Ration Card: ಅರ್ಜಿ ಹಾಕಿರೋ ಎಲ್ರಿಗೂ ಇಗ್ಲೇ ರೇಶನ್ ಕಾರ್ಡ್ ಸಿಗಲ್ಲ; ಸರ್ಕಾರದ ಹೊಸ ಅಪ್ಡೇಟ್ ತಿಳ್ಕೊಳ್ಳಿ, ಸುಮ್ನೆ ಕ್ಯೂ ನಿಲ್ಬೇಡಿ!

Ration Card: ನಮ್ಮ ಭಾರತ ಸರ್ಕಾರ ಕೊಡ ಮಾಡುವಂತಹ ಅತ್ಯಂತ ಪ್ರಮುಖ ದಾಖಲೆ ಪತ್ರಗಳಲ್ಲಿ ರೇಷನ್ ಕಾರ್ಡ್ ಕೂಡ ಒಂದಾಗಿದೆ. ಸದ್ಯದ ಮಟ್ಟಿಗೆ ರೇಷನ್ ಕಾರ್ಡ್ ಗಳನ್ನು ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳುವುದು ಅಸಾಧ್ಯವಾಗಿದೆ ಎಂದ್ರೂ ಕೂಡ ತಪ್ಪಾಗಲ್ಲ. ಹೇಗಿದ್ರು ಕೂಡ ರೇಷನ್ ಕಾರ್ಡ್ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಕೆಲವೊಂದು ಮಹತ್ವದ ಮಾಹಿತಿಗಳನ್ನ ನಿಮಗೆ ನೀಡುವುದಕ್ಕೆ ಹೊರಟಿದ್ದೇವೆ ಹೀಗಾಗಿ ಈ ಉಪಯುಕ್ತ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಕೊನೆಯವರೆಗೂ ಲೇಖನವನ್ನು ಓದಿ.

ರೇಷನ್ ಕಾರ್ಡ್ ಬಗ್ಗೆ ಇಲ್ಲಿದೆ ನೋಡಿ ಮಹತ್ವದ ಮಾಹಿತಿ

ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹೊಸದಾಗಿ ರೇಷನ್ ಕಾರ್ಡ್ ಮಾಡಿಸುವುದಕ್ಕೆ ಸದ್ಯದ ಮಟ್ಟಿಗೆ ಸಾಧ್ಯ ಆಗುವುದಿಲ್ಲ. ಇದಕ್ಕೆ ಪ್ರಮುಖವಾದ ಕಾರಣ ಆಗಿರೋದು ಸದ್ಯದಲ್ಲೇ ಬರಲಿರುವಂತಹ ಲೋಕಸಭಾ ಎಲೆಕ್ಷನ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಸಂದರ್ಭದಲ್ಲಿ ಕೂಡ ನೀವು ಈಗಾಗಲೇ ಮಾಡಿಸಬೇಕಾಗಿರುವಂತಹ ತಿದ್ದುಪಡಿಗಳನ್ನ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಲ್ಲಿ ಉದಾಹರಣೆಗೆ ಗ್ರಾಮವನ್, ಬೆಂಗಳೂರು ಗಳಂತಹ ಸೇವ ಕೇಂದ್ರಗಳಲ್ಲಿ ಹೋಗಿ ಮಾಡಿಸಿಕೊಳ್ಳಬಹುದಾಗಿದೆ. ಅದು ಕೂಡ ಈ ಸಂದರ್ಭದಲ್ಲಿ ಜನರು ಹೆಚ್ಚಾಗಿ ನೂಕು ನುಗ್ಗಲಿನಲ್ಲಿ ಬಂದು ಮಾಡಿಸಿಕೊಳ್ಳುವ ಅವಕಾಶ ಕೂಡ ಇಲ್ಲ.

