Vastu Tips: ಅಪ್ಪಿ ತಪ್ಪಿನು ಅಡಿಗೆ ಮನೆಯಲ್ಲಿ ಈ ತಪ್ಪು ಕೆಲಸಗಳನ್ನು ಮಾಡುವುದಕ್ಕೆ ಹೋಗಬೇಡಿ! ಜೇಬು ಖಾಲಿಯಾಗುತ್ತೆ, ಮನೆ ಬರಿದಾಗತ್ತೆ!

Vastu Tips: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಡುಗೆಮನೆಯನ್ನು ಅತ್ಯಂತ ಪವಿತ್ರ ಸ್ಥಳ ಎಂಬುದಾಗಿ ಪರಿಗಣಿಸಲಾಗುತ್ತದೆ. ಮನೆಯವರ ಹೊಟ್ಟೆಯನ್ನು ತುಂಬಿಸುವಂತಹ ಅನ್ನಪೂರ್ಣೇಶ್ವರಿ ನೆಲೆಸಿರುವಂತಹ ಸ್ಥಳ ಎಂಬುದಾಗಿ ಹೇಳಬಹುದು. ಆದರೆ ವಾಸ್ತುಶಾಸ್ತ್ರ ಹೇಳುವ ಪ್ರಕಾರ ಅಡುಗೆಮನೆಯಲ್ಲಿ ನೀವು ಕೆಲವೊಂದು ತಪ್ಪು ಕೆಲಸಗಳನ್ನು ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಎಂಬುದಾಗಿ ಉಲ್ಲೇಖವಾಗಿದೆ. ಹೀಗಾಗಿ ಅಡುಗೆ ಮನೆಯಲ್ಲಿ ನೀವು ಅಡುಗೆ ಮಾಡುವ ಸಂದರ್ಭದಲ್ಲಿ ಕೆಲವೊಂದು ವಿಚಾರಗಳನ್ನು ಪ್ರಮುಖವಾಗಿ ಗಮನವಹಿಸಬೇಕಾಗುತ್ತದೆ. ಈ ಮೂಲಕ ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ನುಗ್ಗದೆ ಇರುವ ರೀತಿಯಲ್ಲಿ ತಡೆಯಬಹುದಾಗಿದೆ. ಹಾಗಾದ್ರೆ ಅವುಗಳು ಯಾವುವು ಅನ್ನೋದನ್ನ ತಿಳಿಯೋಣ ಬನ್ನಿ.

