Post Office : ವಯಸ್ಸಾದ್ರೂ ಹಣ ಮಾಡಬಹುದು ಈ ಯೋಜನೆಯಲ್ಲಿ; ಇಲ್ಲಿದೆ ಹೊಸ ಯೋಜನೆಯ ಡಿಟೇಲ್ಸ್!

Post Office: ವರ್ಷಗಳಲ್ಲಿ ಪೋಸ್ಟ್ ಆಫೀಸ್ ಯೋಜನೆಗಳನ್ನು ಹಿರಿಯ ನಾಗರಿಕರಿಗೆ ವಿಶೇಷವಾಗಿ ಜಾರಿಗೆ ತರುವಂತಹ ಕೆಲಸವನ್ನು ಮಾಡಿದೆ. ಅವುಗಳಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಕೂಡ ಒಂದಾಗಿದೆ. ಹಾಗಿದ್ರೆ ಬನ್ನಿ ಈ ಯೋಜನೆಯ ಮೂಲಕ ಯಾವ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ಹಿರಿಯ ನಾಗರಿಕರು ಕೈ ತುಂಬಾ ಹಣವನ್ನು ಸಂಪಾದನೆ ಮಾಡಬಹುದಾಗಿದೆ ಎನ್ನುವುದರ ಬಗ್ಗೆ ವಿವರವನ್ನು ತಿಳಿದುಕೊಳ್ಳೋಣ.

ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನ ಸಂಪೂರ್ಣ ಮಾಹಿತಿ!

ಈ ಯೋಜನೆಯಲ್ಲಿ ಅರವತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಹಣವನ್ನು ಹೂಡಿಕೆ ಮಾಡಬಹುದಾಗಿದ್ದು ಮಾತ್ರವಲ್ಲದೆ 1.5 ಲಕ್ಷ ರೂಪಾಯಿಗಳವರೆಗೆ ಟ್ಯಾಕ್ಸ್ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳುವಂತಹ ಅವಕಾಶವನ್ನು ಹೊಂದಿದ್ದಾರೆ. ಹಣದ ಹೂಡಿಕೆ ನಂತರ ಮುಂದುವರೆಸಬಹುದಾಗಿದೆ.

ಇನ್ನು ಇದರಲ್ಲಿ 50ರಿಂದ 60 ವರ್ಷದ ನಡುವಿನ ಸೇನೆಯ ನಿವೃತ್ತ ಅಧಿಕಾರಿಗಳು ಕೂಡ ಹೂಡಿಕೆ ಮಾಡಬಹುದಾಗಿದೆ. ಸಾವಿರ ರೂಪಾಯಿಗಳಿಂದ 30 ಲಕ್ಷ ರೂಪಾಯಿಗಳ ವರೆಗೂ ಕೂಡ ಹೂಡಿಕೆ ಮಾಡುವಂತಹ ಅವಕಾಶವನ್ನು ಯೋಜನೆಯಲ್ಲಿ ನೀಡಲಾಗುತ್ತದೆ. ಎಲ್ಲಕ್ಕಿಂತ ಖುಷಿ ತರುವ ಮತ್ತೊಂದು ವಿಚಾರ ಅಂದ್ರೆ 1981ರ ಇನ್ಕಮ್ ಟ್ಯಾಕ್ಸ್ 80 c ಪ್ರಕಾರ ನೀವು ಇನ್ಕಮ್ ಟ್ಯಾಕ್ಸ್ ರಿಯಾಯಿತಿ ಪಡೆದುಕೊಳ್ಳಲಿದ್ದೀರಿ.

ಹೂಡಿಕೆಯಲ್ಲಿ ಸಿಗುವ ರಿಟರ್ನ್!

ಈ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೆ 8.2% ಬಡ್ಡಿದರವನ್ನು ರಿಟರ್ನ್ ರೂಪದಲ್ಲಿ ನೀಡಲಾಗುತ್ತಿದೆ. ಸಿಗುವಂತಹ ಬಡ್ಡಿಯನ್ನು ಸೇವಿಂಗ್ ಖಾತೆಯಲ್ಲಿ ಕ್ರೆಡಿಟ್ ಮಾಡಲಾಗುತ್ತದೆ. ವಾರ್ಷಿಕವಾಗಿ 50,000ಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆದುಕೊಂಡರೆ ಅದು ಟ್ಯಾಕ್ಸ್ ರೂಪದಲ್ಲಿ ಕಟ್ಟ ಬೇಕಾಗುವಂತಹ ಹಣದ ರೂಪದಲ್ಲಿ ಕಾಣಲಾಗುತ್ತದೆ ಹೀಗಾಗಿ ನಿಮಗೆ ಈ ಹೂಡಿಕೆಯ ಮೇಲೆ ಟಿಡಿಎಸ್ ರೀತಿಯಲ್ಲಿ ಕಡಿತಗೊಳಿಸಲಾಗುತ್ತದೆ. 15g 15h ಫಾರ್ಮ್ ಅನ್ನು ನೀವು ತುಂಬಿಸುವುದರ ಮೂಲಕ ಟ್ಯಾಕ್ಸ್ ಲಿಮಿಟ್ ಗಿಂತ ಹೆಚ್ಚಾಗದೆ ಹೋದಲ್ಲಿ ಅದರ ಮೇಲೆ ನೀವು ಟ್ಯಾಕ್ಸ್ ಕಟ್ಟಬೇಕಾದ ಅಗತ್ಯ ಇರುವುದಿಲ್ಲ.

ಅಕೌಂಟ್ ಬಂದ್ ಮಾಡೋದು ಹೀಗೆ!

ಈ ಯೋಜನೆಯಲ್ಲಿ ಅಕೌಂಟ್ ಅನ್ನು 5 ವರ್ಷಗಳ ನಂತರ ಮುಚ್ಚಬಹುದಾದಂತಹ ಅವಕಾಶವನ್ನು ಪೋಸ್ಟ್ ಆಫೀಸ್ ಮಾಡಿಕೊಡುತ್ತದೆ. ಒಂದು ವೇಳೆ ಹೂಡಿಕೆದಾರ ಮರಣ ಹೊಂದಿದ್ರೆ ಆತ ಮರಣ ಹೊಂದಿದ ತಾರೀಖಿನಿಂದ ಬಡ್ಡಿ ಬರುವುದಕ್ಕೆ ಪ್ರಾರಂಭವಾಗುತ್ತದೆ ಹಾಗೂ ಅದನ್ನು ಅವರ ನಾಮಿನೇಷನ್ ಮಾಡಿರುವಂತಹ ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿರುವವರು ತಮ್ಮ ಪತ್ನಿಯನ್ನು ಕೂಡ ಈ ಸಂದರ್ಭದಲ್ಲಿ ನಾಮಿನೇಷನ್ ರೂಪದಲ್ಲಿ ನಾಮನಿರ್ದೇಶನ ಮಾಡಬಹುದಾಗಿದೆ.

Comments are closed.