Business Idea: ಸ್ವಂತ ಉದ್ಯೋಗ ಮಾಡುವುದಕ್ಕೆ ಬಯಸುವಂತಹ ಮಹಿಳೆಯರು ಇಲ್ಲಿ ಕೇಳಿ. ಮೋದಿಜಿ ಅವರಿಂದ ಸಿಗುತ್ತೆ ಮೂರು ಲಕ್ಷ!

Business Idea: ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಬಡ, ಮಧ್ಯಮ ವರ್ಗದ ಜನರಿಗೆ ಹಾಗೂ ಮಹಿಳೆಯರಿಗೆ ಮತ್ತು ರೈತರಿಗೆ ಜಾರಿಗೆ ಆಗುತ್ತಲೇ ಇರುತ್ತವೆ. ಆದರೆ ಯೋಜನೆಗಳ ಬಗ್ಗೆ ನಮ್ಮ ಜನರಲ್ಲಿ ಸಾಕಷ್ಟು ಬೇಕಾಗಿರುವಂತಹ ಮಾಹಿತಿಗಳು ಇರುವುದಿಲ್ಲ. ಇನ್ನು ಮಹಿಳೆಯರಿಗಾಗಿ ವಿಶೇಷವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಒಂದು ಯೋಜನೆಯ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ. ಬನ್ನಿ ಆ ಯೋಜನೆ ಏನು ಹಾಗೂ ಮಹಿಳೆಯರು ಅದರಿಂದ ಯಾವ ರೀತಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವುದನ್ನು ತಿಳಿಯೋಣ.

ಉದ್ಯೋಗಿನಿ ಯೋಜನೆ

ಬಡವರ್ಗದ ಮಹಿಳೆಯರಿಗಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ವಿಶೇಷ ಯೋಜನೆ ಇದಾಗಿದೆ. ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಈ ಯೋಜನೆಯನ್ನು ಬಡ ಮಹಿಳಾ ವ್ಯಾಪಾರಿಗಳಿಗೆ ನೀಡಲಾಗುತ್ತಿದ್ದು ಇದರ ಮೂಲಕ ಅಗತ್ಯವಿರುವಂತಹ ಆರ್ಥಿಕ ಸಹಾಯವನ್ನು ಮಹಿಳಾ ವ್ಯಾಪಾರಿಗಳು ಪಡೆದುಕೊಳ್ಳಬಹುದಾಗಿದೆ.

ಹಣವನ್ನು ಯಾವ ರೀತಿ ಪಡೆದುಕೊಳ್ಳುವುದು?

ಉದ್ಯೋಗಿನಿ ಯೋಜನೆ ಅಡಿಯಲ್ಲಿ ನೀಡುವಂತಹ ಹಣವನ್ನು ಬಳಸಿಕೊಂಡು ಮಹಿಳಾ ವ್ಯಾಪಾರಿಗಳು ತಮ್ಮ ವ್ಯಾಪಾರದಲ್ಲಿ ಲಾಭ ಪಡೆದುಕೊಂಡು ಉತ್ತಮ ಬದುಕನ್ನು ನಡೆಸಬೇಕು ಎನ್ನುವುದಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಉದ್ಯೋಗಿನಿ ಯೋಜನೆ ಅಡಿಯಲ್ಲಿ ಮಹಿಳೆಯರು ಬಡ್ಡಿ ರಹಿತ ಸಾಲವನ್ನು ವಾಣಿಜ್ಯ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ಇಲ್ಲದ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು ಇದಕ್ಕಾಗಿ ಯಾವುದೇ ರೀತಿಯ ಗ್ಯಾರಂಟಿ ಇಡಬೇಕಾದ ಅಗತ್ಯ ಇರುವುದಿಲ್ಲ. ಯಾವುದೇ ಹೆಚ್ಚಿನ ಶುಲ್ಕವನ್ನು ಕೂಡ ಈ ಸಾಲದ ಮೇಲೆ ನಿಗದಿಪಡಿಸಲಾಗುವುದಿಲ್ಲ.

