿ ಕೂಡ ಇರಬೇಕು. ಒಂದು ಬಾರಿ ರಿಲೇಷನ್ಶಿಪ್ ಗೆ ಬಂದ ನಂತರ ಸಂಗಾತಿಗಳಾಗಿ ನೀವು ಈ ಪ್ರೀತಿಯನ್ನು ಯಾವ ರೀತಿಯಲ್ಲಿ ಘೋಷಣೆ ಮಾಡಬಹುದು ಎನ್ನುವುದರ ಬಗ್ಗೆ ಕೂಡ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

Comments are closed.