Girl Child: ಈ ರಾಶಿಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದ್ರೆ ಸಾಕ್ಷಾತ್ ಲಕ್ಷ್ಮಿನೇ ಬಿಡಿ; ಅಪ್ಪನ ಅದೃಷ್ಟವನ್ನೆ ಬದಲಾಯಿಸ್ತಾರೆ!

Girl Child: ಸ್ನೇಹಿತರೇ, ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವಿ ಎಂಬುದಾಗಿ ನಾವು ಪೂಜೆ ಮಾಡುತ್ತೇವೆ. ನಿಜಕ್ಕೂ ಕೂಡ ಹೆಣ್ಣು ಮಕ್ಕಳು ಲಕ್ಷ್ಮಿಯ ಸ್ವರೂಪ ಎಂಬುದಾಗಿ ನಾವು ಪರಿಗಣಿಸುತ್ತೇವೆ ಹಾಗೂ ಅವರು ಮನೆಗೆ ಅದೃಷ್ಟವನ್ನು ಹೊತ್ತು ತರುತ್ತಾರೆ. ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ತಂದೆಗೆ ಅದೃಷ್ಟವನ್ನು ಹೊತ್ತು ತರುವಂತಹ ಹೆಣ್ಣು ಮಕ್ಕಳು ಯಾವ ರಾಶಿಯಲ್ಲಿ ಜನಿಸುತ್ತಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಕನ್ಯಾ ರಾಶಿ (Virgo)

ಕನ್ಯಾ ರಾಶಿಯ ಹುಡುಗಿಯರು ತಾವು ಮಾಡುವಂತಹ ಕೆಲಸದಿಂದಾಗಿ ತಮ್ಮ ಮನೆಯವರಿಗೆ ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದು ಕೊಡುತ್ತಾರೆ. ಇವರ ಕ್ರಿಯೇಟಿವಿಟಿ ಕೆಲಸ ಎಲ್ಲರಿಗೆ ಮೆಚ್ಚುಗೆ ಆಗುತ್ತದೆ. ಚಿಕ್ಕ ವಯಸ್ಸಿನಿಂದಲೂ ಕೂಡ ಕನ್ಯಾ ರಾಶಿಯ ಹುಡುಗಿಯರು ಬೇರೆಯವರಿಗೆ ಹೋಲಿಸಿದರೆ ಸಾಕಷ್ಟು ಬುದ್ಧಿವಂತರಾಗಿರುತ್ತಾರೆ. ಇವರಿಗೆ ಯಾವುದೇ ಕೆಲಸವನ್ನು ಒಪ್ಪಿಸಿದರೂ ಕೂಡ ಇವರು ಚಾಚೂ ತಪ್ಪದೇ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ತಾವು ಮಾಡುವಂತಹ ಉದ್ಯೋಗ ಕ್ಷೇತ್ರದಲ್ಲಿ ನಮ್ಮದೇ ಆದಂತಹ ಹೆಸರನ್ನು ಹೊಂದಿರುತ್ತಾರೆ.

ಕರ್ಕ ರಾಶಿ (Cancer)

ಇವರು ತಮ್ಮ ಕುಟುಂಬ ಹಾಗು ತಂದೆಗೆ ಅದೃಷ್ಟವನ್ನು ತರುವಂತಹ ಹುಡುಗಿಯರಾಗಿರುತ್ತಾರೆ. ಮನೆಯಲ್ಲಿ ಈ ರಾಶಿಯ ಹೆಣ್ಣು ಮಕ್ಕಳು ಜನಿಸಿದ್ದಾರೆ ಅಂದ್ರೆ ಅಲ್ಲಿ ಸಂತೋಷ ಹಾಗೂ ನೆಮ್ಮದಿ ಪ್ರಾರಂಭವಾಗಿದೆ ಎಂಬುದಾಗಿ ಅರ್ಥವಾಗಿದೆ. ಇವರ ಆಗಮನದಿಂದಾಗಿ ತಂದೆಗೆ ತಮ್ಮ ಉದ್ಯೋಗದಲ್ಲಿ ಆದಾಯ ಹಾಗೂ ಇನ್ನಿತರ ಅವಕಾಶಗಳು ಹೆಚ್ಚಾಗುತ್ತವೆ ಎಂಬುದಾಗಿ ಅರ್ಥ. ಚಿಕ್ಕ ವಯಸ್ಸಿನಿಂದಲೇ ಯಶಸ್ಸು ಹಾಗೂ ಗೆಲುವು ಎನ್ನುವುದು ಈ ಹುಡುಗಿಯರ ಕಾಲ ಕೆಳಗೆ ಇರುತ್ತದೆ. ಪ್ರತಿಯೊಂದು ವಿಚಾರದಲ್ಲೂ ಕೂಡ ಪ್ರತಿಭೆಯನ್ನು ಹೊಂದಿರುವಂತಹ ಹುಡುಗಿಯರು ಇವರಾಗಿರುತ್ತಾರೆ.

ಮಕರ ರಾಶಿ (Capricorn)

ಕೆಲಸ ಮಾಡುವ ವಿಚಾರದಲ್ಲಿ ಮಕರ ರಾಶಿಯವರಷ್ಟು ಬೇರೆ ರಾಶಿಯವರು ಶ್ರಮಜೀವಿಗಳಾಗಿರುವುದಿಲ್ಲ. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಹಾಗೂ ಕರುಣಾಮಯಿ ಹೃದಯದವರಾಗಿರುತ್ತಾರೆ. ಕುಟುಂಬ ಸದಸ್ಯರ ಬಗ್ಗೆ ಸಾಕಷ್ಟು ಕಾಳಜಿಯನ್ನು ಹೊಂದಿರುವಂತಹ ಇವರು ಅವರಿಗಾಗಿ ಏನು ಬೇಕಾದರೂ ಕೂಡ ಮಾಡುತ್ತಾರೆ. ಮಕರ ರಾಶಿಯ ಹುಡುಗಿಯರು ಕೆಲಸ ಹಾಗೂ ವ್ಯಾಪಾರ ಎರಡರಲ್ಲಿ ಕೂಡ ಯಶಸ್ಸನ್ನು ಸಾಧಿಸುವಂತಹ ಅದೃಷ್ಟ ಹಾಗೂ ಹಣೆಬರಹವನ್ನು ಹೊಂದಿರುತ್ತಾರೆ. ತಂದೆಯ ಜೊತೆಗೆ ಕೂಡ ಈ ಹೆಣ್ಣು ಮಕ್ಕಳ ಸಂಬಂಧ ಅತ್ಯಂತ ಗಟ್ಟಿಯಾಗಿರುತ್ತದೆ ಹಾಗೂ ತಂದೆ ಅಂದ್ರೆ ಇವ್ರು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಾರೆ. ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಕೂಡ ಇವರು ಅದೃಷ್ಟವನ್ನು ಹೊಂದಿರುವ ಕಾರಣದಿಂದಾಗಿ ಹೆಚ್ಚೆಚ್ಚು ಯಶಸ್ಸನ್ನು ಹೊತ್ತುತ್ತಾರೆ. ಮನೆಗೂ ಕೂಡ ಅದೃಷ್ಟಲಕ್ಷ್ಮಿಯಂತೆ ಇವರು ಕಾಣಿಸಿಕೊಳ್ಳುತ್ತಾರೆ. ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಆರ್ಥಿಕ ಲಾಭ ನಿಶ್ಚಿತವಾಗಿದೆ.

Comments are closed.