BSNL: ಅತ್ಯಂತ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದ BSNL ಸಂಸ್ಥೆ; ಜೀಯೋಗೂ ಕೂಡ ಪ್ರಾರಂಭ ಆಯ್ತು ಚಳಿ ಜ್ವರ!

BSNL: ಸಂಸ್ಥೆ ಭಾರತದ ಸರ್ಕಾರಿ ಸ್ವಾಮ್ಯತ್ಯದಲ್ಲಿ ಇರುವಂತಹ ಕಂಪನಿ ಆಗಿದ್ದು ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ತನ್ನದೇ ಆದಂತಹ ಪ್ರಭಾವವನ್ನು ಬೀರುತ್ತಿದೆ. ಆದರೆ ಕೆಲವು ವರ್ಷಗಳ ಹಿಂದೆ ಟೆಲಿಕಾಂ ಮಂಡಳಿಗೆ ಬಂದಿರುವಂತಹ ಹೊಸ ಕಂಪನಿಗಳ ಅದರಲ್ಲಿಯೂ ವಿಶೇಷವಾಗಿ ಜಿಯೋ ಕಂಪನಿಯ ಕಾರಣದಿಂದಾಗಿ ಸಾಕಷ್ಟು ಪೈಪೋಟಿಯನ್ನು ಎದುರಿಸುತ್ತಿದ್ದು ಈಗ ಮತ್ತೆ ಮೇಲೇರುವಂತಹ ಪ್ರಯತ್ನದಲ್ಲಿದೆ. ಅದಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ಕೂಡ BSNL ಸಂಸ್ಥೆತನ ಗ್ರಾಹಕರಿಗೆ ಪರಿಚಯಿಸುತ್ತಿದೆ.

ಸದ್ಯದ ಮಟ್ಟಿಗೆ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವಂತಹ ಅಥವಾ ವೇಗವಾಗಿ ಬೆಳೆಯುತ್ತಿರುವ ಕಂಪನಿಗಳು ಅಂದ್ರೆ ಅದು jio, Airtel, Vodaphone Idea ಎಂದು ಹೇಳಬಹುದಾಗಿದೆ. ಬೇರೆ ಬೇರೆ ರಿಚಾರ್ಜ್ ಪ್ಲಾನ್ ಗಳ ಮೂಲಕ ಹಾಗೂ ವೇಗವಾದ ಸರ್ವಿಸ್ ಗಳ ಮೂಲಕ ಈ ಕಂಪನಿಗಳು ಮಾಡರ್ನ್ ಟೆಲಿಕಾಂ ಇಂಡಸ್ಟ್ರಿಯಲ್ಲಿ ತಮ್ಮದೇ ಆದಂತಹ ಪ್ರಭಾವವನ್ನು ಹೊಂದಿವೆ. ಈ ಸಂದರ್ಭದಲ್ಲಿ ಕೂಡ ಸರ್ಕಾರಿ ಸಂಸ್ಥೆ ಆಗಿರುವ BSNL ಹಿಂದೆ ಬಿದ್ದಿಲ್ಲ ಎಂದು ಹೇಳಬಹುದು.

BSNL ನಿಂದ ಭರ್ಜರಿ ರಿಚಾರ್ಜ್ ಪ್ಲಾನ್

ಸರ್ಕಾರಿ ಸಂಸ್ಥೆ ಆಗಿರುವಂತಹ BSNL ಸದ್ಯದಲ್ಲೇ 4G ಸೇವೆಯನ್ನು ತನ ಗ್ರಾಹಕರಿಗೆ ನೀಡಬೇಕು ಎನ್ನುವಂತಹ ಪ್ರಯತ್ನದಲ್ಲಿದೆ. ಹಾಗಿದ್ದರೆ ತನ್ನ ಗ್ರಾಹಕರಿಗೆ BSNL ಪರಿಚಯಿಸಿರುವಂತಹ ಹೊಸ ರಿಚಾರ್ಜ್ ಪ್ಲಾನ್ ಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ.

1570 ರೂಪಾಯಿಗಳ ಪ್ಲಾನ್!

