Agri Insurance: ಕೃಷಿ ವಿಮೆ ಪರಿಹಾರದ ಹಣ ನಿಮಗೆ ಸಿಗತ್ತಾ? ಚೆಕ್ ಮಾಡಕ್ಕೆ ಇಲ್ಲಿದೆ ಡೈರೆಕ್ಟ್ ಲಿಂಕ್!

Agri Insurance: ಸಾಕಷ್ಟು ರೈತರಿಗೆ ಸರ್ಕಾರ ತಮಗಾಗಿ ಯಾವ ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ಯಾವ ಪರಿಹಾರಗಳನ್ನು ನೀಡುತ್ತಿದೆ ಎಂಬ ಮಾಹಿತಿಗಳ ಬಗ್ಗೆ ಅರಿವಿರುವುದಿಲ್ಲ. ಅವರಿಗೆ ಈ ಮಾಹಿತಿಗಳನ್ನು ನೀಡುವಂತಹ ಪ್ರಯತ್ನವನ್ನು ಯುವಜನತೆ ಮಾಡಬೇಕಾಗಿದೆ. ಇವತ್ತಿನ ಲೇಖನದಲ್ಲಿ ಕೂಡ ನಾವು ಅದೇ ರೀತಿಯ ಮಾಹಿತಿಗಳನ್ನು ನೀಡಲು ಹೊರಟಿದ್ದು ಬೆಳೆ ವಿಮೆ ಹಾಗೂ ಪರಿಹಾರದ ಹಣ ವರ್ಗಾವಣೆ ಯಾವ ರೀತಿಯಲ್ಲಿ ನಡೆಯುತ್ತೆ ಯಾವ ಅಪ್ಡೇಟ್ ಇದೆ ಅನ್ನೋದರ ಬಗ್ಗೆ ಮಾಹಿತಿ ನೀಡಲು ಈ ಲೇಖನದ ಮೂಲಕ ಹೊರಟಿದ್ದೇವೆ.

ಬೆಳೆ ವಿಮೆ ಪರಿಹಾರ

ರಾಜ್ಯದ ಸಾಕಷ್ಟು ಜಿಲ್ಲೆಗಳಲ್ಲಿ ಬೆಳೆ ವಿಮೆಯ ಪರಿಹಾರ ಹಣವನ್ನು ವರ್ಗಾವಣೆ ಮಾಡುವುದಕ್ಕೆ ಪ್ರಾರಂಭಿಸಲಾಗಿದೆ. ಬನ್ನಿ ಇದರ ಅರ್ಜಿ ಸ್ಥಿತಿಯ ಅಪ್ಡೇಟ್ಗಳನ್ನು ತಿಳಿದುಕೊಳ್ಳುವುದು ಹೇಗೆ ಅನ್ನೋದನ್ನ ನೋಡೋಣ.

ಬೆಳೆ ವಿಮೆಯನ್ನ ಪಡೆದುಕೊಳ್ಳುವುದು ಹೇಗೆ?