ಸಾಲ ಪಡೆಯಲು ಬೇಕಾಗಿರುವ ಡಾಕ್ಯುಮೆಂಟ್ಗಳು

  • ಪ್ರಮುಖವಾಗಿ ಆಧಾರ್ ಕಾರ್ಡ್ ಜೊತೆಗೆ ಪಾಸ್ಪೋರ್ಟ್ ಸೈಜ್ನ ಫೋಟೋ ಬೇಕು.
  • ಬರ್ತ್ ಸರ್ಟಿಫಿಕೇಟ್, ಇನ್ಕಮ್ ಸರ್ಟಿಫಿಕೇಟ್ ಜೊತೆಗೆ ಅಡ್ರೆಸ್ ಪ್ರೂಫ್ ಕೂಡ ಬೇಕು.
  • ಬ್ಯಾಂಕ್ ಡೀಟೇಲ್ಸ್, ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ನೀವು ನೀಡಬೇಕಾಗಿರುತ್ತದೆ. ಸಾಲ ಪಡೆಯಲು ಬೇಕಾಗಿರುವ ಅರ್ಹತೆಗಳು
  • ವಾರ್ಷಿಕವಾಗಿ ಕುಟುಂಬದ ಆದಾಯ 1.5 ಲಕ್ಷಗಳಿಗಿಂತ ಕಡಿಮೆ ಇರಬೇಕು. ಒಂಟಿ ಮಹಿಳೆಯರು ಹಾಗೂ ಅಂಗವಿಕಲರಾಗಿರುವಂತಹ ಮಹಿಳೆಯರಿಗೆ ಇದರಲ್ಲಿ ಯಾವುದೇ ಮಿತಿ ಇರುವುದಿಲ್ಲ.
  • ಸಾಲವನ್ನು ನೀಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ.
  • ಈಗಾಗಲೇ ಪಡೆದಿರುವಂತಹ ಸಾಲವನ್ನು ಕಟ್ಟಿರಬೇಕು ಅಥವಾ ಸರಿಯಾದ ರೀತಿಯಲ್ಲಿ ಕಟ್ಟುತ್ತಿರಬೇಕು. 18 ರಿಂದ 55 ವರ್ಷಗಳ ನಡುವಿನ ವ್ಯಾಪಾರಸ್ಥ ಮಹಿಳೆಯರು ಈ ಸಾಲವನ್ನು ಪಡೆದುಕೊಳ್ಳಲು ಅರ್ಹತೆಯನ್ನು ಹೊಂದಿರುತ್ತಾರೆ. ಅರ್ಜಿ ಸಲ್ಲಿಸುವ ವಿಧಾನ

ಉದ್ಯೋಗಿನಿ ಯೋಜನೆಯ ಬಗ್ಗೆ ನಿಮ್ಮ ಹತ್ತಿರದ ಬ್ಯಾಂಕುಗಳಿಗೆ ಹೋಗಿ ಇದರ ಬಗ್ಗೆ ಅಧಿಕಾರಿಗಳ ಬಳಿ ಹೆಚ್ಚಿನ ಮಾಹಿತಿಯನ್ನು ಪಡೆದು ಅವರಿಂದ ಫಾರ್ಮ್ ಅನ್ನು ಪಡೆದುಕೊಳ್ಳಬೇಕು. ಅದನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಹಾಗೂ ಕೇಳಲಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಅವರಿಗೆ ಒದಗಿಸಬೇಕು. ನೀವು ನೀಡಿರುವಂತಹ ಮಾಹಿತಿ ಹಾಗೂ ಡಾಕ್ಯುಮೆಂಟುಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳು ಸಾಲವನ್ನು ಮಂಜೂರು ಮಾಡುತ್ತಾರೆ. ಇನ್ನು ಇದನ್ನು ಅಧಿಕೃತ ವೆಬ್ಸೈಟ್ನಲ್ಲಿ ಹೋಗುವ ಮೂಲಕ ಆನ್ಲೈನ್ ಮೂಲಕ ಕೂಡ ಅಪ್ಲೈ ಮಾಡಬಹುದಾಗಿದೆ.

Comments are closed.