ಈ ರಿಚಾರ್ಜ್ ಪ್ಲಾನ್ ಮೂಲಕ ಗ್ರಾಹಕರು ಒಂದು ವರ್ಷಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳುತ್ತಾರೆ. ಪ್ರತಿದಿನ ಎರಡು ಜಿಬಿ ಇಂಟರ್ನೆಟ್ ಡೇಟಾ ಸಿಗುತ್ತದೆ. 100 ಉಚಿತ ಎಸ್ಎಂಎಸ್ ಗಳ ಜೊತೆಗೆ ಅನ್ಲಿಮಿಟೆಡ್ ಕಾಲಿಂಗ್ ಸೇವೆ ಕೂಡ ದೊರಕಲಿದೆ. ಒಂದು ವರ್ಷಗಳವರೆಗೆ ಲೋಕಲ್ ಹಾಗೂ ಎಸ್ ಟಿ ಡಿ ಕರೆಗಳನ್ನ ಯಾವುದೇ ತಲುಪಿಸಿ ಇಲ್ಲದೆ ಮಾಡಬಹುದಾಗಿದೆ.

2399 ರೂಪಾಯಿಗಳ ರಿಚಾರ್ಜ್ ಪ್ಲಾನ್!

395 ಅಂದ್ರೆ 13 ತಿಂಗಳುಗಳ ವ್ಯಾಲಿಡಿಟಿಯ ಜೊತೆಗೆ ನೀವು ಈ ರಿಚಾರ್ಜ್ ಪ್ಲಾನ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ನೆಟ್ವರ್ಕ್ ಗೆ ಉಚಿತವಾಗಿ ಅನ್ಲಿಮಿಟೆಡ್ ಫೋನ್ ಕಾಲ್ ಮಾಡಬಹುದಾಗಿದೆ. ಡೈಲಿ 100 ಮೆಸೇಜ್ ಕೂಡ ಉಚಿತ. ಎರಡು ಜಿಬಿ ಪ್ರತಿದಿನ ಇಂಟರ್ನೆಟ್ ಡೇಟಾ ಕೂಡ ಸಿಗುತ್ತೆ. PRBT ಸರ್ವಿಸ್ ಅನ್ನು ಕೂಡ ಬಿಎಸ್ಎನ್ಎಲ್ ಗ್ರಾಹಕರು ಈ ರಿಚಾರ್ಜ್ ಪ್ಲಾನ್ ಜೊತೆಗೆ ಪಡೆದುಕೊಳ್ಳಬಹುದಾಗಿದೆ. ನಿಮ್ಮ ಪರ್ಸನಲೈಸ್ಡ್ ರಿಂಗ್ಟೋನ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

2999 ರೂಪಾಯಿಗಳ ರಿಚಾರ್ಜ್ ಪ್ಲಾನ್!

ಪ್ರತಿದಿನ 100 ಉಚಿತ ಎಸ್ಎಂಎಸ್ ಗಳು ಹಾಗೂ ಅನಿಯಮಿತ ಕರೆ ಗಳು ಕೂಡ ನಿಮಗೆ ಈ ರೀಚಾರ್ಜ್ ಪ್ಲಾನ್ ಜೊತೆಗೆ ಸಿಗಲಿದೆ ಹಾಗೂ ಇದು 365 ದಿನಗಳ ವ್ಯಾಲಿಡಿಟಿ ಹೊಂದಿರುವಂತಹ ರೀಚಾರ್ಜ್ ಪ್ಲಾನ್ ಆಗಿದೆ. ಪ್ರತಿದಿನ ನಿಮಗೆ ಎರಡು ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಸೇವೆ ಕೂಡ ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ಸಾಕಷ್ಟು ಕಡೆಗಳಲ್ಲಿ ಬೇರೆ ಸಂಸ್ಥೆಗಳ ನೆಟ್ವರ್ಕ್ ಇರೋದಿಲ್ಲ ಅಲ್ಲಿ ಖಂಡಿತವಾಗಿ ಬಿಎಸ್ಎನ್ಎಲ್ ಗ್ರಾಹಕರಿಗೆ ಈ ರೀತಿಯ ಯೋಜನೆಗಳು ಸಾಕಷ್ಟು ಉಪಯುಕ್ತಕಾರಿಯಾಗಲಿವೆ.

Comments are closed.