Summer Tips: ಸೆಕೆ ಅಂತ ನೀರಿನ ಬದಲು ಇದನ್ನೇ ಹೆಚ್ಚಾಗಿ ಕುಡಿತಾರೆ ಕೆಲವು ಗಂಡುಮಕ್ಕಳು; ಆದ್ರೆ ಅಂದ್ರಿಂದ ಆಗೋ ಪ್ರಾಬ್ಲೆಮ್ ಏನ್ ಗೊತ್ತಾ?

Summer Tips: ನಿಜವಾದ ಆಲ್ಕೋಹಾಲ್ ಪ್ರಿಯರು ಸಾಮಾನ್ಯವಾಗಿ ಬೇಸಿಗೆ ಬಂದಾಕ್ಷಣ ಹೆಚ್ಚಾಗಿ ಬಿಯರನ್ನು ಸೇವನೆ ಮಾಡುತ್ತಾರೆ. ಇದರಲ್ಲಿ 4.5 ಇಂದ ಎಂಟು ಪ್ರತಿಶತ ಆಲ್ಕೋಹಾಲ್ ಇರುತ್ತದೆ. ಕೆಲವರಿಗೆ ಇದು ಇಷ್ಟ ಅಂತ ಅನಿಸಬಹುದು ಆದರೆ ಇದು ನಿಮ್ಮ ದೇಹದಲ್ಲಿ ನಿರ್ಜಲೀಕರಣ ಸ್ಥಿತಿಯನ್ನು ತರೋದಕ್ಕೆ ಕೂಡ ಒಂದು ಪ್ರಮುಖ ಕಾರಣವಾಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿದೆ. ಜನರು ಹೆಚ್ಚಾಗಿ ಬಿಯರ್ ಅನುಸೇವಿಸುವುದರ ಮೂಲಕ ಅವರ ಮೈಯಲ್ಲಿ ಹೆಚ್ಚು ಬೆವರು ಕೂಡ ಸುರಿಯಲು ಪ್ರಾರಂಭವಾಗುತ್ತದೆ ಎಂಬುದಾಗಿ ವೈದ್ಯಕೀಯವಾಗಿ ಸಾಬೀತಾಗಿದೆ.

ಇದೇ ಕಾರಣಕ್ಕಾಗಿ ಬಿಯರ್ ಕುಡಿದ ನಂತರ ವೈದ್ಯರು ಕೂಡ ಹೇಳ್ತಾರೆ ಸ್ವಲ್ಪ ಮಟ್ಟಿಗೆ ನೀರು ಅಥವಾ ಟೀ ಕುಡಿಯಬೇಕು ಅಂತ. ಇದು ದೇಹದ ಮೇಲೆ ನೆಗೆಟಿವ್ ಪರಿಣಾಮ ಬೀರುವುದನ್ನ ತಡೆಯುತ್ತದೆ ಅನ್ನೋದಾಗಿ ಡಾಕ್ಟರ್ ಸಜೆಸ್ಟ್ ಮಾಡ್ತಾರೆ. ಹೀಗಾಗಿ ಬೇಸಿಗೆಗಾಲದಲ್ಲಿ ಕೂಡ ದಾಹವನ್ನು ತೀರಿಸಿಕೊಳ್ಳುವುದಕ್ಕಾಗಿ ಬಿಯರ್ ಅನ್ನು ಮಿತಿಮೀರಿ ಕುಡಿಯೋದು ಅಷ್ಟೊಂದು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದನ್ನ ಡಾಕ್ಟರ್ ಸಾಬೀತು ಮಾಡಿ ಹೇಳುತ್ತಾರೆ.

