Government Scheme: ಕೇಂದ್ರದಿಂದ ಮಹಿಳೆಯರಿಗೆ ಸಿಗುತ್ತೆ 3 ಲಕ್ಷ ರೂಪಾಯಿ. ಸಿಗಬೇಕು ಅಂತ ಅಂದ್ರೆ ಹೀಗೆ ಮಾಡಿ.

Government Scheme: ನಮ್ಮ ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾಗಿರುವಂತಹ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ದೇಶದಲ್ಲಿ ಈಗಾಗಲೇ ಬೇರೆ ಬೇರೆ ವರ್ಗದ ಜನರಿಗೆ ಅನುಕೂಲವಾಗುವಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದರಲ್ಲಿ ವಿಶೇಷವಾಗಿ ಮಹಿಳೆಯರ ಪರವಾಗಿ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಒಂದು ವೇಳೆ ಮಹಿಳೆಯರು ಸ್ವಂತ ಉದ್ಯೋಗದ ಕನಸನ್ನು ಕಾಣುತ್ತಿದ್ದರೆ ನರೇಂದ್ರ ಮೋದಿ ಅವರ ಹೊಸ ಯೋಜನೆ ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳ ವರೆಗೆ ಹಣವನ್ನು ಪಡೆದುಕೊಳ್ಳಬಹುದಾದ್ದು, ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಉದ್ಯೋಗಿನಿ ಯೋಜನೆ

ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸ್ವ ಉದ್ಯೋಗವನ್ನು ಮಾಡುವಂತ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಯೋಜನೆ ಇದಾಗಿದೆ. ಅತ್ಯಂತ ಕಡಿಮೆ ಬಡ್ಡಿಯಲ್ಲಿ ಮೂರು ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲವನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.

ಕೇಂದ್ರ ಮಹಿಳಾ ಅಭಿವೃದ್ಧಿ ನಿಗಮದಿಂದ ಬಡ ವ್ಯಾಪಾರಿ ಮಹಿಳೆಯರಿಗೆ ತಮ್ಮ ವ್ಯಾಪಾರವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡಿಕೊಳ್ಳಲು ಈ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ. ಯಾವುದೇ ಗ್ಯಾರೆಂಟಿ ಇಲ್ಲದೆ 18ರಿಂದ 55 ವರ್ಷದ ವಯಸ್ಸಿನ ನಡುವೆ ಇರುವಂತಹ ಮಹಿಳಾ ವ್ಯಾಪಾರಿಗಳು ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ಅಡಮಾನ ಇಲ್ಲದೆ ಬ್ಯಾಂಕುಗಳಲ್ಲಿ ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಸಾಕಷ್ಟು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಮಹಿಳೆಯರು ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಕೇವಲ ಸಾಲವನ್ನು ನೀಡುವುದು ಮಾತ್ರವಲ್ಲದೆ ಮಹಿಳಾ ಅಭಿವೃದ್ಧಿ ನಿಗಮಗಳು ಇದಕ್ಕಾಗಿ ಮಹಿಳೆಯರಿಗೆ ತರಬೇತಿಯನ್ನು ಕೂಡ ನೀಡುತ್ತದೆ. ಸಾಲವನ್ನು ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿಯೋಣ ಬನ್ನಿ.

ಸಾಲ ಪಡೆಯಲು ಇರಬೇಕಾಗಿರುವ ಅರ್ಹತೆಗಳು ಹಾಗೂ ಡಾಕ್ಯುಮೆಂಟ್ಸ್ ಗಳು

  • ಒಂಟಿ ಹಾಗೂ ಅಂಗವಿಕಲರಾಗಿರುವಂತಹ ಮಹಿಳೆಯರಿಗೆ ವಾರ್ಷಿಕ ಆದಾಯದಲ್ಲಿ ಯಾವುದೇ ಮಿತಿ ಇಲ್ಲ. ಇದನ್ನು ಹೊರತುಪಡಿಸಿ ಸಾಮಾನ್ಯ ವರ್ಗದ ಮಹಿಳೆಯರಿಗೆ ವಾರ್ಷಿಕವಾಗಿ ಕುಟುಂಬದ ಆದಾಯ 1.5 ಲಕ್ಷ ರೂಪಾಯಿಗಳನ್ನು ಮೀರಿರಬಾರದು.
  • 18 ರಿಂದ 55 ವರ್ಷಗಳ ನಡುವಿನ ಯಾವುದೇ ಮಹಿಳಾ ವ್ಯಾಪಾರಿಗಳು ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
  • ಬೇರೆ ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡಿದ್ದರೆ ಅವುಗಳನ್ನು ತೀರಿಸಿರಬೇಕು.
  • ಬೇಕಾಗಿರುವ ಪ್ರಮುಖವಾದ ಡಾಕ್ಯುಮೆಂಟ್ಸ್ ಗಳ ಬಗ್ಗೆ ಮಾತನಾಡುವುದಾದರೆ ಆಧಾರ್ ಕಾರ್ಡ್ ಜೊತೆಗೆ ಪಾಸ್ಪೋರ್ಟ್ ಸೈಜ್ ನ ಫೋಟೋ ಇರಬೇಕು.
  • ಬರ್ತ್ ಸರ್ಟಿಫಿಕೇಟ್, ಅಡ್ರೆಸ್ ಪ್ರೂಫ್ ಜೊತೆಗೆ ಇನ್ಕಮ್ ಸರ್ಟಿಫಿಕೇಟ್ ಇರ್ಬೇಕು. ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಡೀಟೇಲ್ಸ್ ಹಾಗೂ ನಿಮ್ಮ ಜಾತಿ ಪ್ರಮಾಣ ಪತ್ರವನ್ನು ಕೂಡ ಒದಗಿಸ ಬೇಕಾಗಿರುತ್ತದೆ. ಉದ್ಯೋಗಿನಿ ಯೋಜನೆಯಲ್ಲಿ ಸಾಲ ಪಡೆಯುವುದು ಹೇಗೆ?
  1. ನಿಮ್ಮ ಹತ್ತಿರದ ಬ್ಯಾಂಕುಗಳಿಗೆ ಹೋಗಿ ಉದ್ಯೋಗಿನಿ ಯೋಜನೆಯ ಫಾರ್ಮ್ ಅನ್ನು ಭರ್ತಿ ಮಾಡಿ ಅಗತ್ಯ ಇರುವಂತಹ ದಾಖಲೆಗಳನ್ನು ನೀಡಿ ಹಾಗೂ ಬ್ಯಾಂಕಿನ ಅಧಿಕಾರಿಗಳನ್ನು ಇದನ್ನು ಪರಿಶೀಲಿಸಿದ ನಂತರ ನಿಮ್ಮ ಸಾಲವನ್ನು ಮಂಜೂರು ಮಾಡುತ್ತಾರೆ.
  2. ಇದನ್ನು ಹೊರತುಪಡಿಸಿ ನೀವು ಆನ್ಲೈನ್ ಮೂಲಕ ಕೂಡ ಉದ್ಯೋಗಿನಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಹೋಗುವ ಮೂಲಕ ಅಲ್ಲಿ ಕೂಡ ಇದೇ ರೀತಿಯ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ಸಬ್ಮಿಟ್ ಮಾಡಿದ ನಂತರ ಸಾಲವನ್ನು ಪಡೆದುಕೊಳ್ಳಬಹುದು.

Comments are closed.