Akshaya Tritiya 2024: ಅಕ್ಷಯ ತೃತೀಯದ ದಿನ ಚಿನ್ನವನ್ನೇ ಖರೀದಿಸಬೇಕೆಂದಿಲ್ಲ; ಈ ವಸ್ತುಗಳನ್ನು ಮನೆಗೆ ತಂದರೂ ಲಕ್ಷ್ಮಿದೇವಿ ನಿಮ್ಮ ಮನೆಗೆ ಬಂದು ಕೂರ್ತಾಳೆ!

Akshaya Tritiya 2024: ಹಿಂದೂ ಧರ್ಮದ ಆಚರಣೆಗಳ ಪ್ರಕಾರ ಸಾಕಷ್ಟು ದಿನಗಳು ಅತ್ಯಂತ ಮಹತ್ವದ್ದಾಗಿರುತ್ತದೆ ಅವುಗಳಲ್ಲಿ ಇದೇ ಮೇ ಹತ್ತಕ್ಕೆ ನಡೆಯಲಿರುವಂತಹ ಅಕ್ಷಯ ತೃತೀಯ ಕೂಡ ಅತ್ಯಂತ ಪವಿತ್ರ ಹಾಗೂ ಮಹತ್ವದ ದಿನಗಳಲ್ಲಿ ಒಂದಾಗಿರುತ್ತದೆ. ಸಾಮಾನ್ಯವಾಗಿ ಹಿರಿಯರ ಕಾಲದಿಂದಲೂ ಕೂಡ ನಾವು ತಿಳಿದುಕೊಂಡು ಬಂದಿರುವುದೇನೆಂದರೆ ಅಕ್ಷಯ ತೃತೀಯದ ದಿನದಂದು ಚಿನ್ನವನ್ನು ಖರೀದಿಸಿದರೆ ಶುಭ ಎಂಬುದಾಗಿ. ಇದರ ಜೊತೆಗೆ ಕೆಲವೊಂದು ಬೇರೆ ವಸ್ತುಗಳನ್ನು ಖರೀದಿಸಿದರೆ ಕೂಡ ಅದೃಷ್ಟ ಲಕ್ಷ್ಮಿ ಮನೆಗೆ ಬಂದು ನೆಲೆಸುತ್ತಾಳೆ. ಆ ವಸ್ತುಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ.

