Temple: ದೇವಸ್ಥಾನದ ಅಕ್ಕ ಪಕ್ಕದಲ್ಲಿ ಮನೆ ಇದ್ದರೆ ಏನಾಗುತ್ತದೆ ಗೊತ್ತಾ? ತಿಳಿದುಕೊಳ್ಳಲೇಬೇಕು!

Temple: ಸನಾತನ ಹಿಂದು ಸಂಸ್ಕೃತಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮನುಷ್ಯ ಹಾಗೂ ಪ್ರಾಣಿಗಳು ಎನ್ನುವಂತಹ ಜೀವಿಗಳಿಗಿಂತ ಮಿಗಿಲಾಗಿ ಪರಮಾತ್ಮ ಎನ್ನುವಂತಹ ದೈವಿಕ ಶಕ್ತಿ ಈ ಜಗತ್ತನ್ನು ಆಳುತ್ತಿದೆ ಎನ್ನುವುದನ್ನು ಎಲ್ಲರೂ ನಂಬುತ್ತಾರೆ. ಇನ್ನು ಈ ದೇವರನ್ನು ನಾವು ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತೇವೆ. ದೇವಸ್ಥಾನಗಳಿಗೆ ಹೋಗಿ ನಿಯಮಿತವಾಗಿ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿ ಬರುವುದು ನಮ್ಮ ಜೀವನದಲ್ಲಿ ಸಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಆದರೆ ಈ ದೇವಸ್ಥಾನಗಳ ಪವಿತ್ರ ಜಾಗಗಳ ಪಕ್ಕದಲ್ಲಿ ಮನೆಯನ್ನು ಕಟ್ಟಿಸಿಕೊಳ್ಳುವುದು ಸರಿನಾ ತಪ್ಪಾ ಅನ್ನೋದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ದೇವಸ್ಥಾನದ ಪಕ್ಕದಲ್ಲಿ ಮನೆ ಕಟ್ಟೋದು ಸರಿನಾ ತಪ್ಪಾ?

ವಾಸ್ತುಶಾಸ್ತ್ರದ ಪ್ರಕಾರ ದೇವರಲ್ಲಿ ನಾವು ಗಮನಿಸುವುದಾದರೆ ಎರಡು ಪ್ರಕಾರಗಳನ್ನು ನಾವು ಕಾಣಬಹುದಾಗಿದೆ. ಒಂದು ಸೌಮ್ಯ ದೇವತೆ ನಮ್ಮ ರಕ್ಷಣೆಯನ್ನು ಮಾಡಿ ನಮ್ಮ ಜೀವನದಲ್ಲಿ ಶಾಂತಿ ನೆಲೆಸುವಂತೆ ನೋಡಿಕೊಳ್ಳುತ್ತದೆ. ಎರಡನೇದಾಗಿ ಉಗ್ರ ದೇವತೆ ಇದು ನಮ್ಮ ಜೀವನದಲ್ಲಿ ಯಾವುದೇ ರೀತಿಯ ದುಷ್ಟಶಕ್ತಿಗಳು ಬಾರದಂತೆ ಕಾಪಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸೌಮ್ಯದೇವತೆಗಳ ದೇವಸ್ಥಾನದ ಬಲಭಾಗದಲ್ಲಿ ಅಥವಾ ಮುಂಭಾಗದಲ್ಲಿ ಮನೆಯನ್ನು ಕಟ್ಟೋದು ಉತ್ತಮ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದರಿಂದಾಗಿ ಉತ್ತಮವಾದ ಸಕಾರಾತ್ಮಕ ಪರಿಣಾಮಗಳು ಜೀವನದಲ್ಲಿ ಕಂಡು ಬರಲಿವೆ ಹಾಗೂ ಮಾಡುವಂತಹ ಕೆಲಸಗಳಲ್ಲಿ ಕೂಡ ಪ್ರತಿಫಲ ಉತ್ತಮವಾಗಿ ಬರಲಿದೆ. ವಿಷ್ಣು ಸರಸ್ವತಿ ಹಾಗೂ ಲಕ್ಷ್ಮಿ ದೇವಿಯರ ಉದಾಹರಣೆಯನ್ನು ನೀವು ಸೌಮ್ಯ ದೇವರುಗಳ ವಿಭಾಗದಲ್ಲಿ ತೆಗೆದುಕೊಳ್ಳಬಹುದಾಗಿದೆ.

