PAN Card: ಇನ್ಮುಂದೆ ಪ್ಯಾನ್ ಕಾರ್ಡ್ ಕಳೆದುಹೋದರೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್; ನಿಮಗಾಗಿ ಬಂದಿದೆ ನೋಡಿ ದೊಡ್ಡ ಅಪ್ಡೇಟ್!

PAN Card: ಪಾನ್ ಕಾರ್ಡ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಣಕಾಸಿನ ವಿಚಾರದಲ್ಲಿ ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ ಸರ್ಕಾರಿ ದಾಖಲೆ ಪತ್ರವಾಗಿದೆ. ಬ್ಯಾಂಕ್ ಖಾತೆ ತೆರೆಯುವುದು, ಟ್ಯಾಕ್ಸ್ ಕಟ್ಟೋದು ಸೇರಿದಂತೆ ಸಾಕಷ್ಟು ಹಣಕಾಸಿನ ವಿಚಾರಗಳಲ್ಲಿ ಪಾನ್ ಕಾರ್ಡ್ ಇಲ್ಲದೆ ಹೋದಲ್ಲಿ ಯಾವುದೇ ಕೆಲಸ ನಡೆಯೋದಿಲ್ಲ ಅನ್ನೋದನ್ನ ನೀವೆಲ್ಲರೂ ತಿಳಿದುಕೊಳ್ಳಬೇಕಾಗಿರುತ್ತದೆ. ಪಾನ್ ಕಾರ್ಡ್ ಇಲ್ಲದೆ ಹೋದಲ್ಲಿ ಸಾಕಷ್ಟು ಕೆಲಸಗಳು ಅರ್ಧಕ್ಕೆ ನಿಂತುಹೋಗುವಂತಹ ಸಾಧ್ಯತೆ ಇರುತ್ತದೆ ಹಾಗೂ ಕೆಲವೊಮ್ಮೆ ಅದರಿಂದಾಗಿ ಹಣಕಾಸಿನ ನಷ್ಟ ಉಂಟಾಗುವಂತಹ ಸಾಧ್ಯತೆ ಕೂಡ ಇರುತ್ತದೆ ಎಂದು ನೀವು ತಿಳಿದುಕೊಳ್ಳಬೇಕಾಗುತ್ತದೆ. ಇಷ್ಟೊಂದು ಪ್ರಮುಖವಾಗಿರುವಂತಹ ಪಾನ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ ಅಥವಾ ಯಾರಾದರೂ ಕದ್ದರೆ ಏನು ಮಾಡಬೇಕು ಅನ್ನುವುದಾಗಿ ಖಂಡಿತವಾಗಿ ನಿಮಗೆ ತಲೆಯಲ್ಲಿ ತೋಚುವುದಿಲ್ಲ. ಆ ಸಂದರ್ಭದಲ್ಲಿ ನೀವು ಹೆಚ್ಚಿನ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಯಾವ ರೀತಿಯಲ್ಲಿ ಪಾನ್ ಕಾರ್ಡ್ ಅನ್ನು ನೀವು ಮರಳಿ ಪಡೆದುಕೊಳ್ಳಬಹುದಾಗಿನ್ನುವುದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಪಾನ್ ಕಾರ್ಡ್ ಕಳೆದು ಹೋದಾಗ ಈ ರೀತಿ ಮಾಡಿ!

ಪಾನ್ ಕಾರ್ಡ್ ಕಳೆದು ಹೋದಾಗ ಬಹುತೇಕ ಎಲ್ಲರೂ ಕೂಡ ಸ್ವಲ್ಪ ಮಟ್ಟಿಗೆ ಟೆನ್ಶನ್ ಆಗ್ತಾರೆ. ಆದರೆ ನೀವು ಈ ರೀತಿ ಮಾಡಬೇಕಾದ ಅಗತ್ಯವಿಲ್ಲ ಮನೆಯಲ್ಲಿ ಕುಳಿತುಕೊಂಡ ನೀವು ಪಾನ್ ಕಾರ್ಡ್ ಗೆ ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ನೀವು ಬೇರೇನು ಮಾಡಬೇಕಾದ ಅಗತ್ಯವಿಲ್ಲ ನೇರವಾಗಿ NSDL ವೆಬ್ಸೈಟ್ಗೆ ಲಾಗಿನ್ ಆಗ್ಬೇಕು ಹಾಗೂ ಅಲ್ಲಿ ಪಾನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಇಲ್ಲಿ ಕೇಳಲಾಗುವಂತಹ ಪ್ರಕ್ರಿಯೆಗಳ ಪ್ರಕಾರ ನೀವು ನಡೆದುಕೊಂಡರೆ ನಿಮಗೆ ನಿಮ್ಮ ಪಾನ್ ಕಾರ್ಡ್ ಕೈಗೆ ಸಿಗುತ್ತದೆ.

