Government Jobs: ಸರ್ಕಾರಿ ಸ್ವಾಮ್ಯದ ಈ ಕಂಪನಿಯೇ ಕೊಡತ್ತೆ ಜಾಬ್, ಕೈತುಂಬಾ ಸಂಬಳ; 558 ಹುದ್ದೆಗಳಿವೆ ಅಪ್ಲೈ ಮಾಡಿ!

Government Jobs: ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯವಾಗಿರುವಂತಹ ಟೆಲಿಕಾಂ ಕಂಪನಿಗಳಲ್ಲಿ ಭಾರತ ಸರ್ಕಾರ ಮೂಲದ ಕಂಪನಿ ಆಗಿರುವಂತಹ ಬಿಎಸ್ಎನ್ಎಲ್ ಕೂಡ ಒಂದಾಗಿದೆ. ಲೇಟೆಸ್ಟ್ ಆಗಿ ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಬಿಎಸ್ಎನ್ಎಲ್ ಸಂಸ್ಥೆ ತೆರವಾಗಿರುವಂತಹ 558 ಹುದ್ದೆಗಳಿಗೆ ಆಹ್ವಾನ ನೀಡಿದೆ. ಒಂದು ವೇಳೆ ನೀವು ಕೂಡ ಕೇಂದ್ರ ಸರ್ಕಾರದ ಕೆಲಸವನ್ನು ಹೊಂದಬೇಕು ಎನ್ನುವಂತಹ ಆಸೆಯನ್ನು ಸಾಕಷ್ಟು ಸಮಯಗಳಿಂದ ಹೊಂದಿದ್ದರೆ ಅವರು ಬಿಎಸ್ಎನ್ಎಲ್ ಸಂಸ್ಥೆ ಆಹ್ವಾನ ಮಾಡಿರುವಂತಹ 558 ಖಾಲಿ ಆಗಿರುವ ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗೆ ಪ್ರಯತ್ನ ಪಡಬಹುದಾಗಿದೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ.

ಬಿಎಸ್ಎನ್ಎಲ್ ಸಂಸ್ಥೆಯಿಂದ ಕೇಂದ್ರ ಸರ್ಕಾರಿ ಕೆಲಸದ ಹುದ್ದೆಗೆ ಆಹ್ವಾನ

bsnl.co.in ಇದು ಬಿಎಸ್ಎನ್ಎಲ್ ಸಂಸ್ಥೆಯ ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ನೀವು ಕೆಲಸಕ್ಕಾಗಿ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಯನ್ನು ಪ್ರಾರಂಭ ಮಾಡಬಹುದಾಗಿದೆ. ಹಾಗಿದ್ರೆ ಬನ್ನಿ ಈ ಕೆಲಸ ಪಡೆಯೋದಕ್ಕೆ ಯಾವೆಲ್ಲ ಅರ್ಹತೆಗಳು ಬೇಕು ಹಾಗು ಹೆಚ್ಚಿನ ಮಾಹಿತಿಗಳು ಏನೆಲ್ಲ ಎಂಬುದನ್ನು ಒಂದಿಂಚು ಬಿಡದೇ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಕೆಲಸಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಹಾಗೂ ಹುದ್ದೆಗಳ ಮಾಹಿತಿ

558 ಹುದ್ದೆಗಳಲ್ಲಿ ಮೊದಲಿಗೆ ಟೆಲಿಕಾಂ ಆಪರೇಷನ್ಗಳಿಗಾಗಿ 450 ಹುದ್ದೆಗಳು, ಫೈನಾನ್ಸ್ ವಿಭಾಗದಲ್ಲಿ 84 ಹುದ್ದೆಗಳು, ಸಿವಿಲ್ ವಿಭಾಗದಲ್ಲಿ 13 ಹುದ್ದೆಗಳು ಹಾಗೂ ಎಲೆಕ್ಟ್ರಿಕ್ ವಿಭಾಗದಲ್ಲಿ 11 ಹುದ್ದೆಗಳು ಖಾಲಿಯಿದ್ದು ನೀವು ಈ ಹುದ್ದೆಗಳಿಗೆ ಪ್ರಯತ್ನಪಡಬಹುದಾಗಿದೆ.