  • samrakshane.Karnataka.gov.in ಇದು ಬೆಳೆ ವಿಮೆ ಪರಿಹಾರವನ್ನು ಚೆಕ್ ಮಾಡುವುದಕ್ಕೆ ಇರುವಂತಹ ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದೆ. ಇಲ್ಲಿ ಭೇಟಿ ಮಾಡುವ ಮೂಲಕ ನೀವು ಇದರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಬೆಳೆ ವಿಮೆ ಚೆಕ್ ಮಾಡುವಂತಹ ಆಪ್ಷನ್ ನಿಮಗೆ ಸಿಗುತ್ತದೆ ಅಲ್ಲಿ ಕ್ಲಿಕ್ ಮಾಡುವ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
  • ಎರಡನೆಯ ವಿಧಾನವನ್ನು ನೋಡುವುದಾದರೆ ನೀವು ನಿಮ್ಮ ಜಿಲ್ಲೆಯ ಇನ್ಸೂರೆನ್ಸ್ ಪ್ರತಿನಿಧಿಗಳನ್ನು ಸಂಪರ್ಕ ಮಾಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿ ದೆ. ಪ್ರತಿಯೊಂದು ಜಿಲ್ಲೆಗೆ ವಿಮಾ ಕಂಪನಿಯ ಪ್ರತಿನಿಧಿಗಳನ್ನು ನೇಮಿಸಲಾಗಿರುತ್ತದೆ. ಅವರು ಬಳಿ ಹೋಗಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಪ್ರತಿನಿಧಿಗಳ ಕಾಂಟಾಕ್ಟ್ ನಂಬರ್ ಅನ್ನು ಪಡೆದುಕೊಂಡು ಕೂಡ ನೀವು ಇದರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಅಧಿಕೃತ ವೆಬ್ ಸೈಟ್ ನಲ್ಲಿ ಕೂಡ ಪ್ರತಿನಿಧಿಗಳನ್ನು ಕಾಂಟಾಕ್ಟ್ ಮಾಡುವಂತಹ ನಂಬರ್ ಅನ್ನು ಪ್ರಸ್ತುತಪಡಿಸಲಾಗಿರುತ್ತದೆ. ಇಲ್ಲವಾದಲ್ಲಿ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಕಾಂಟಾಕ್ಟ್ ಮಾಡುವ ಮೂಲಕ ಇನ್ಸೂರೆನ್ಸ್ ಪ್ರತಿನಿಧಿಯ ನಂಬರನ್ನು ಪಡೆದುಕೊಳ್ಳಬಹುದಾಗಿದೆ.
  • ಕೊನೆಯ ಆಯ್ಕೆ ರೂಪದಲ್ಲಿ ನೀವು ನಿಮ್ಮ ತಾಲೂಕಿನಲ್ಲಿ ಇರುವಂತಹ ಸಹಾಯಕ ಕೃಷಿ ನಿರ್ದೇಶಕ ಕಚೇರಿಗೆ ಬೆಳೆ ವಿಮೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ಬೆಳೆಯ ವಿಮೆಯನ್ನು ಪಡೆಯುವುದರ ಬಗ್ಗೆ ಅರ್ಜಿ ಸಲ್ಲಿಸುವಿಕೆಯ ಮಾಹಿತಿ ಬಗ್ಗೆ ನೇರವಾಗಿ ನೀವು ತಾಲೂಕು ಕೃಷಿ ನಿರ್ದೇಶಕ ಸಹಾಯಕ ಕಚೇರಿಗೆ ಹೋಗಿ ಮನವಿಯನ್ನು ಸಲ್ಲಿಸಬಹುದಾಗಿದೆ. ಅಧಿಕಾರಿ ಅವರನೇ ಖುದ್ದಾಗಿ ಹೋಗಿ ಭೇಟಿ ಮಾಡುವ ಮೂಲಕ ನೀವು ಬೆಳೆ ವಿಮೆಯ ಸ್ಟೇಟಸ್ ಹಾಗೂ ಅರ್ಜಿ ಸಲ್ಲಿಸುವಿಕೆ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಈ ಮೂಲಕ ರೈತರು ತಮಗೆ ಸಿಗಬೇಕಾಗಿರುವಂತಹ ಕೃಷಿ ವಿಮೆಯ ಬಗ್ಗೆ ಅಪ್ಡೇಟ್ ಅನ್ನು ಪಡೆದುಕೊಳ್ಳಬಹುದಾಗಿದ್ದು ಇದನ್ನು ಅರ್ಹ ಆಗಿರುವಂತಹ ರೈತರಿಗೆ ಶೇರ್ ಮಾಡುವ ಮೂಲಕ ಅವರಿಗೂ ಕೂಡ ಇದರ ಬಗ್ಗೆ ಮಾಹಿತಿ ನೀಡುವಂತಹ ಕೆಲಸವನ್ನು ಮಾಡಬಹುದಾಗಿದೆ.

Comments are closed.