LIC Kanyadan: ಈ ಮಾಸ್ಟರ್ ಪ್ಲಾನ್ ಮಾಡಿ ಮಗಳ ಮದುವೆ ಹೊತ್ತಿಗೆ 31 ಲಕ್ಷ ಸಂಗ್ರಹ ಮಾಡಿ; ಇಷ್ಟೇ ಇಷ್ಟು ಉಳಿತಾಯ ಮಾಡಿ ಸಾಕು!

LIC Kanyadan: ಹೆಣ್ಣು ಹುಟ್ಟಿದ ಪ್ರತಿಯೊಂದು ಮನೆಯಲ್ಲಿ ಕೂಡ ಆಕೆಯ ಉನ್ನತ ಶಿಕ್ಷಣದ ಹಾಗೂ ಮದುವೆ ಖರ್ಚು ದೊಡ್ಡದಾಗಿ ಇರುತ್ತದೆ ಎಂಬುದಾಗಿ ಮನೆಯವರು ಮೊದಲಿನಿಂದಲೇ ಲೆಕ್ಕಾಚಾರ ಹಾಕಿರುತ್ತಾರೆ. ಈ ಖರ್ಚುಗಳನ್ನ ಮಾಡೋದಕ್ಕೆ ಅವಳ ಹುಟ್ಟಿನಿಂದಲೇ ಪೋಷಕರು ಆಕೆ ಹೆಸರಿನಲ್ಲಿ ಉಳಿತಾಯ ಮಾಡಿಕೊಂಡು ಬರಬೇಕಾಗಿರುತ್ತದೆ. ಈ ತಲೆಬಿಸಿಯನ್ನು ಕಡಿಮೆ ಮಾಡಿ ಆ ಹೆಣ್ಣು ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಎಲ್ಐಸಿ ಸಂಸ್ಥೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

ಎಲ್ಐಸಿ ಕನ್ಯಾದಾನ ಪಾಲಿಸಿ ಯೋಜನೆ

ಭಾರತ ದೇಶದ ಅತ್ಯಂತ ದೊಡ್ಡ ಇನ್ಸೂರೆನ್ಸ್ ಕಂಪನಿ ಆಗಿರುವಂತಹ ಎಲ್ಐಸಿ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ವರ್ಗದ ಕುಟುಂಬಗಳಿಗೂ ಕೂಡ ಸರಿ ಹೊಂದುವ ರೀತಿಯಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಪ್ರತಿಯೊಂದು ಹೆಣ್ಣು ಮಗುವಿನ ಜೀವನದಲ್ಲಿ ಕೂಡ ಮದುವೆ ಅನ್ನೋದು ಅತ್ಯಂತ ಪ್ರಮುಖವಾದ ಗಟ್ಟವಾಗಿರುತ್ತದೆ ಹಾಗೂ ಸಂತೋಷದ ಕ್ಷಣ ಆಗಿರುತ್ತದೆ. ಮದುವೆ ಅಂತ ಅಂದ್ರೆ ಜೀವನದಲ್ಲಿ ಒಂದೇ ಬಾರಿ ಆಗುವಂತಹ ಒಂದು ದೊಡ್ಡ ಕಾರ್ಯಕ್ರಮ. ಹೀಗಾಗಿ ಅದನ್ನು ಸರಿಯಾದ ರೀತಿಯಲ್ಲಿ ಹಾಗೂ ಯಾವುದಕ್ಕೂ ಕಮ್ಮಿ ಬಾರದಂತೆ ಮಾಡುವುದೇ ಆ ಹೆಣ್ಣು ಮಗುವನ್ನು ಹೆಚ್ಚಿರುವಂತಹ ಪೋಷಕರ ಕನಸಾಗಿರುತ್ತದೆ. ಇನ್ನು ಹೆಣ್ಣು ಮಗಳ ಮದುವೆ ಸಂದರ್ಭದಲ್ಲಿ ಪೋಷಕರು ಹಣದ ಬಗ್ಗೆ ಚಿಂತಿಸಬಾರದು ಎನ್ನುವ ಕಾರಣಕ್ಕಾಗಿಯೇ ಎಲ್ಐಸಿ ಸಂಸ್ಥೆ ಕನ್ಯಾದಾನ್ ಯೋಜನೆಯನ್ನು ಜಾರಿಗೆ ತಂದಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಯೋಜನೆಯ ಆಯ್ಕೆಗಳು ಹಾಗೂ ಇನ್ನಿತರ ಪ್ರಯೋಜನಗಳು