ಎಜುಕೇಶನ್ ಕ್ವಾಲಿಫಿಕೇಷನ್ ಬಗ್ಗೆ ಮಾತನಾಡುವುದಾದರೆ ಟೆಲಿಕಾಂ ಆಪರೇಷನ್ ಹುದ್ದೆಗಳಿಗೆ ಅಪ್ಲೈ ಮಾಡುವವರು EEE/ECE/CSE/IT/ ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ನಲ್ಲಿ ಬಿಇ/ಬಿ.ಟೆಕ್ ಎಜುಕೇಶನ್ ಕ್ವಾಲಿಫಿಕೇಷನ್ ಹೊಂದಿರಬೇಕು.
ಫೈನಾನ್ಸ್ ವಿಭಾಗದಲ್ಲಿ ಕೆಲಸಕ್ಕೆ ಅಪ್ಲೈ ಮಾಡುವವರು CA, CMA ಅನ್ನು ಪೂರೈಸಿರಬೇಕು.
ಸಿವಿಲ್ ವಿಭಾಗದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುವವರು BE/BTech ಅನ್ನು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪೂರ್ತಿಗೊಳಿಸಿರಬೇಕು.
ಎಲೆಕ್ಟ್ರಿಕ್ ವಿಭಾಗದಲ್ಲಿ ಕೆಲಸಕ್ಕೆ ಆಯ್ಕೆ ಆಗಲು ಎಲೆಕ್ಟ್ರಿಕ್ ಇಂಜಿನಿಯರಿಂಗ್ ನಲ್ಲಿ ಬಿ ಇ ಅಥವಾ ಬಿ ಟೆಕ್ ಪದವಿಯನ್ನು ಪೂರೈಸಿರಬೇಕು.

ವಯಸ್ಸಿನ ಮಿತಿ, ಸಂಬಳ ಹಾಗೂ ಇತ್ಯಾದಿ ಮಾಹಿತಿಗಳು

ಸಂಸ್ಥೆ ಅಧಿಕೃತವಾಗಿ ತಿಳಿಸಿರುವ ಮಾಹಿತಿಯ ಪ್ರಕಾರ ವಯಸ್ಸಿನ ಮಿತಿ ಕನಿಷ್ಠ 21ರಿಂದ ಪ್ರಾರಂಭಿಸಿ ಗರಿಷ್ಠ 30ರ ವರೆಗೆ ಇರಬೇಕೆಂಬುದಾಗಿ ತಿಳಿಸಿದ್ದು, ವಿಶೇಷ ಮೀಸಲಾತಿಯ ಪ್ರಕಾರ ವಯೋಮಿತಿಯ ಸಡಿಲಿಕೆ ಮಾಡಲಾಗುತ್ತದೆ.

ನಿಮ್ಮ ಕೆಲಸವನ್ನು ಭಾರತದ ಯಾವುದೇ ಸ್ಥಳದಲ್ಲಿ ಕೂಡ ನಿಯೋಜಿಸಬಹುದಾಗಿದ್ದು ಸಂಬಳ 24,900 ರೂಪಾಯಿಗಳಿಂದ ಪ್ರಾರಂಭಿಸಿ 50,500 ರೂಪಾಯಿ ಪ್ರತಿ ತಿಂಗಳವರಿಗೂ ಕೂಡ ಪಡೆದುಕೊಳ್ಳಬಹುದಾಗಿದೆ.

ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನೀವು ಪಾವತಿಸಬೇಕಾದ ಅಗತ್ಯ ಇರುವುದಿಲ್ಲ ಹಾಗೂ ಆಯ್ಕೆ ಪ್ರಕ್ರಿಯೆ ಮೊದಲಿಗೆ ಲಿಖಿತ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ ಹಾಗೂ ಲಿಖಿತ ಪರೀಕ್ಷೆಯಲ್ಲಿ ಪಾಸ್ ಆಗಿರುವಂತಹ ಅಭ್ಯರ್ಥಿಗಳನ್ನು ಸಂದರ್ಶಿಸಲಾಗುತ್ತದೆ. ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕೆಲಸಕ್ಕೆ ಆಯ್ಕೆ ಮಾಡಲಾಗುತ್ತದೆ.

Comments are closed.