ಇನ್ನು ಜನರ ನಂಬಿಕೆಗಳ ಪ್ರಕಾರ ಉಗುರುದೇವತೆಗಳ ಬಗ್ಗೆ ಮಾತನಾಡುವುದಾದರೆ ರಾತ್ರಿ 12 ರಿಂದ ಬೆಳಿಗ್ಗೆ 3 ಗಂಟೆಯವರೆಗೆ ದುಷ್ಟಶಕ್ತಿಗಳನ್ನು ಸಂಹಾರ ಮಾಡುವುದಕ್ಕೆ ಹೊರಗಡೆ ಹೋಗುತ್ತವೆ ಎಂಬುದಾಗಿ ನಂಬಿಕೆ ಇರುತ್ತದೆ. ಇವರನ್ನು ಊರಿನ ದೇವತೆ ಅಥವಾ ಗ್ರಾಮದೇವತೆ ಎಂಬುದಾಗಿ ಜನರು ನಂಬುತ್ತಾರೆ ಹಾಗೂ ಈ ದೇವಸ್ಥಾನಗಳ ಮುಂಭಾಗದಲ್ಲಿ ಯಾವುದೇ ಕಾರಣಕ್ಕೂ ಮನೆಯನ್ನು ಕಟ್ಟಬಾರದು. ಕೇವಲ ಮುಂಭಾಗದಲ್ಲಿ ಮಾತ್ರವಲ್ಲ ಬಲ ಭಾಗದಲ್ಲಿ ಕೂಡ ಮನೆಗಳನ್ನು ಕಟ್ಟಬಾರದು.

ಉಗ್ರ ದೇವತೆಗಳ ದೇವಸ್ಥಾನದ ಎಡ ಭಾಗದಲ್ಲಿ ಅಥವಾ ಹಿಂಬದಿಯಲ್ಲಿ ಮನೆ ಕಟ್ಟಿದ್ರೆ ಒಳ್ಳೆಯದು ಹಾಗೂ ಸುರಕ್ಷತೆ ಎಂಬುದಾಗಿ ವಾಸ್ತು ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ. ಈ ರೀತಿಯ ವಾಸ್ತು ಶಾಸ್ತ್ರದ ಮಾಹಿತಿಗಳನ್ನು ನೀವು ಹೊಸ ಮನೆ ಕಟ್ಟುವುದಕ್ಕಿಂತ ಮುಂಚೆ ಸಂಬಂಧಪಟ್ಟಂತಹ ತಜ್ಞರಲ್ಲಿ ಪಡೆದುಕೊಂಡು ಮನೆಯನ್ನು ಕಟ್ಟುವುದು ಸುರಕ್ಷಿತ ಎಂದು ಹೇಳಬಹುದಾಗಿದೆ. ಇಲ್ಲವಾದಲ್ಲಿ ಈ ರೀತಿಯ ವಾಸ್ತು ಶಾಸ್ತ್ರದ ನಿಯಮಗಳ ವಿರುದ್ಧವಾಗಿ ನೀವು ಮನೆ ಕಟ್ಟಿದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಹೀಗಾಗಿ ದೇವಸ್ಥಾನದ ಅಕ್ಕ ಪಕ್ಕದಲ್ಲಿ ನೀವು ಮನೆಯನ್ನು ಕಟ್ಟುತ್ತಿದ್ದೀರಿ ಎಂದರೆ ಈ ವಾಸ್ತುಶಾಸ್ತ್ರದ ನಿಯಮಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಅದಕ್ಕೆ ಅನ್ವಯ ಆಗುವ ರೀತಿಯಲ್ಲಿ ಮನೆಯನ್ನು ಕಟ್ಟುವ ಕೆಲಸವನ್ನು ಪ್ರಾರಂಭಿಸಿ.

Comments are closed.