Shukra Gochar: ಈ ಮೂರು ರಾಶಿಯವರಿಗೆ ಶುರು ಶುಕ್ರದೆಸೆ; ಇನ್ನೇನಿದ್ರೂ ದುಡ್ದಿನ ಬಗ್ಗೆನೇ ಮಾತು; ನಿಮ್ಮ ರಾಶಿ ಇದ್ಯಾ ನೋಡ್ಕೊಳ್ಳಿ!

Shukra Gochar: ಗ್ರಹಗಳು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ವರ್ಗಾವಣೆ ಆಗುವ ಸಂದರ್ಭದಲ್ಲಿ ಅದರ ಪರಿಣಾಮ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ 12 ರಾಶಿಗಳ ಮೇಲೆ ಕೂಡ ಬೀರುತ್ತದೆ. ಕೆಲವರಿಗೆ ಒಳ್ಳೆಯ ಪರಿಣಾಮ ಬೀರಿದರೆ ಇನ್ನು ಕೆಲವರಿಗೆ ಕೆಟ್ಟ ಪರಿಣಾಮ ಬೀರುತ್ತದೆ. ಇದೇ ಸಂದರ್ಭದಲ್ಲಿ ಈಗ ಶುಕ್ರ ವೃಷಭ ರಾಶಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಇದರ ಪರಿಣಾಮ 3 ರಾಶಿಯವರಿಗೆ ವಿಶೇಷ ರೂಪದಲ್ಲಿ ಬೀರುತ್ತದೆ. ಹಾಗಿದ್ರೆ ಬನ್ನಿ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ವೃಷಭ ರಾಶಿ(Taurus)

ಶುಕ್ರನ ಗೋಚಾರ ಫಲ ಎನ್ನುವುದು ವೃಷಭ ರಾಶಿಯಲ್ಲಿ ನಡೆದಿದೆ. ಹೀಗಾಗಿ ಇದರಿಂದಾಗಿ ವೃಷಭ ರಾಶಿಯವರಿಗೆ ಸಾಕಷ್ಟು ಲಾಭ ಆಗಲಿದೆ. ಸಾಕಷ್ಟು ಸಮಯಗಳಿಂದ ಕೆಲಸ ಮಾಡುತ್ತಿರುವವರಿಗೆ ಪ್ರಮೋಷನ್ ಹಾಗೂ ಸಂಬಳದಲ್ಲಿ ಹೆಚ್ಚಳ ಕಂಡು ಬರಲಿದೆ. ಸಂಪತ್ತು ಆರೋಗ್ಯ ಎರಡು ಕೂಡ ಸಮೃದ್ಧಿಯಾಗಿರಲಿದೆ. ಜೀವನದಲ್ಲಿ ಈ ಸಂದರ್ಭದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ಜೀವನ ಸಂಗಾತಿಯ ಜೊತೆಗೆ ಇರುವಂತಹ ವಿರಸೆಗಳು ಕೂಡ ಸರಿಯಾಗಲಿವೆ. ಸಾಕಷ್ಟು ಸಮಯಗಳಿಂದ ಮದುವೆಗಾಗಿ ಕಾಯುತ್ತಿರುವಂತಹ ಅವಿವಾಹಿತರು ಕಂಕಣ ಭಾಗ್ಯವನ್ನು ಪಡೆದುಕೊಳ್ಳಲಿದ್ದಾರೆ. ವ್ಯಾಪಾರ ಮಾಡುತ್ತಿರುವ ವೃಷಭ ರಾಶಿಯವರಿಗೆ ವ್ಯಾಪಾರದಲ್ಲಿ ದೊಡ್ಡ ಡೀಲ್ ಸಿಗಲಿದ್ದು ಇದರಿಂದ ಅವರು ಸಾಕಷ್ಟು ದೊಡ್ಡ ಮಟ್ಟದ ಲಾಭವನ್ನು ಸಂಪಾದಿಸಲಿದ್ದಾರೆ.

ಕನ್ಯಾ ರಾಶಿ(Virgo)

ಶುಕ್ರನ ಆಶೀರ್ವಾದದಿಂದಾಗಿ ಪ್ರತಿಯೊಂದು ಕೆಲಸಗಳಲ್ಲಿ ಕನ್ಯಾ ರಾಶಿಯವರಿಗೆ ಯಶಸ್ಸು ಸಿಗುತ್ತದೆ. ವಿದೇಶಿ ಪ್ರವಾಸ ಮಾಡುವಂತಹ ಕನ್ಯಾ ರಾಶಿಯವರ ಬಹುದಿನಗಳ ಕನಸು ನನಸಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಗಲಿದೆ. ಕನ್ಯಾ ರಾಶಿಯವರು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯ ಉನ್ನತ ಹಂತವನ್ನು ತಲುಪುವುದಕ್ಕೆ ಅರ್ಹರಾಗಿರುತ್ತಾರೆ. ಕೈತುಂಬ ಲಾಭ ಮಾಡುವಂತಹ ಸಮಯ ಕೂಡ ಇದಾಗಿದ್ದು ಹಣದ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

ಸಿಂಹ ರಾಶಿ(Leo)

ನಾಯಕತ್ವದ ಗುಣಗಳನ್ನು ಹೊಂದಿರುವಂತಹ ಸಿಂಹ ರಾಶಿಯವರು ಪ್ರತಿಯೊಂದು ಕೆಲಸಗಳಲ್ಲಿ ಮುಂದೆ ನಿಂತು ಅದನ್ನು ಪೂರ್ತಿ ಗೊಳಿಸಲಿದ್ದಾರೆ. ಮನಸ್ಸಿಗೆ ಇಷ್ಟ ಆಗುವಂತಹ ಕೆಲಸದ ಹುಡುಕಾಟದಲ್ಲಿ ಇರುವಂತಹ ಸಿಂಹ ರಾಶಿಯವರಿಗೆ ಅವರ ಮನಸ್ಸಿಗೆ ಇಷ್ಟ ಆಗಿರುವಂತಹ ಕೆಲಸ ಸಿಗಲಿದೆ. ಮಲ್ಟಿ ನ್ಯಾಷನಲ್ ಕಂಪನಿ ನಲ್ಲಿ ಕೆಲಸ ಮಾಡುತ್ತಿರುವಂತಹ ಉದ್ಯೋಗಿಗಳಿಗೆ ಕೂಡ ಇದು ಶುಭ ಸಂದರ್ಭ. ಕುಟುಂಬದವರ ಜೊತೆಗೆ ಹಾಳಾಗಿರುವ ಸಂಬಂಧ ಮತ್ತೆ ಸರಿ ಹೊಂದಲಿದೆ. ಕುಟುಂಬದೊಂದಿಗೆ ಒಂದಾಗಿರುವಂತಹ ಈ ಸಂತೋಷ ನಿಮಗೆ ಜೀವನದಲ್ಲಿ ಸಾಕಷ್ಟು ಉತ್ತಮ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಲಿದೆ. ವ್ಯಾಪಾರ ಹಾಗೂ ಉದ್ಯೋಗದಲ್ಲಿ ಕೂಡ ಸಾಕಷ್ಟು ಧನ ಲಾಭ ಆಗಲಿದೆ. ಮನೆಯಲ್ಲಿ ಧಾರ್ಮಿಕ ಕೆಲಸಗಳು ಕೂಡ ನಡೆಯುವುದರಿಂದ ಸಿಂಹ ರಾಶಿಯವರಿಗೆ ಪುಣ್ಯ ಪ್ರಾಪ್ತಿಯಾಗಲಿದೆ.

Comments are closed.