ಇನ್ನು ಸಾಮಾನ್ಯವಾಗಿ ಬಿಯರ್ ಕುಡಿಯುವಾಗ ಕೂಡ ಕೆಲವೊಂದು ಪ್ರಮುಖ ವಿಚಾರಗಳನ್ನು ಗಮನಿಸಬೇಕು ಅನ್ನೋದಾಗಿ ಕೂಡ ವೈದ್ಯರು ಈ ಸಂದರ್ಭದಲ್ಲಿ ಹೇಳುತ್ತಾರೆ. ಸಾಮಾನ್ಯವಾಗಿ ಬಿಯರ್ ಕುಡಿಯೋದು ಅಂದ್ರೆ ಆಲ್ಕೋಹಾಲ್ ಕುಡಿಯೋದೇ ದೇಹಕ್ಕೆ ಅಷ್ಟೊಂದು ಒಳ್ಳೆಯದಲ್ಲ ಹಾಗಿದ್ರೂ ಕೂಡ ಈ ಸಂದರ್ಭದಲ್ಲಿ ಕೆಲವೊಂದು ಪ್ರಮುಖ ವಿಚಾರಗಳನ್ನು ಫಾಲೋ ಮಾಡುವ ಮೂಲಕ ಸ್ವಲ್ಪಮಟ್ಟಿಗಾದ್ರು ತಮ್ಮನ್ನು ತಾವು ಬಚಾವ್ ಮಾಡಿಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ಉಷ್ಣತೆ ಹೆಚ್ಚಾಗಿರುವ ಕಾರಣದಿಂದಾಗಿ ದಿನಕ್ಕೆ ಹೆಚ್ಚಾಗಿ ನೀರು ಕುಡಿಯುವುದನ್ನು ಮಾತ್ರ ಮರೆಯಬೇಡಿ. ನೀವು ಎಷ್ಟೇ ನೀರು ಕುಡಿದರೂ ಕೂಡ ಅದು ದೇಹಕ್ಕೆ ಈ ಸಂದರ್ಭದಲ್ಲಿ ಅಂದರೆ ಬೇಸಿಗೆಗಾಲದಲ್ಲಿ ಒಳ್ಳೆಯದು. ಇನ್ನು ಈ ಉಷ್ಣದಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿದರೆ ಕೂಡ ಸಾಕಷ್ಟು ಒಳ್ಳೆಯ ಪರಿಣಾಮವನ್ನು ಆರೋಗ್ಯದ ಮೇಲೆ ಇದು ಬೀರುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡಿ ಇಲ್ಲವಾದಲ್ಲಿ ಇದರಿಂದ ಕೂಡ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಚ್ಚಾಗಿ ಹಣ್ಣುಗಳನ್ನು ಸೇವಿಸುವುದರ ಮೂಲಕ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

ಬೇಸಿಗೆ ಅಂತ ಬಂದರೆ ಸಾಕು ಪಾರ್ಟಿ ಮಾಡಬೇಕು ಎನ್ನುವಂತಹ ಯುವ ಜನತೆ ಈ ವಿಚಾರವನ್ನು ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುತ್ತದೆ. ಬಿಯರ್ ಕುಡಿಯುವ ಭರದಲ್ಲಿ ದಿನಕ್ಕೆ ನೀರನ್ನು ಸರಿಯಾಗಿ ಸೇವಿಸದೆ ಇರುವುದು ಹಾಗೂ ಆಹಾರವನ್ನು ಸರಿಯಾದ ಸಮಯಕ್ಕೆ ತಿನ್ನದೇ ಇರುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಕೂಡ ಅವರು ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಈ ವಿಚಾರವನ್ನು ತಲೆಯಲ್ಲಿ ಇಟ್ಕೊಂಡು ಅವರು ತಮ್ಮ ಬಿಯರ್ ಸೇವನೆಯನ್ನು ಈ ಬೇಸಿಗೆಗಾಲದಲ್ಲಿ ಮಾಡಿದ್ರೆ ಒಳ್ಳೆಯದು ಇಲ್ಲವಾದಲ್ಲಿ ಆಸ್ಪತ್ರೆ ಬಿಲ್ಗೆ ಹಣವನ್ನು ಕೂಡಿಸಿಡಬೇಕಾಗುತ್ತದೆ.

Comments are closed.