Film: ಕಂಕಣ ಭಾಗ್ಯ ಕೂಡಿ ಬಂತಾ ಆಂಕರ್ ಅನುಶ್ರೀಗೆ? ಯಾರು ಗೊತ್ತಾ ಹುಡುಗ?

Film: ಒಂದು ವೇಳೆ ಕರ್ನಾಟಕ ಚಿತ್ರರಂಗದಲ್ಲಿ ಅಥವಾ ಕಿರುತೆರೆಯ ಕ್ಷೇತ್ರದಲ್ಲಿ ಕಲಾವಿದರಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವಂತಹ ನಿರೂಪಕರು ಅಥವಾ ನಿರೂಪಕಿ ಯಾರಾದರೂ ಇದ್ದಾರೆ ಎಂದರೆ ಆ ಸಾಲಿನಲ್ಲಿ ಕೇಳಿಬರುವಂತಹ ಒಂದೇ ಒಂದು ಹೆಸರು ಹಾಗೂ ಮೊದಲ ಹೆಸರು ಅಂದರೆ ಅದು ಆಂಕರ್ ಅನುಶ್ರೀ. ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಕನ್ನಡದ ಮನೋರಂಜನ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆನು ಪಡೆದುಕೊಂಡು ಬರುತ್ತಿರುವಂತಹ ಪ್ರತಿಭೆ. ಹರಳು ಹುರಿದಂತೆ ಹಾಡುವಂತಹ ಅವರ ಮಾತುಗಳೇ ಇವತ್ತು ಕರ್ನಾಟಕದಲ್ಲಿ ಅವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನ ಹೊಂದಿರುವಂತೆ ಮಾಡಿರುವುದು.

ಅನುಶ್ರೀ ಅವರ ಮದುವೆ ಯಾವಾಗ?

ಈಗಾಗಲೇ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಅನುಶ್ರೀ ಅವರ ಬಳಿ ಅಭಿಮಾನಿಗಳು ಮೇಡಂ ನಿಮ್ಮ ಮದುವೆ ಯಾವಾಗ ಅನ್ನೋದನ್ನ ಕೇಳ್ತಾನೇ ಇದಾರೆ. ಅನುಶ್ರೀ ಅವರಿಗೂ ಕೂಡ ಉತ್ತರ ನೀಡಿ ಸಾಕಾಗೋಗಿದೆ. ಇತ್ತೀಚೆಗಂತೂ ಅನುಶ್ರೀ ಅವರು ಈ ಪ್ರಶ್ನೆ ಕೇಳಿದಾಗಲೆಲ್ಲ ಸ್ವಲ್ಪ ಖಾರವಾಗಿ ಉತ್ತರ ನೀಡುತ್ತಿದ್ದಾರೆ. ಹಾಗಿದ್ರೂ ಕೂಡ ಅಭಿಮಾನಿಗಳು ಪ್ರಶ್ನೆ ಕೇಳೋದನ್ನ ಮಾತ್ರ ಬಿಟ್ಟಿಲ್ಲ. ಇಡೀ ರಾಜ್ಯ ಅನುಶ್ರೀ ಅವರ ಬಳಿ ಕೇಳುವ ಒಂದೇ ಒಂದು ಪ್ರಶ್ನೆ ಅಂದ್ರೆ ನಿಮ್ಮ ಮದುವೆಯಾಗುವ ಹುಡುಗ ಯಾರು ಅನ್ನೋದಾಗಿದೆ.

ಆದರೆ ಈಗ ಈ ಪ್ರಶ್ನೆಗೆ ಅತಿ ಶೀಘ್ರದಲ್ಲೇ ಉತ್ತರ ಸಿಗೋದು ಗ್ಯಾರಂಟಿ ಅಂತ ಕೇಳಿ ಬಂದಿದೆ. ಕೊನೆಗೂ ಆಂಕರ್ ಅನುಶ್ರೀ ಅವರು ಮದುವೆಗೆ ಒಪ್ಪಿಕೊಂಡು ಹಸೆ ಮಣೆ ಇರೋದಕ್ಕೆ ಸಿದ್ಧರಾಗಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ. ಅಷ್ಟಕ್ಕೂ ಸ್ಟಾರ್ ನಟರೊಬ್ಬರನ್ನ ಆಂಕರ್ ಅನುಶ್ರೀ ಅವರು ಮದುವೆ ಆಗೋದಕ್ಕೆ ಸಿದ್ಧರಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಾ ಇದೆ. ಅಷ್ಟಕ್ಕೂ ಅನುಶ್ರೀ ಅವರು ಮದುವೆ ಆಗೋದಕ್ಕೆ ಹೊರಟಿರೋದು ಯಾರನ್ನ ಆ ಸ್ಟಾರ್ ನಟ ಯಾರು ಅನ್ನೋದನ್ನ ಬನ್ನಿ ಈ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಮಲಯಾಳಂ ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಉಣ್ಣಿ ಮುಕುಂದನ್‌ ರವರನ್ನು ಆಂಕರ್ ಅನುಶ್ರೀ ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದ್ರೆ ಕೇಳಿ ಬಂದಿರುವ ಮಾಹಿತಿಗಳ ಪ್ರಕಾರ ಇದರ ನಿಜವಾದ ರಹಸ್ಯ ಬೇರೇನೇ ಇದೆ ಅನ್ನುವುದಾಗಿದೆ. ಹೌದು ಈ ಮಲಯಾಳಂ ನಟನ ಜೊತೆಗೆ ಕೇಳಿ ಬರ್ತಾ ಇರೋ ಅನುಶ್ರೀ ಹೆಸರು ನಮ್ಮ ಕನ್ನಡದ ಅನುಶ್ರೀ ಅಲ್ಲ ಬದಲಾಗಿ ಮಲಯಾಳಂ ಚಿತ್ರರಂಗದ ಅನುಶ್ರೀ. ಕನ್ನಡಿಗರೇ ಈ ರೀತಿಯ ಗಾಳಿ ಸುದ್ದಿಗಳಿಗೆ ಆಹಾರ ಆಗಿರುವುದು ನಿಜಕ್ಕೂ ಕೂಡ ಹಾಸ್ಯಾಸ್ಪದ ಸುದ್ದಿ ಎಂದು ಹೇಳಬಹುದಾಗಿದೆ. ಇನ್ನು ಇದು ಸತ್ಯಕ್ಕೆ ದೂರವಾಗಿರುವ ಮಾತು ಎನ್ನುವುದು ಅಧಿಕೃತ ಮೂಲಗಳಿಂದಲೂ ಕೂಡ ತಿಳಿದು ಬಂದಿರುವುದಾಗಿದೆ. ಈಗಲೂ ಕೂಡ ಅಭಿಮಾನಿಗಳು ಅನುಶ್ರೀ ಅವರ ಮದುವೆ ಯಾವಾಗ ಆಗ್ತದೆ ಹಾಗೂ ಅವರನ್ನು ಮದುವೆಯಾಗೋದು ಯಾರು ಅನ್ನೋದಾಗಿ ಯೋಚನೆ ಮಾಡುತ್ತಿದ್ದಾರೆ.

Comments are closed.