Astrology: ಈ ರಾಶಿಯವರಿಗೆ ಇನ್ನುಮುಂದೆ ಅದೃಷ್ಟವೋ ಅದೃಷ್ಟ; ಐಶರಾಮಿ ಜೀವನ ಗ್ಯಾರಂಟಿ!

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳಲ್ಲಿ ಶನಿಯನ್ನು ಅತ್ಯಂತ ನ್ಯಾಯ ಪರವಾದಂತಹ ಗ್ರಹ ಎಂಬುದಾಗಿ ಕರೆಯಲಾಗುತ್ತದೆ. ಒಂದೇ ರಾಶಿಯಲ್ಲಿ ಎರಡುವರೆ ವರ್ಷಗಳ ಕಾಲ ಇರುವಂತಹ ಶನಿ ಸದ್ಯದ ಮಟ್ಟಿಗೆ ಕುಂಭ ರಾಶಿಯಲ್ಲಿ ಇದ್ದಾರೆ. ಇನ್ನು ಕುಂಭ ರಾಶಿಯಲ್ಲಿ ಜೂನ್ ತಿಂಗಳಲ್ಲಿ ಶನಿ ಹಿಮ್ಮುಖ ಚಲನೆಯನ್ನು ಪ್ರಾರಂಭಿಸಲಿದ್ದು ಇದರಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಸಂಪಾದನೆ ಆಗಲಿದೆ. ಬನ್ನಿ ಆ ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿಯೋಣ.

ಮೇಷ ರಾಶಿ(Aries)

ಮೇಷ ರಾಶಿಯವರು ಈ ಸಂದರ್ಭದಲ್ಲಿ ತಮ್ಮ ಮಕ್ಕಳಿಂದ ಶುಭ ಸುದ್ದಿಯನ್ನು ಕೇಳಲಿದ್ದಾರೆ ಹಾಗೂ ಅನಿರೀಕ್ಷಿತವಾಗಿ ಮೇಷ ರಾಶಿಯವರಿಗೆ ಹಣದ ಲಾಭವಾಗುತ್ತದೆ. ಶನಿದೇವನ ಕೃಪೆಯಿಂದಾಗಿ ಅರ್ಧಕ್ಕೆ ನಿಂತಿರುವಂತಹ ಬಾಕಿ ಉಳಿದಿರುವ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ನಿಮಗೆ ಸಾಕಷ್ಟು ಉತ್ತಮ ಬೆಳವಣಿಗೆಗಳು ಉದಾಹರಣೆಗೆ ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಾಗುವಿಕೆ ನಡೆಯಲಿದೆ. ಕುಟುಂಬದ ಸದಸ್ಯರ ಜೊತೆಗೆ ಉತ್ತಮವಾದ ಸಂಬಂಧ ಬೆಳೆಯಲಿದೆ ಹಾಗೂ ಒಂದಕ್ಕಿಂತ ಹೆಚ್ಚಿನ ಆದಾಯದ ಮೂಲಗಳು ನಿಮಗಾಗಿ ತೆರೆದುಕೊಳ್ಳಲಿವೆ. ಮೇಷ ರಾಶಿಯವರು ಹಣದ ವಿಚಾರದಲ್ಲಿ ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.

ವೃಷಭ ರಾಶಿ(Taurus)

ನಿಮ್ಮ ಕೆಲಸವನ್ನು ನೋಡಿ ಖುಷಿಯಾಗುವಂತಹ ನಿಮ್ಮ ವರಿಷ್ಠ ಅಧಿಕಾರಿಗಳು ಕೆಲಸದಲ್ಲಿ ನಿಮಗೆ ದೊಡ್ಡ ಮತ್ತು ಹೊಸ ಜವಾಬ್ದಾರಿಗಳನ್ನು ಕೂಡ ನೀಡಬಹುದಾಗಿದೆ. ಈ ಜವಾಬ್ದಾರಿಗಳನ್ನು ನೀವು ನಿಮ್ಮ ಸಹೋದ್ಯೋಗಿಗಳ ಜೊತೆಗೆ ಸೇರಿಕೊಂಡು ಕಡಿಮೆ ದಿನದಲ್ಲಿ ಮಾಡಿಕೊಡಬಹುದಾಗಿದೆ. ಸಾಕಷ್ಟು ಸಮಯಗಳಿಂದ ಬಾಕಿ ಉಳಿದಿರುವಂತಹ ಕೆಲಸಗಳು ಮುಗಿಯಲಿವೆ. ಗಣನೀಯವಾಗಿ ನಿಮ್ಮ ಹಣಕಾಸಿನ ಪರಿಸ್ಥಿತಿ ಕೂಡ ಸುಧಾರಣೆಯಾಗಲಿದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆದುಕೊಳ್ಳುವಂತಹ ಅವಕಾಶ ನಿಮಗೆ ಕೂಡಿ ಬರಲಿದೆ.

ವೃಶ್ಚಿಕ ರಾಶಿ(Scorpion)

ಉದ್ಯೋಗ ಕ್ಷೇತ್ರದಲ್ಲಿ ವೃಶ್ಚಿಕ ರಾಶಿಯವರು ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ತಮ್ಮ ಜೀವನದಲ್ಲಿ ಕೂಡ ಸಕಾರಾತ್ಮಕ ಬೆಳವಣಿಗೆಗಳನ್ನು ಹೊಂದಲಿದ್ದಾರೆ. ಸಮಾಜದಲ್ಲಿ ವೃಶ್ಚಿಕ ರಾಶಿಯವರ ಹೆಸರು ಪ್ರಸಿದ್ಧಿಯಾಗಲಿದೆ. ಅನಿರೀಕ್ಷಿತವಾಗಿ ಹಾರ್ದಿಕ ಲಾಭ ಉಂಟಾಗುವಂತಹ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ನಿಮ್ಮ ಹಾಗೂ ನಿಮ್ಮ ಕುಟುಂಬಸ್ಥರ ಜೀವನದಲ್ಲಿ ಮತ್ತೆ ಸಂತೋಷ ಮರುಕಳಿಸಲಿದೆ. ಯಾವುದೇ ಹೊಸ ಕೆಲಸ ಪ್ರಾರಂಭ ಮಾಡುವಾಗಲೂ ಕೂಡ ನೀವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಖಂಡಿತವಾಗಿ ಯಶಸ್ಸನ್ನು ನಿಶ್ಚಿತವಾಗಿ ಪಡೆದುಕೊಳ್ಳಲಿದ್ದೀರಿ. ಮನೆಯವರ ಬೆಂಬಲ ನಿಮ್ಮ ಹೊಸ ಕೆಲಸಕ್ಕೆ ಇರುವ ಕಾರಣದಿಂದಾಗಿ ಯಾವುದೇ ರೀತಿಯ ಹೆಚ್ಚಿನ ತಲೆಬಿಸಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಇಷ್ಟೊಂದು ಸಮಯ ಕಷ್ಟದ ಪರಿಸ್ಥಿತಿಗಳಲ್ಲಿ ಇರುವಂತಹ ನೀವು ಮುಂದಿನ ಶುಭ ಸಂದರ್ಭಗಳಲ್ಲಿ ಯಾವುದೇ ರೀತಿಯ ವಿಚಾರಗಳಿಗೂ ಕೂಡ ಚಿಂತೆ ಪಡಬೇಕಾದ ಅಗತ್ಯ ಇರುವುದಿಲ್ಲ. ಮುಂದಿನ ಜೀವನ ಅನ್ನೋದು ಸಾಕಷ್ಟು ಸುಖಮಯವಾಗಿರಲಿದೆ.

Comments are closed.