Vastu Tips: ಬೇರೆಯವರಿಂದ ಪಡೆದುಕೊಂಡಿರುವಂತಹ ಸಾಲವನ್ನು ಯಾವತ್ತೂ ಇಟ್ಕೋಬಾರ್ದು; ಒಂದು ವೇಳೆ ನಿರ್ಲಕ್ಷ ಮಾಡಿದ್ರೆ ಏನಾಗತ್ತೆ ಗೊತ್ತಾ?

Vastu Tips: ಪ್ರತಿಯೊಬ್ಬರು ಕೂಡ ಜೀವನದಲ್ಲಿ ಒಂದಲ್ಲ ಒಂದು ಬಾರಿ ತಮಗೆ ಹಣದ ಅಗತ್ಯತೆ ಇದ್ದಾಗ ಬೇರೆಯವರಿಂದ ಸಾಲವನ್ನು ಪಡೆದುಕೊಂಡಿರುತ್ತಾರೆ. ಕಷ್ಟದ ಸಮಯದಲ್ಲಿ ಸಾಲವನ್ನು ಪಡೆದುಕೊಂಡಿರುತ್ತಾರೆ ಆದರೆ ಸರಿಯಾದ ಸಮಯದಲ್ಲಿ ಅದರ ಮರುಪಾವತಿಯನ್ನು ಮಾಡುವುದಕ್ಕೆ ಹೋಗುವುದಿಲ್ಲ. ಇದೊಂದು ತಪ್ಪು ಅಭ್ಯಾಸ ಆಗಿರುತ್ತದೆ ಅನ್ನೋದನ್ನ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕು.

ಸಾಲ ಪಡೆದ ಹಣವನ್ನು ವಾಪಸ್ ಕೊಡದೆ ಇದ್ದಲ್ಲಿ ಏನಾಗುತ್ತೆ ಗೊತ್ತಾ?

ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೇರೆಯವರಿಂದ ಸಾಲ ರೂಪದಲ್ಲಿ ಪಡೆದುಕೊಳ್ಳುವಂತಹ ಹಣವನ್ನು ನೀವು ಸರಿಯಾದ ಸಮಯದಲ್ಲಿ ಅವರಿಗೆ ನೀಡದೆ ಹೋದಲ್ಲಿ ಸಾಕಷ್ಟು ಕಷ್ಟಗಳನ್ನು ನಿಮ್ಮ ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗಿ ಬರುತ್ತದೆ. ಹೀಗಾಗಿ ಬೇರೆಯವರಿಂದ ಪಡೆದುಕೊಂಡಿರುವಂತಹ ಸಾಲವನ್ನು ಕ್ಲಪ್ತ ಸಮಯಕ್ಕೆ ಹಿಂದಿರುಗಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರೀತಿ ಪಡೆದುಕೊಂಡಿರುವಂತಹ ಸಾಲರೂಪದ ಹಣವನ್ನು ವಾಪಸ್ ಮಾಡದೆ ಹೋದಲ್ಲಿ ಧನದೇವತೆ ಆಗಿರುವಂತಹ ಲಕ್ಷ್ಮಿ ಕೋಪ ಮಾಡಿಕೊಳ್ಳುತ್ತಾಳೆ. ಲಕ್ಷ್ಮಿಯ ಕೋಪದಿಂದಾಗಿ ಯಾವೆಲ್ಲ ಆರ್ಥಿಕ ಸಮಸ್ಯೆಗಳನ್ನು ನೀವು ಎದುರಿಸಬಹುದು ಎನ್ನುವುದನ್ನು ನೀವೇ ಅಂದಾಜು ಮಾಡಿಕೊಳ್ಳಬಹುದು. ಹೀಗಾಗಿ ಸಾಲವನ್ನು ತೆಗೆದುಕೊಂಡ ನಂತರ ನಿಧಾನಕ್ಕೆ ಕೊಟ್ಟರಾಯಿತು ಅನ್ನುವಂತಹ ನಿರ್ಲಕ್ಷವನ್ನು ಯಾವತ್ತೂ ಕೂಡ ಮಾಡೋದಿಕ್ಕೆ ಹೋಗಬೇಡಿ. ಇದರಿಂದಾಗಿ ಲಕ್ಷ್ಮಿ ದೇವಿಯ ಅವಕೃಪೆಗೆ ಒಳಗಾಗುವಂತಹ ಸಾಧ್ಯತೆ ಹೆಚ್ಚಾಗಿರುವುದರಿಂದಾಗಿ ಈ ಮೂರ್ಖತನವನ್ನು ಯಾವತ್ತೂ ಕೂಡ ಮಾಡಲು ಹೋಗಬೇಡಿ.

