Cricket News: ಮೊನ್ನೆ ಅವಮಾನ ಮಾಡಿದ್ದ ಲಕ್ನೋ ತಂಡದ ಮಾಲೀಕ ಇವತ್ತು ರಾಹುಲ್ ಗೆ ಏನು ಮಾಡಿದ್ದಾರೆ ಗೊತ್ತಾ?

Cricket News: ಕೆ ಎಲ್ ರಾಹುಲ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಆಗಿದ್ದಾರೆ. ಆದರೆ ಹೈದರಾಬಾದ್ ತಂಡದ ವಿರುದ್ಧ ಮೊನ್ನೆ ಸೋತಿರುವ ರೀತಿಯನ್ನು ನೋಡಿ ಖಂಡಿತವಾಗಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಿದ್ದಾರೆ ಅಥವಾ ಅವರೇ ತಂಡವನ್ನು ಬಿಟ್ಟು ಹೋಗಲಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಪ್ರಾರಂಭವಾಗಿದ್ದವು. ಇದಕ್ಕೆ ಪ್ರಮುಖ ಕಾರಣ ಮ್ಯಾಚ್ ಸೋತ ನಂತರ ತಂಡದ ಮಾಲೀಕ ಆಗಿರುವಂತಹ ಸಂಜೀವ್ ಗೋಯಂಕ ಕೆ ಎಲ್ ರಾಹುಲ್ ಅವರ ಜೊತೆಗೆ ಮಾತನಾಡಿರುವ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಅವರು ಕೆ ಎಲ್ ರಾಹುಲ್ ಅವರಿಗೆ ಮೈದಾನದ ನಡುವೆ ಎಲ್ಲರ ಎದುರಿಗೆ ಬೈತಾ ಇರೋದು ಸ್ಪಷ್ಟವಾಗಿ ಕಂಡುಬಂದಿತ್ತು.

ಇದನ್ನ ನೋಡಿರುವಂತಹ ಸೋಶಿಯಲ್ ಮೀಡಿಯಾದ ಬಳಕೆದಾರರು ಇಂತಹ ತಂಡದಲ್ಲಿ ಇರಬೇಡಿ ಕೆ ಎಲ್ ರಾಹುಲ್ ತಂಡದಿಂದ ಹೊರಗೆ ಬಂದು ಬಿಡಿ ಎಂಬುದಾಗಿ ಸಲಹೆ ನೀಡುವುದಕ್ಕೆ ಪ್ರಾರಂಭ ಮಾಡಿದ್ರು. ಇನ್ನು ಸಾಕಷ್ಟು ಕ್ರಿಕೆಟ್ ತಜ್ಞರು ಕೂಡ ಕೆ ಎಲ್ ರಾಹುಲ್ ಖಂಡಿತವಾಗಿ ಈ ಬಾರಿಯ ಐಪಿಎಲ್ ನಲ್ಲಿ ಮುಂದಿನ ಪಂದ್ಯಗಳಲ್ಲಿ ಲಕ್ನೋ ತಂಡದ ಪರವಾಗಿ ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲ ಹಾಗೂ ಮುಂದಿನ ಬಾರಿ ಐಪಿಎಲ್ ನಲ್ಲಿ ಹರಾಜು ಪ್ರಕ್ರಿಯೆಗೆ ತಮ್ಮನ್ನು ತಾವು ಆಕ್ಟಿವ್ ಮಾಡಲಿದ್ದಾರೆ ಹಾಗೂ ತಂಡದಿಂದ ಹೊರ ಬೀಳಲಿದ್ದಾರೆ ಎಂಬಂತಹ ಮಾಹಿತಿಗಳನ್ನು ಕೂಡ ಹರಡಿದ್ರು. ಆದರೆ ಈಗ ಆಗ್ತಾ ಇರೋದನ್ನ ನೋಡಿದ್ರೆ ಪ್ರತಿಯೊಬ್ಬರೂ ಕೂಡ ಗೊಂದಲದಲ್ಲಿ ಇದ್ದಾರೆ ಎಂದು ಹೇಳಬಹುದಾಗಿದೆ.

ಮನೆಗೆ ಕರೆಸಿ ರಾಹುಲ್ ಅವರಿಗೆ ಊಟ ಹಾಕಿದ ಓನರ್!

ಹೌದು ಇಷ್ಟೆಲ್ಲಾ ಆದ್ಮೇಲೆ ಈಗ ಸಂಜೀವ್ ಗೋಯೆಂಕ ತಮ್ಮ ನಿವಾಸಕ್ಕೆ ಲಕ್ನೋ ತಂಡದ ನಾಯಕ ಆಗಿರುವಂತಹ ಕೆಎಲ್ ರಾಹುಲ್ ಅವರನ್ನು ಕರೆದು ಊಟ ಹಾಕಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಅವರಿಬ್ಬರೂ ಆಲಂಗಿಸಿಕೊಂಡಿರುವಂತಹ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಬಳಕೆದಾರರು ಹಾಗೂ ಅಭಿಮಾನಿಗಳು ಇಷ್ಟೊಂದು ಬೇಗ ಎಲ್ಲ ಸರಿಹೋಯ್ತ ಎನ್ನುವುದಾಗಿ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಕೆಲವರಂತೂ ಸೋಶಿಯಲ್ ಮೀಡಿಯಾದಲ್ಲಿ ಗೋಯಂಕ ವಿರುದ್ಧ ಈಗಲೂ ಕೂಡ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ ಇದ್ದು ತಮ್ಮ ತಪ್ಪುಗಳನ್ನು ತೇಪೆ ಹಚ್ಚುವುದಕ್ಕಾಗಿ ಈ ರೀತಿ ತೋರಿಕೆಯ ಪ್ರೀತಿ ಹಾಗೂ ಗೌರವವನ್ನು ಅವರು ತೋರಿಸುತ್ತಿದ್ದಾರೆ ಎಂಬುದಾಗಿ ಕಾಮೆಂಟ್ ಮಾಡಲು ಪ್ರಾರಂಭ ಮಾಡಿದ್ದಾರೆ. ಇನ್ನು ಕೆಲವರು ಅಷ್ಟೊಂದು ಪ್ರೀತಿ ಇದ್ರೆ ಮೈದಾನದಲ್ಲಿ ಆ ರೀತಿ ಯಾಕೆ ನಡೆದುಕೊಳ್ಳಬೇಕಾಗಿತ್ತು ಎಂಬುದಾಗಿ ಕೂಡ ಹೇಳಿದ್ದಾರೆ. ಈ ಹಿಂದೆ ಪುಣೆ ತಂಡದ ಮಾಲೀಕ ಆಗಿದ್ದ ಸಂದರ್ಭದಲ್ಲಿ ಗೋಯಂಕ ಮೊದಲ ಸೀಸನ್ ನಲ್ಲಿ ಪುಣೆ ತಂಡ ಅಷ್ಟನ್ನು ಚೆನ್ನಾಗಿ ಪರ್ಫಾರ್ಮೆನ್ಸ್ ಮಾಡಿಲ್ಲ ಎನ್ನುವ ಕಾರಣಕ್ಕಾಗಿ ಎರಡನೇ ಸೀಸನ್ನಲ್ಲಿ ಧೋನಿ ಅವರನ್ನು ನಾಯಕತ್ವದಿಂದ ತೆಗೆದಿದ್ದನ್ನು ಕೂಡ ನಾವು ಇಲ್ಲಿ ನೆನಪು ಮಾಡಿಕೊಳ್ಳಬಹುದಾಗಿದೆ.

Comments are closed.