ಲಾಗಿನ್ ಆದ ನಂತರ ಪಾನ್ ಕಾರ್ಡ್ ವಿಚಾರದ ಬಗ್ಗೆ ಕೆಲವೊಂದು ಮಾಹಿತಿಯನ್ನು ಕೇಳಲಾಗುತ್ತದೆ ಉದಾಹರಣೆಗೆ ನಿಮ್ಮ ಹಳೆಯ ಪಾನ್ ಕಾರ್ಡ್ ನಂಬರ್ ಅದರ ಜೊತೆಗೆ ಪ್ರಮುಖ ದಾಖಲೆ ಆಗಿರುವಂತಹ ಆಧಾರ್ ಕಾರ್ಡ್ ನಂಬರನ್ನು ಕೂಡ ಕೇಳಲಾಗುತ್ತದೆ. ಇವುಗಳ ಜೊತೆಗೆ ಕೆಲವೊಂದು ಬೇರೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕೂಡ ಈ ಸಂದರ್ಭದಲ್ಲಿ ಕೇಳಲಾಗುತ್ತದೆ ಕೇಳಿರುವಂತಹ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡುವುದು ನೀವು ಮಾಡಬೇಕಾಗಿರುವ ಅತ್ಯಂತ ಪ್ರಮುಖವಾದ ಕೆಲಸವಾಗಿದೆ.

ಇದಾದ ನಂತರ ನಿಮ್ಮ ಪಾನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಪ್ರತಿಯೊಂದು ಮಾಹಿತಿಗಳು ಕೂಡ ನಿಮಗೆ ಇದರಲ್ಲಿ ದೊರಕುತ್ತವೆ. ಇಲ್ಲಿ ನಿಮಗೆ ಹಳೆಯ ಪಾನ್ ಕಾರ್ಡ್ ಗೆ ಸಂಬಂಧಪಟ್ಟಂತೆ ಡೂಪ್ಲಿಕೇಟ್ ಪಾನ್ ಕಾರ್ಡ್ ಪಡೆದುಕೊಳ್ಳುವಂತಹ ಆಪ್ಷನ್ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ಡುಪ್ಲಿಕೇಟ್ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳುವುದಕ್ಕಿಂತ ಮುಂಚೆ ನೀವು 50 ರೂಪಾಯಿಗಳ ಶುಲ್ಕವನ್ನು ಕಟ್ಟಬೇಕಾಗುತ್ತದೆ. ರೂ.50 ಗಳ ಶುಲ್ಕವನ್ನು ಕಟ್ಟಿದ ನಂತರ ನಿಗದಿತ ದಿನಾಂಕದೊಳಗೆ ಡೂಪ್ಲಿಕೇಟ್ ಪಾನ್ ಕಾರ್ಡ್ ನಿಮ್ಮ ಕೈಗೆ ಬರುತ್ತದೆ. ಇದರಲ್ಲಿ ನಿಮ್ಮ ಹಳೆಯ ಪಾನ್ ಕಾರ್ಡ್ ಯಾವ ರೀತಿಯಲ್ಲಿ ಇತ್ತು, ಅದೇ ರೀತಿಯಲ್ಲಿ ನಂಬರ್ ಹಾಗೂ ಪ್ರತಿಯೊಂದು ಮಾಹಿತಿಗಳು ಕೂಡ ಇರಲಿವೆ ಇದು ಕೇವಲ ನಿಮ್ಮ ಪಾನ್ ಕಾರ್ಡಿನ ಡೂಪ್ಲಿಕೇಟ್ ಪಾನ್ ಕಾರ್ಡ್ ಆಗಿದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ. ಈ ಮೂಲಕ ನೀವು ನಿಮ್ಮ ಪಾನ್ ಕಾರ್ಡ್ ಅನ್ನು ಮತ್ತೆ ಮರಳಿ ಪಡೆದುಕೊಳ್ಳಬಹುದಾಗಿದೆ.

Comments are closed.