ಅಡುಗೆ ಮನೆಯಲ್ಲಿ ಈ ಕೆಲಸ ಮಾಡೋದಕ್ಕೆ ಹೋಗ್ಬೇಡಿ

  1. ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳಿಗೆ ನಿಮ್ಮ ತಲೆಯಲ್ಲಿ ಅವಕಾಶ ಕೊಡಬೇಡಿ. ನಕಾರಾತ್ಮಕ ಆಲೋಚನೆಗಳಿಂದ ಅಡುಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಅಡುಗೆ ಮನೆಯಲ್ಲಿ ಯಾವುದೇ ರೀತಿಯ ದೇವರ ಫೋಟೋವನ್ನು ಇಡಬೇಡಿ.
  2. ಹಣದ ನಷ್ಟಕ್ಕೆ ಕಾರಣವಾಗುವಂತಹ ಮತ್ತೊಂದು ವಿಚಾರ ಏನೆಂದರೆ ನಿಮ್ಮ ಅಡುಗೆಮನೆ ವಾಸ್ತು ಪ್ರಕಾರವಾಗಿ ಕಟ್ಟಿರಬೇಕು. ಅದರಲ್ಲೂ ವಿಶೇಷವಾಗಿ ನೀವು ಪಾತ್ರವನ್ನು ತೊಳೆಯುವಂತಹ ಸಿಂಕ್ ಹಾಗೂ ನಿಮ್ಮ ಅಡುಗೆ ಮಾಡುವಂತಹ ಸ್ಟವ್ ಎದುರು ಬದರಾಗಿರಬಾರದು. ಇದರಿಂದ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಆರ್ಥಿಕ ಸಮಸ್ಯೆ ಎಂದು ದೂರವಾಗಿರಬೇಕು ಅಂದ್ರೆ ಇದನ್ನ ಸರಿಯಾಗಿ ನೆನಪಿಟ್ಟುಕೊಳ್ಳಿ.
  3. ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯನ್ನು ಕಟ್ಟಬೇಕು ಅನ್ನೋದಾಗಿ ನಾವು ಈಗಾಗಲೇ ಹೇಳಿದ್ದೇವೆ. ಅದೇ ರೀತಿಯಲ್ಲಿ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು ಕಟ್ಟಬೇಕು. ಇಲ್ಲವಾದಲ್ಲಿ ಇದರಿಂದಲೂ ಕೂಡ ನಿಮ್ಮ ಮನೆಯಲ್ಲಿ ಕೆಲವೊಂದು ಅನಾಹುತಗಳು ನಡೆಯುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.
  4. ಒಡೆದ ವಸ್ತುಗಳು ಅಥವಾ ಪಾತ್ರಗಳು ಮನೆಯಲ್ಲಿ ಯಾವ ಮೂಲೆಯಲ್ಲಿ ಕೂಡ ಇಡಬಾರದು. ಆದರೆ ವಿಶೇಷವಾಗಿ ಅತ್ಯಂತ ಪವಿತ್ರ ಸ್ಥಳ ಆಗಿರುವಂತಹ ಅಡುಗೆ ಮನೆಯಲ್ಲಿ ಇಂತಹ ವಸ್ತುಗಳನ್ನು ಇಡಲೇಬಾರದು. ಅಡುಗೆಮನೆ ಅಂದ್ಮೇಲೆ ಸಾಕಷ್ಟು ವಸ್ತುಗಳು ಒಡೆಯೋದು ಸರ್ವೇ ಸಾಮಾನ್ಯ ಆದರೆ ಅವುಗಳನ್ನು ಈ ರೀತಿ ಅಡುಗೆ ಮನೆಯಲ್ಲಿ ಮೂಲೆಯಲ್ಲಿ ಏರಿಸಿಕೊಳ್ಳುವುದು ವಾಸ್ತು ಶಾಸ್ತ್ರದ ಪ್ರಕಾರ ಅಪಶಕುನ ಎಂಬುದಾಗಿ ಪರಿಗಣಿಸಲಾಗುತ್ತಿದೆ.
  5. ನಿಮ್ಮ ಮನೆಯ ತಲೆಯ ಹಿಂಭಾಗಕ್ಕೆ ಬರೋ ರೀತಿಯಲ್ಲಿ ನಿಮ್ಮ ಅಡುಗೆ ಮಾಡುವಂತಹ ಸ್ಟವ್ ಅನ್ನು ಇಡಬಾರದು. ಇದನ್ನು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಅಪಶಕುನ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಮನೆಯಲ್ಲಿ ಸ್ಟವ್ ಅನ್ನು ಅಳವಡಿಸುವುದಕ್ಕಿಂತ ಮುಂಚೆ ವಾಸ್ತು ಪ್ರಕಾರ ಈ ವಿಚಾರಗಳನ್ನು ಗಮನಿಸಿ.
  6. ಎಲ್ಲಕ್ಕಿಂತ ಪ್ರಮುಖವಾಗಿ ಹಾಗೂ ಕೊನೆಯದಾಗಿ ಅಡುಗೆ ಮನೆಯಲ್ಲಿ ನೀವು ಅಡುಗೆ ಮಾಡುತ್ತಿದ್ದೀರಿ ಎಂದರೆ ಪ್ರತಿ ದಿನ ಕಸ ಹೆಚ್ಚಾಗಿರುತ್ತದೆ. ಅಂದಿನ ಕಸವನ್ನು ಆವತ್ತು ವಿಲೇವಾರಿ ಮಾಡುವುದನ್ನು ಕಲಿತುಕೊಳ್ಳಿ. ಅಡುಗೆಮನೆಯ ಶುಚಿತ್ವ ಎನ್ನುವುದು ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಬರುವುದಕ್ಕೆ ಕಾರಣವಾಗಿರುತ್ತದೆ.

Comments are closed.