ಈ ರೀತಿ ಮಾಡುವುದರಿಂದ ಅವರು ಸಾಲ ಪಡೆದುಕೊಂಡಿರುವಂತಹ ಜನರ ಬಳಿ ತಮ್ಮ ಮರ್ಯಾದೆ ಹಾಗೂ ವಿಶ್ವಾಸ ಇರುವಂತಹ ಸಂಬಂಧವನ್ನು ಕೂಡ ಕಳೆದುಕೊಳ್ಳುತ್ತಾರೆ. ಇನ್ನೊಂದು ಕಡೆಯಲ್ಲಿ ಇಂತಹ ಮಾತಿಗೆ ತಪ್ಪುವಂತಹ ಮನುಷ್ಯರನ್ನು ಕೂಡ ದೇವರು ಕೂಡ ಮೆಚ್ಚುವುದಿಲ್ಲ ಅನ್ನೋದನ್ನ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿರುತ್ತದೆ. ದೇವರು ಕೂಡ ನೋಡಿದರೆ ಕೋಪಗೊಳ್ಳುವಂತಹ ಮನುಷ್ಯರು ಜೀವನದಲ್ಲಿ ಬೇರೆ ಉದ್ಧಾರ ಆಗುವಂತಹ ಕೆಲಸಗಳನ್ನು ಮಾಡುವುದು ಕಷ್ಟಕರವಾಗಿರುತ್ತದೆ. ನಿಮ್ಮ ಮೇಲೆ ನಂಬಿಕೆ ಇಟ್ಟು ಹಣವನ್ನು ನೀಡಿರುವವರ ಸಾಲವನ್ನು ಸರಿಯಾದ ಸಮಯದಲ್ಲಿ ವಾಪಸ್ ಹಿಂದಿರುಗಿಸುವುದು ಕೂಡ ಒಂದು ಶಿಸ್ತಿನ ಜೀವನದ ಲಕ್ಷಣವಾಗಿದೆ.

ಇದೇ ಕಾರಣಕ್ಕಾಗಿ ಎಷ್ಟೇ ಆತ್ಮೀಯರಾಗಿರಲಿ ನೀವು ಅವರ ಬಳಿ ಸಾಲವನ್ನು ಪಡೆದುಕೊಂಡಿದ್ದೀರಿ ಎಂದಾದಲ್ಲಿ ಅವರ ಬಳಿ ಹೇಳಿರುವಂತಹ ಸಮಯಕ್ಕೆ ಸರಿಯಾಗಿ ಹಣವನ್ನು ಅವರಿಗೆ ನೀಡುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೂಡ ಉತ್ತಮ ಎಂಬುದಾಗಿ ಪರಿಗಣಿಸಲಾಗುತ್ತದೆ. ಇಲ್ಲವಾದಲ್ಲಿ ಲಕ್ಷ್ಮಿ ದೇವರ ಕೋಪಕ್ಕೆ ಗುರಿಯಾಗುವುದು ಮಾತ್ರವಲ್ಲದೆ ಸಮಾಜದಲ್ಲಿ ಕೂಡ ಜನರು ನಿಮ್ಮ ಬಗ್ಗೆ ಭರವಸೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಸಮಯಕ್ಕೆ ಸರಿಯಾಗಿ ಹಣವನ್ನು ಮರುಪಾವತಿ ಮಾಡುವುದು ನಿಮ್ಮ ಮೇಲೆ ಅವರಿಗೆ ಭರವಸೆ ಹೆಚ್ಚಾಗುವುದಕ್ಕೆ ಕೂಡ ಕಾರಣವಾಗಬಹುದಾಗಿದೆ. ಹೀಗಾಗಿ ಇದನ್ನ ಯಾವತ್ತೂ ಕೂಡ ನಿಮ್ಮ ಜೀವನದಲ್ಲಿ ಮರೆಯೋದಕ್ಕೆ ಹೋಗ್ಬೇಡಿ. ಸಾಲ ಪಡೆದುಕೊಂಡು ಸ್ನೇಹ ಕಳೆದುಕೊಳ್ಳುವಂತಹ ಕೆಲಸವನ್ನು ಮಾಡಬೇಡಿ.

Comments are closed.