RBI Rules: ಬ್ಯಾಂಕ್ ನಲ್ಲಿ ಸಾಲ ಮಡಲು ಈ ಮಾಹಿತಿ ನೀಡದಿದ್ರೆ ಲೋನ್ ಸಿಗಲ್ಲ; RBI ಹೊಸ ರೂಲ್ಸ್!

RBI Rules: ಮಾನವತನ ಪ್ರತಿಯೊಂದು ಬಯಕೆಗಳನ್ನು ಕೂಡ ಈಡೇರಿಸಿಕೊಳ್ಳಲು ಹಣದ ಅಗತ್ಯತೆಯನ್ನು ಹೊಂದಿರುತ್ತಾನೆ. ಕೆಲವೊಮ್ಮೆ ತಮ್ಮ ಅಗತ್ಯತೆಗಳನ್ನು ತಾವೇ ದುಡಿದಿರುವಂತಹ ಹಣದಲ್ಲಿ ಪೂರೈಸಿಕೊಳ್ಳುತ್ತಾರೆ ಇಲ್ಲವಾದಲ್ಲಿ ಬ್ಯಾಂಕಿನಿಂದ ಲೋನ್ ಪಡೆದುಕೊಂಡು ಅವುಗಳನ್ನು ಪೂರೈಸಿಕೊಳ್ಳುತ್ತಾನೆ. ಆದರೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಬ್ಯಾಂಕುಗಳ ಲೋನ್ ನಿಯಮಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವಂತೆ ಅಕ್ಟೋಬರ್ 1ರಿಂದ ಬದಲಾವಣೆಯಾಗಲಿವೆ ಎಂಬುದಾಗಿ ತಿಳಿದು ಬಂದಿದೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

ಅಕ್ಟೋಬರ್ 1ರಿಂದ ಬ್ಯಾಂಕ್ ಲೋನ್ ನಲ್ಲಿ ಜಾರಿಯಾಗಲಿದೆ ಹೊಸ ನಿಯಮ

ಜಾರಿಗೆ ಬರಲಿರುವಂತಹ ಹೊಸ ನಿಯಮದ ಪ್ರಕಾರ ಸಾಲಗಾರನು ಬಡ್ಡಿ ಹಾಗೂ ಇತರ ವೆಚ್ಚಗಳ ಅಗ್ರಿಮೆಂಟ್ ಅನ್ನು ಕೂಡ ದಾಖಲೆಗಳ ಸಹಿತ ನೀಡಬೇಕಾಗಿರುತ್ತದೆ. ವಿಶೇಷವಾಗಿ ಪರ್ಸನಲ್ ಲೋನ್ ನೀಡುವಂತಹ ಸಂದರ್ಭದಲ್ಲಿ ಕೂಡ ಎಲ್ಲ ರೀತಿಯ ಮಾಹಿತಿಗಳನ್ನು ಆರ್‌ಬಿಐಗೆ ಅಂದರೆ ಬ್ಯಾಂಕಿನವರಿಗೆ ಒದಗಿಸಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ ಹಾಗೂ ಪ್ರಮುಖವಾಗಿದೆ. ಆರ್ ಬಿ ಐ ಅೀನತೆ ಬರುವಂತಹ ಪ್ರತಿಯೊಂದು ಸಂಸ್ಥೆಗಳು ಕೂಡ ಗ್ರಾಹಕರಿಗೆ ಸಾಲದ ಬಗ್ಗೆ ಸಂಪೂರ್ಣ ಸ್ಪಷ್ಟತೆಯನ್ನು ನೀಡುವ ಕಾರಣಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೊಂಡಿದೆ.

ಅಕ್ಟೋಬರ್ 1ರಿಂದ ನಿಯಮದಲ್ಲಿ ಬದಲಾವಣೆ

ಒಟ್ಟಾರೆಯಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧೀನದಲ್ಲಿರುವಂತಹ ಪ್ರತಿಯೊಂದು ಬ್ಯಾಂಕಿಂಗ್ ಹಾಗೂ ನಾನ್ ಬ್ಯಾಂಕಿಂಗ್ ಕಂಪನಿಗಳು ಸಾಲಗಾರರಿಗೆ ಸಾಲ ನೀಡುವ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಪಾರದರ್ಶಕವಾಗಿರುವಂತಹ ಮಾಹಿತಿಗಳನ್ನು ಒದಗಿಸಬೇಕು ಎನ್ನುವಂತಹ ಉದ್ದೇಶದಿಂದ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ ಎನ್ನುವುದಾಗಿ ತಿಳಿದು ಬಂದಿದ್ದು ಇದು ಅಕ್ಟೋಬರ್ ಒಂದರಿಂದ ಕಾರ್ಯರೂಪಕ್ಕೆ ತರಬಹುದಾಗಿದೆ. ಹೊಸದಾಗಿ ಜಾರಿಗೆ ತರಲಿರುವಂತಹ ಈ ಮಾರ್ಗಸೂಚಿಗಳು ಕೇವಲ ಹೊಸ ಸಾಲಗಳಿಗೆ ಮಾತ್ರವಲ್ಲದೆ ಹಳೆಯ ಸಾಲಗಳಿಗೂ ಕೂಡ ಅನ್ವಯವಾಗುತ್ತದೆ ಎನ್ನುವಂತಹ ಮಾಹಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ.

ಈ ಪ್ರಮುಖ ನಿಯಮ ಕೂಡ ಜಾರಿಗೆ ಬರಲಿದೆ

KSS ನಲ್ಲಿ ನಮೂದಿಸದೆ ಇರುವಂತಹ ಹಾಗೂ ಅಗ್ರಿಮೆಂಟ್ ನಲ್ಲಿ ಯಾವುದೇ ರೀತಿಯಲ್ಲೂ ಕೂಡ ಅದರ ಬಗ್ಗೆ ಹೇಳದೆ ಇದ್ದಲ್ಲಿ ಆ ರೀತಿಯ ಶುಲ್ಕಗಳನ್ನು ಇನ್ಮುಂದೆ ಗ್ರಾಹಕರು ಪಾವತಿಸಬೇಕಾಗಿಲ್ಲ ಹಾಗೂ ಬ್ಯಾಂಕಿನವರು ಕೂಡ ಗ್ರಾಹಕರ ಒಪ್ಪಿಗೆ ಇಲ್ಲದೆ ಅವ್ಯಕ್ತ ಶುಲ್ಕಗಳನ್ನು ವಿಧಿಸುವ ಹಾಗಿಲ್ಲ ಎಂಬುದಾಗಿ ಕೂಡ ಈ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿಂತನೆ ನಡೆಸಿದೆ. ಇದೇ ರೀತಿಯ ಇನ್ನಷ್ಟು ಹೆಚ್ಚಿನ ಯೋಜನೆಗಳು ಕೂಡ ಕಾರ್ಯರೂಪಕ್ಕೆ ಬರಲಿವೆ. ಒಟ್ಟಾರೆಯಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳುವ ಗ್ರಾಹಕರಿಗೆ ಇನ್ನಷ್ಟು ಸುಲಭ ರೂಪದಲ್ಲಿ ಬ್ಯಾಂಕಿಂಗ್ ಸೇವೆಗಳು ಸಿಗಲಿ ಎನ್ನುವ ಕಾರಣಕ್ಕಾಗಿ ಈ ನಿಯಮಗಳನ್ನು ಜಾರಿಗೆ ತರುತ್ತಿದೆ.

Comments are closed.