Gold Rate: ಚಿನ್ನ ಹಾಗೂ ಬೆಳ್ಳಿಯ ಬೆಲೆ ಭಾರತದಲ್ಲಿ ಆಕಾಶಕ್ಕೇರಿದೆ; ಚಿನ್ನ ಖರೀದಿ ಮಾಡೋರಿಗೆ ಸಂಕಷ್ಟ; ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

Gold Rate: ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಆಗೋದು ಹಾಗೂ ಇಳಿಕೆ ಆಗೋದು ಸರ್ವೇಸಾಮಾನ್ಯವಾಗಿದೆ. ಆದರೆ ಬೆಲೆಯಲ್ಲಿ ಬಹುತೇಕ ಸ್ಥಿರತೆ ಕಾಯ್ದುಕೊಂಡಿರುವುದು ಈಗಿನ ದಿನಗಳಲ್ಲಿ ಕಂಡು ಬರುತ್ತಿದೆ. 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ಸದ್ಯಕ್ಕೆ 69,110 ರೂಪಾಯಿಗಳ ಸರಾಸರಿ ಹಾಗೂ 22 ಕ್ಯಾರೆಟ್ ಶುದ್ಧತೆಯ ಚಿನ್ನದ ಬೆಲೆ 63350 ಆಗಿದೆ. ಹಾಗಿದ್ರೆ ಬನ್ನಿ ಭಾರತ ದೇಶದ ಬೇರೆ ಬೇರೆ ನಗರಗಳಲ್ಲಿ ಇವುಗಳ ಬೆಲೆ ಯಾವ ರೀತಿಯಲ್ಲಿ ಇದೆ ಎಂಬುದನ್ನು ತಿಳಿದುಕೊಳ್ಳೋಣ.

ಭಾರತ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ

ದೆಹಲಿ:- ದೆಹಲಿಯಲ್ಲಿ ಸದ್ಯಕ್ಕೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 63500 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 69,260 ಆಗಿದೆ.

ಮುಂಬೈ:- 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ 63350 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 69,110 ರೂಪಾಯಿ ಆಗಿದೆ.

ಚೆನ್ನೈ:- 22 ಕ್ಯಾರೆಟ್ ಚಿನ್ನದ ಬೆಲೆ 64,300 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 70150 ಆಗಿದೆ.

ಬೆಂಗಳೂರು:- 22 ಕ್ಯಾರೆಟ್ ಚಿನ್ನದ ಬೆಲೆ 63350 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 69,110.

ಕೊಲ್ಕತ್ತಾ:- ಇಲ್ಲಿ ಕೂಡ 22 ಕ್ಯಾರೆಟ್ ಚಿನ್ನದ ಬೆಲೆ 63350 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 69,110.

ಬೆಳ್ಳಿಯ ದರ

ದೆಹಲಿ ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 78,700 ಆಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 77,600 ಆಗಿದೆ ಹಾಗೂ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 81700 ಆಗಿದೆ.

ಚಿನ್ನದ ಬೆಲೆ ಏರಿಳಿಕೆ ಆಗಿರುವುದಕ್ಕೆ ನಿಜವಾದ ಕಾರಣಗಳು

  • ಸಾಮಾನ್ಯವಾಗಿ ಚಿನ್ನದ ಬೆಲೆ ಡಿಮ್ಯಾಂಡ್ ಅಂಡ್ ಸಪ್ಲೈ ಮೇಲೆ ನಿರ್ಧಾರಿತವಾಗಿರುತ್ತದೆ. ಒಂದು ವೇಳೆ ಜನರಲ್ಲಿ ಚಿನ್ನದ ಮೇಲೆ ಆಸಕ್ತಿ ಹೆಚ್ಚಾದರೆ ಅವುಗಳ ಬೆಲೆ ಏರಿಕೆಯಾಗುತ್ತದೆ ಹಾಗೂ ಬೇಡಿಕೆಯಿಂದ ಹೆಚ್ಚಾಗಿ ಚಿನ್ನದ ಪೂರೈಕೆ ಹೆಚ್ಚಾದರೆ ಆ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಬೆಲೆಯ ಇಳಿಸಿಕೊಂಡು ಬರುವುದು ಸರ್ವೇಸಾಮಾನ್ಯವಾಗಿದೆ. ಹೀಗಾಗಿ ಏರಿಳಿಕೆಯ ಬೆನ್ನಲ್ಲಿ ಈ ಕಾರಣವನ್ನು ನಾವು ಸೂಕ್ತ ಎಂಬುದಾಗಿ ಪರಿಗಣಿಸಬಹುದಾಗಿದೆ.
  • ಇನ್ನು ಜಾಗತಿಕವಾಗಿ ಕೆಲವೊಂದು ನಡೆಯುವಂತಹ ಆರ್ಥಿಕ ಏರುಪೇರುಗಳು ಕೂಡ ಚಿನ್ನದ ಬೆಲೆಯಲ್ಲಿ ಏರುವಿಕೆಗೆ ಕಾರಣವಾಗುವುದು ಕೂಡ ಕಂಡುಬರುತ್ತದೆ. ಒಂದು ವೇಳೆ ಜಾಗತಿಕವಾಗಿ ಆರ್ಥಿಕತೆ ಕೊಂಚಮಟ್ಟಿಗೆ ಕುಸಿದು ಬಿದ್ದಾಗ ಹೂಡಿಕೆ ಮಾಡುವವರು ಬೇರೆಯಲ್ಲ ಬಿಟ್ಟು ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡುವುದು ಸರ್ವೇಸಾಮಾನ್ಯವಾಗಿರುವ ಕಾರಣದಿಂದಾಗಿ ಇಲ್ಲಿ ಚಿನ್ನದ ಬೆಲೆ ಹೆಚ್ಚಾಗುವಂತಹ ಸಾಧ್ಯತೆ ಇರುತ್ತದೆ. ಹೀಗಾಗಿ ಚಿನ್ನದ ಬೆಲೆ ಹೆಚ್ಚಳ ಆಗಿರುವ ಬೆನ್ನಲ್ಲಿ ನೀವು ಈ ಕಾರಣವನ್ನು ಸೂಕ್ತ ಎಂಬುದಾಗಿ ಪರಿಗಣಿಸಬಹುದಾಗಿದೆ.
  • ಪ್ರಮುಖ ದೇಶ ಹಾಗೂ ಪ್ರದೇಶಗಳಲ್ಲಿ ಒಂದು ವೇಳೆ ಯಾವುದೇ ರೀತಿಯಲ್ಲಿ ರಾಜಕೀಯ ಅಸ್ಥಿರತೆ ಅಥವಾ ಕೆಲವೊಂದು ಬಿಕ್ಕಟ್ಟು ಎನ್ನುವಂತಹ ಪರಿಸ್ಥಿತಿ ಉಂಟಾಗುವ ಸಂದರ್ಭದಲ್ಲಿ ಕೂಡ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ಏರುಪೇರು ಕಂಡುಬರುತ್ತದೆ. ಆ ಸಂದರ್ಭದಲ್ಲಿ ದೇಶಗಳು ಅಥವಾ ಪ್ರದೇಶಗಳು ತಮ್ಮ ಹಣವನ್ನು ಉಳಿತಾಯ ಮಾಡಲು ಚಿನ್ನವನ್ನೇ ಪ್ರಮುಖವಾದ ಆಯ್ಕೆಯನ್ನಾಗಿ ಮಾಡುತ್ತವೆ. ಇದೇ ಸಂದರ್ಭದಲ್ಲಿ ಚಿನ್ನದ ಬೆಲೆ ಏರಿಕೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

Comments are closed.