Sudharani: ನಟಿ ಸುಧಾರಾಣಿ ಅವರು ತಮ್ಮ ಮೊದಲ ಗಂಡನಿಂದ ಡಿವೋರ್ಸ್ ಪಡೆದುಕೊಂಡಿದ್ದು ಯಾಕೆ ಗೊತ್ತಾ?

Sudharani: ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವಂತಹ ಸುಧಾರಾಣಿ ಅವರು ಕನ್ನಡ ಚಿತ್ರರಂಗಕ್ಕೆ ನಾಯಕನಟಿಯಾಗಿ ಕಾಲಿಟ್ಟಿದ್ದು ಕೂಡ ಅತ್ಯಂತ ಚಿಕ್ಕವಯಸ್ಸಿನಲ್ಲಿ ಎಂದರು ತಪ್ಪಾಗಲಾರದು. ಆನಂದ್ ಸಿನಿಮಾದ ಮೂಲಕ ಶಿವಣ್ಣ ಹಾಗೂ ಸುಧಾರಾಣಿ ಇಬ್ರು ಕೂಡ ನಾಯಕ ನಾಯಕಿಯರಾಗಿ ಕನ್ನಡ ಚಿತ್ರರಂಗ ಪರಿಚಿತರಾಗುತ್ತಾರೆ. ಅಲ್ಲಿಂದ ಆಚೆಗೆ ತಮ್ಮ ಸಿನಿಮಾ ಜೀವನದಲ್ಲಿ ಸುಧಾರಾಣಿ ಅವರು ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ.

ಸುಧಾರಾಣಿ ಅವರ ವೈಯಕ್ತಿಕ ಜೀವನ!

ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸುಧಾರಾಣಿ ಅವರು ಮದುವೆಯಾಗಿದ್ದು ವೈದ್ಯ ಸಂಜಯ್ ಅವರನ್ನು. ಮದುವೆಯಾದ ಮೇಲೆ ಚಿತ್ರರಂಗವನ್ನು ಬಿಟ್ಟು ಸುಧಾರಾಣಿ ಅವರು ತಮ್ಮ ಗಂಡ ಸಂಜೆ ಅವರ ಜೊತೆಗೆ ಅಮೇರಿಕಾದಲ್ಲಿ ನೆಲೆಸುತ್ತಾರೆ. ನಂತರ ಇವರಿಬ್ಬರ ದಾಂಪತ್ಯ ಜೀವನ ಎಷ್ಟರ ಮಟ್ಟಿಗೆ ಹಾಳಾಗಿ ಹೋಯಿತು ಅಂದರೆ ತಮ್ಮ ಗಂಡನಿಂದಲೇ ಸುಧಾರಾಣಿ ಅವರಿಗೆ ಜೀವ ಬೆದರಿಕೆ ಬಂದಿತ್ತು. ಅಮೆರಿಕಾದಲ್ಲಿ ಸುಧಾರಾಣಿ ಅವರಿಗೆ ಅವರ ಗಂಡ ಸಾಕಷ್ಟು ಟಾರ್ಚರ್ ನೀಡ್ತಾ ಇದ್ರು. ಕೆಮಿಕಲ್ ಅನ್ನು ದೇಹದ ಒಳಗೆ ಇಂಜೆಕ್ಟ್ ಮಾಡ್ತೀನಿ ಅಂತ ಕೂಡ ಹೇಳ್ತಾ ಇದ್ರಂತೆ.

ಆ ಸಂದರ್ಭದಲ್ಲಿ ಅವರ ಪಾಸ್ ಪೋರ್ಟ್ ಅನ್ನು ಕೂಡ ಅವರ ಗಂಡ ಕಿತ್ಕೊಂಡು ಇಟ್ಟಿದ್ರಂತೆ. ಹೊಟ್ಟೆಗೆ ತಿನ್ನೋದಕ್ಕೆ ಕೂಡ ಸುಧಾರಾಣಿ ಅವರಿಗೆ ಏನು ಇದ್ದಿರಲಿಲ್ಲ. ಅಲ್ಲಿಂದ ಯಾವುದೋ ರೀತಿಯಲ್ಲಿ ಸುಧಾರಾಣಿ ತಪ್ಪಿಸಿಕೊಂಡು ಭಾರತಕ್ಕೆ ಬಂದ ನಂತರ ಅವರಿಗೆ ಮದುವೆ ಮೇಲೆ ಇದ್ದಂತಹ ನಂಬಿಕೆನೇ ಹೊರಟು ಹೋಗಿತ್ತು.

ಸುಧಾರಾಣಿ ಎರಡನೇ ಮದುವೆ

ಇದಾದ ನಂತರವೇ ಸುಧಾರಾಣಿ ಅವರ ಜೀವನದಲ್ಲಿ ಬಂದಿದ್ದು ಅವರ ಎರಡನೇ ಪತಿ, ಗೋವರ್ಧನ್ ರವರು. ಗೋವರ್ಧನ್ ಅವರನ್ನು 2ನೇ ಮದುವೆ ಆಗಿರುವಂತಹ ಸುಧಾರಾಣಿ ನಿಧಿ ಎನ್ನುವಂತಹ ಮಗಳಿಗೆ ತಾಯಿಯಾಗಿದ್ದಾರೆ. ಈಗ ಅವರ ಮಗಳು ಕೂಡ ಚಿತ್ರರಂಗಕ್ಕೆ ಬರುವಂತಹ ತಯಾರಿಯಲ್ಲಿದ್ದು ಸುಧಾರಾಣಿ ಅವರು ಕೂಡ ಮತ್ತೆ ಪೋಷಕ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರು ಪಾದರ್ಪಣೆ ಮಾಡಿದ್ದಾರೆ. ಸುಧಾರಾಣಿ ಅವರ ತಲೆಯ ಮೇಲೆ ಯಾವ ರೀತಿಯಲ್ಲಿ ಜೀವನ ಮಾಡುತ್ತಿದ್ದಾರೆ ಅಂತ ಪ್ರತಿಯೊಬ್ಬರಿಗೂ ಗೊತ್ತು ಆದರೆ ಈ ರೀತಿಯ ಜೀವನದ ಬಗ್ಗೆ ಯಾರಿಗೂ ಕೂಡ ತಿಳಿದಿರುವುದು ವಿರಳ ಅಂತ ಹೇಳಬಹುದು. ಇದೇ ರೀತಿ ಸಾಕಷ್ಟು ಕಲಾವಿದರ ತೆರೆಯ ಮೇಲಿನ ನಟನ ಜೀವನದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿರುತ್ತಾರೆ ಆದರೆ ನಿಜ ಜೀವನದಲ್ಲಿ ಅವರು ಎಷ್ಟು ಕಷ್ಟ ಪಡುತ್ತಿರುತ್ತಾರೆ ಹಾಗೂ ಪಟ್ಟಿದ್ದಾರೆ ಅನ್ನೋದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಕೂಡ ಅವರ ತೆರೆಯ ಮೇಲೆ ಜೀವನವನ್ನು ಮಾತ್ರವಲ್ಲದೆ ಅವರ ನಿಜ ಜೀವನದ ಕಷ್ಟ ಹಾಗೂ ಪರಿಶ್ರಮಗಳನ್ನು ಕೂಡ ಗೌರವಿಸ ಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ.

Comments are closed.