ಇಲ್ಲಿ ದಿನಕ್ಕೆ ಅರ್ಧ ಗಂಟೆಯಿಂದ ಒಂದು ಗಂಟೆವರೆಗೆ ಈ ಸೇವೆಗಳನ್ನು ಜನರಿಗೆ ಪೂರೈಸುವುದಕ್ಕಾಗಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಆ ಸಂದರ್ಭದಲ್ಲಿ ನೀವು ಈಗಾಗಲೇ ನೀಡಿರುವಂತಹ ತಿದ್ದುಪಡಿ ರಿಕ್ವೆಸ್ಟ್ ಅನ್ನು ಪೂರೈಸಿಕೊಳ್ಳಬಹುದಾದಂತಹ ಅವಕಾಶವನ್ನು ನೀಡಲಾಗುತ್ತಿದೆ. ಇನ್ನು ಯಾರೆಲ್ಲಾ ಹೊಸದಾಗಿ ರೇಷನ್ ಕಾರ್ಡಿಗೆ ಈ ಹಿಂದೆ ರಿಜಿಸ್ಟರ್ ಮಾಡಿಕೊಂಡಿದ್ದೀರೋ ಅವರು ತಹಶೀಲ್ದಾರರ ಕಚೇರಿಗೆ ಹೋಗಿ ನಿಮ್ಮ ಹೆಸರು ಬಂದಿದೆಯೋ ಇಲ್ಲವೋ ಅನ್ನೋದನ್ನ ಖಚಿತಪಡಿಸಿಕೊಳ್ಳಬಹುದಾಗಿದೆ. ಕೆಲವೇ ದಿನಗಳಲ್ಲಿ ರೇಷನ್ ಕಾರ್ಡ್ ಪಡೆದುಕೊಳ್ಳುವ ಅವಕಾಶ ಇದೆ. ಒಂದು ವೇಳೆ ಅಲ್ಲಿ ಏನಾದರೂ ಸಮಸ್ಯೆ ಇದ್ದರೆ ಕೂಡಲೇ ಅಲ್ಲಿ ಸಂಬಂಧಪಟ್ಟಂತಹ ಅಧಿಕಾರಿಗಳ ಬಳಿ ಕೇಳಿ ನಿಮ್ಮ ಗೊಂದಲಗಳನ್ನು ಪೂರೈಸಿಕೊಳ್ಳಬಹುದಾಗಿದೆ.

ಈ ಸಮಯದಲ್ಲಿ ಹೊಸ ರೇಷನ್ ಕಾರ್ಡ್ ಗೆ ಇದೊಂದೇ ದಾರಿ

ಸದ್ಯದ ಮಟ್ಟಿಗೆ ಯಾರಿಗೂ ಕೂಡ ಹೊಸದಾಗಿ ರೇಷನ್ ಕಾರ್ಡ್ ಕೊಡ್ತಾ ಇಲ್ಲ ಅನ್ನೋದು ನಿಮಗೆಲ್ಲರಿಗೂ ಗೊತ್ತಿರೋ ವಿಚಾರ ಹಾಗಿದ್ದರೂ ಕೂಡ, ಕೆಲವೊಂದು ಮೂಲಗಳ ಪ್ರಕಾರ ತಿಳಿದು ಬಂದಿರುವ ಹಾಗೆ ವೈದ್ಯಕೀಯ ಎಮರ್ಜೆನ್ಸಿ ಇರುವಂತಹ ಜನರಿಗೆ ಹೊಸ ರೇಷನ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗುತ್ತಿದೆ ಅನ್ನುವಂತಹ ಮಾಹಿತಿ ಕೇಳಿಬಂದಿದೆ. ಹೀಗಾಗಿ ಒಂದು ವೇಳೆ ವೈದ್ಯಕೀಯ ಎಮರ್ಜೆನ್ಸಿಯ ಕಾರಣಕ್ಕಾಗಿ ನೀವು ರೇಷನ್ ಕಾರ್ಡ್ ಮಾಡಿಸುವಂತಹ ಅಗತ್ಯತೆ ಇದ್ರೆ ಮಾಡಿಸಬಹುದಾಗಿದೆ.

ಇದಕ್ಕಾಗಿ ಬೇಕಾಗಿರುವಂತಹ ದಾಖಲೆಗಳು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ, ನಿಮ್ಮ ಅಡ್ರೆಸ್ ಪ್ರೂಫ್ ಹಾಗೂ ಇನ್ಕಮ್ ಸರ್ಟಿಫಿಕೇಟ್ ಅನ್ನು ನೀವು ಒದಗಿಸಬೇಕಾಗಿರುತ್ತದೆ.

Comments are closed.