ಈ ಯೋಜನೆ 25 ವರ್ಷದ ಯೋಜನೆಯಾಗಿದ್ದು ತೆರಿಗೆ ರಿಯಾಯಿತಿಯನ್ನು ಕೂಡ ಇದರಲ್ಲಿ ಪಡೆದು ಕೊಳ್ಳಬಹುದಾಗಿದೆ. ಇದರ ಕಂತನ್ನು ನೀವು ಮೂರು ತಿಂಗಳಿಗೊಮ್ಮೆ ಆರು ತಿಂಗಳಿಗೊಮ್ಮೆ ಹಾಗೂ ವರ್ಷಕ್ಕೊಮ್ಮೆ ಕಟ್ಟಬಹುದಾಗಿದೆ. ಒಂದು ವೇಳೆ ಪಾಲಿಸಿದಾರರು ಮರಣ ಹೊಂದಿದರೆ ಅವರಿಗೆ ಹತ್ತು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. 18 ವರ್ಷ ತುಂಬಿದ ನಂತರ ಮಗಳಿಗೆ ಆಹಾಣ ಸಂಪೂರ್ಣವಾಗಿ ತಲುಪುತ್ತದೆ.

ಮೊದಲ ಆಯ್ಕೆಯಲ್ಲಿ ನೀವು ತಿಂಗಳಿಗೆ 4,530 ರೂಪಾಯಿ ಹಣ ಡೆಪಾಸಿಟ್ ಮಾಡಿದರೆ 25 ವರ್ಷಗಳ ನಂತರ ನಿಮಗೆ 31 ಲಕ್ಷ ರೂಪಾಯಿಗಳ ಒಟ್ಟಾರೆ ಮೊತ್ತ ಸಿಗುತ್ತದೆ.

ಎರಡನೇ ಆಯ್ಕೆಯಲ್ಲಿ 3630 ರೂಪಾಯಿ ಹಣವನ್ನು 25 ವರ್ಷಗಳ ಕಾಲ ಠೇವಣಿ ಇಟ್ಟರೆ 27 ಲಕ್ಷ ರೂಪಾಯಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.

ಬೇಕಾಗಿರುವ ಅರ್ಹತೆಗಳು ಹಾಗೂ ಡಾಕ್ಯುಮೆಂಟ್ಸ್ ಗಳು

ಮೊದಲಿಗೆ ಮಗುವಿನ ಬರ್ತ್ ಸರ್ಟಿಫಿಕೇಟ್ ಜೊತೆಗೆ ಫೋಟೋ ಹಾಗೂ ಆಧಾರ್ ಕಾರ್ಡ್ ಪ್ರತಿ ಅಡ್ರೆಸ್ ಪ್ರೂಫ್ ಹಾಗೂ ಕುಟುಂಬದ ಇನ್ಕಮ್ ಸರ್ಟಿಫಿಕೇಟ್ ಅನ್ನು ಇತರ ಪ್ರಮುಖ ಬೇಕಾಗಿರುವಂತಹ ಡಾಕ್ಯುಮೆಂಟ್ಸ್ ಗಳ ಜೊತೆಗೆ ಹೊಂದಿರಬೇಕಾಗಿರುತ್ತದೆ ಹಾಗೂ ಆ ಸಂದರ್ಭದಲ್ಲಿ ನೀಡಬೇಕಾಗಿರುತ್ತದೆ.

ಇನ್ನು ಈ ಸಂದರ್ಭದಲ್ಲಿ ಹೆಣ್ಣು ಮಗುವಿನ ವಯಸ್ಸು ಕನಿಷ್ಠ ಪಕ್ಷ ಒಂದು ವರ್ಷ ಆಗಿರಬೇಕು. ಹೆಣ್ಣು ಮಗುವಿನ ಪರವಾಗಿ ಆಕೆಯ ತಂದೆ ಅಥವಾ ತಾಯಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಹೆಣ್ಣು ಮಗುವಿನ ಪೋಷಕರ ವಯಸ್ಸು 18 ರಿಂದ 50 ವರ್ಷಗಳ ನಡುವೆ ಇರಬೇಕಾಗಿರುತ್ತದೆ.

Comments are closed.