ಅಕ್ಷಯ ತೃತೀಯದ ಶುಭದಿನದಂದು ಈ ವಸ್ತುಗಳನ್ನು ಖರೀದಿಸಿ ಮನೆಗೆ ತನ್ನಿ

  1. ಅಕ್ಷಯ ತೃತೀಯದ ಶುಭದಿನದಂದು ಲಕ್ಷ್ಮಿಯ ಪ್ರತೀಕ ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳುವ ಶ್ರೀ ಯಂತ್ರವನ್ನು ಮನೆಗೆ ತಂದರೆ ಶುಭ ಎಂಬುದಾಗಿ ವಾಸ್ತು ಶಾಸ್ತ್ರಗಳು ಹೇಳುತ್ತವೆ. ಸರಿಯಾದ ರೀತಿಯಲ್ಲಿ ಇದನ್ನು ಖರೀದಿಸಿ ತಂದು ಮನೆಯ ಸರಿಯಾದ ದಿಕ್ಕಿನಲ್ಲಿ ಇದನ್ನು ಸ್ಥಾಪಿಸಬೇಕು. ಅಕ್ಷಯ ತೃತೀಯ ದಿನದಂದು ಹಾಗೂ ಪ್ರತಿ ಶುಕ್ರವಾರದ ದಿನದಂದು ಇದನ್ನು ಸರಿಯಾದ ರೀತಿಯಲ್ಲಿ ಪೂಜೆ ಮಾಡಿದರೆ ಮನೆಯಲ್ಲಿ ಖಂಡಿತವಾಗಿ ಧನುಲಕ್ಷ್ಮಿ ಬಂದು ನೆಲೆಸುತ್ತಾಳೆ.
  2. ಲಕ್ಷ್ಮಿಯ ಆರಾಧನೆಗೆ ಹಳದಿ ಬಣ್ಣದ ಕವಡೆಗಳು ಇರಲೇಬೇಕು ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ. ಅಷ್ಟರ ಮಟ್ಟಿಗೆ ಹಳದಿ ಕವಡೆಗಳು ಲಕ್ಷ್ಮಿ ದೇವಿಗೆ ಇಷ್ಟ ಆಗಿರುತ್ತವೆ. ಒಂದು ವೇಳೆ ನೀವು ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದಕ್ಕೆ ಸಾಧ್ಯವಾಗಿಲ್ಲ ಅಂದ್ರೆ ಅಷ್ಟೊಂದು ಹಣವಿಲ್ಲ ಅಂದ್ರೆ ಕನಿಷ್ಠ ಪಕ್ಷ ಹಳದಿ ಕವಡೆಗಳನ್ನಾದರೂ ಖರೀದಿಸಿ. ಲಕ್ಷ್ಮೀದೇವಿಯ ಎದುರಿಗೆ ಇಟ್ಟು ಇದನ್ನು ಪೂಜಿಸುವುದರ ಮೂಲಕ ನೀವು ಪುಣ್ಯ ಸಂಪಾದನೆಯನ್ನು ಮಾಡಬಹುದಾಗಿದೆ ಹಾಗೂ ಲಕ್ಷ್ಮಿಯ ಕೃಪೆಯನ್ನು ಪಡೆದುಕೊಳ್ಳಬಹುದಾಗಿದೆ.
  3. ಅಕ್ಷಯ ತೃತೀಯದ ದಿನ ಲಕ್ಷ್ಮೀದೇವಿಗೆ ವಿಶೇಷವಾಗಿ ಮೀಸಲಾಗಿರುಸುವಂತಹ ದಿನ ಆಗಿದೆ ಆದರೆ ಈ ಸಂದರ್ಭದಲ್ಲಿ ಪರಶಿವನ ಪೂಜೆ ಮಾಡುವುದರ ಮೂಲಕ ಕೂಡ ಪುಣ್ಯ ಸಂಪಾದನೆಯನ್ನು ಮಾಡಬಹುದಾಗಿದೆ. ಸ್ಪಟಿಕ ಶಿವಲಿಂಗವನ್ನು ಮನೆಗೆ ತಂದು ವಿಧಿವತ್ತಾಗಿ ಪೂಜೆ ಮಾಡುವ ಮೂಲಕ ಶಿವನ ಆಶೀರ್ವಾದವನ್ನು ಪಡೆದುಕೊಂಡು ಹಣ ಹಾಗೂ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೂಡ ಆತನ ಕೃಪೆಯಿಂದ ನೀವು ಪಡೆದುಕೊಳ್ಳಬಹುದಾಗಿದೆ.
  4. ನಮ್ಮ ಶಾಸ್ತ್ರಗಳ ಪ್ರಕಾರ ಯಾವತ್ತೂ ಕೂಡ ಶಂಖ ಇರುವಂತಹ ಮನೆಯಲ್ಲಿ ಯಾವುದೇ ಕಾರಣಕ್ಕೂ ಬಡತನ ಇರುವುದಿಲ್ಲ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕಾಗಿ ಅಕ್ಷಯ ತೃತೀಯದ ದಿನದಂದು ಒಂದು ವೇಳೆ ಯಾರಿಗಾದರೂ ಚಿನ್ನವನ್ನು ಖರೀದಿ ಮಾಡಲು ಸಾಧ್ಯವಾಗಿಲ್ಲ ಅಂದ್ರೆ ದಕ್ಷಿಣಾವರ್ತಿ ಶಂಖವನ್ನು ಖರೀದಿಸಿ ತಂದು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಿದರೂ ಕೂಡ ಲಕ್ಷ್ಮಿ ಒಲಿಯುತ್ತಾಳೆ.

ಈ ವಸ್ತುಗಳನ್ನು ಖರೀದಿ ಮಾಡುವ ಮೂಲಕ ಅಕ್ಷಯ ತೃತೀಯದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬಹುದಾಗಿದೆ.

Comments are closed.