Kannada Serial: ಸೀತಾರಾಮ ಧಾರವಾಹಿಯ “ಮೈ ನೇಮ್ ಇಸ್ ಸಿಹಿ” ಅನ್ನೋ ಮುದ್ದು ಗೊಂಬೆ ಕನ್ನಡದವಳಲ್ವಂತೆ; ಆದ್ರೂ ಎಷ್ಟ್ ಚಂದ ಕನ್ನಡ ಮಾತಾಡ್ತಾಳೆ ಅಲಾ? ಯಾರ್ಗೋತ್ತಾ ಆಕೆ?

Kannada Serial: ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ರೀತಿಯಲ್ಲಿ ಧಾರವಾಹಿಗಳು ಕೂಡ ಕಿರುತೆರೆಯ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮಗಳಾಗಿ ಮಿಂಚುತ್ತಿವೆ‌. ಅದರಲ್ಲಿ ವಿಶೇಷವಾಗಿ ಟಾಪ್ ಕ್ವಾಲಿಟಿಯ ಧಾರವಾಹಿಗಳನ್ನು ನೀಡುವಂತಹ ಜೀ ಕನ್ನಡ ವಾಹಿನಿಯ ಸೀತಾರಾಮ ಧಾರವಾಹಿಯ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡಲು ಹೊರಟಿರುವುದು. ಈ ಧಾರವಾಹಿಯಲ್ಲಿ ವಿಶೇಷವಾಗಿ ಸಹಿ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಪುಟಾಣಿಯ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿದುಕೊಳ್ಳುವಂತಹ ಕುತೂಹಲವಿದೆ. ಬನ್ನಿ ಹಾಗಿದ್ದರೆ ತಡ ಯಾಕೆ ಈಗಲೇ ತಿಳಿದುಕೊಳ್ಳೋಣ.

ಸಹಿಯ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ

ಸಹಿಯನ್ನು ನೋಡಿದ್ರೆ ಆಕೆ ಇಲ್ಲಿ ಅವಳೇ ಅಂತ ಅನ್ಸುತ್ತೆ ಆದರೆ ಅವಳು ಕರ್ನಾಟಕದವಳಲ್ಲ ಬದಲಾಗಿ ನೇಪಾಳದವಳು. ತಮ್ಮ ಪೋಷಕರ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗುವಂತಹ ಸಹಿಯ ನಿಜವಾದ ಹೆಸರು ರಿತು ಸಿಂಗ್ ಎನ್ನುವುದಾಗಿ. ಜೀ ಕನ್ನಡದಲ್ಲಿ ಪ್ರಸಾರ ಕಾಣುವಂತಹ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವ ಮೂಲಕ ಸೀತಾರಾಮ ಧಾರವಾಹಿಯಲ್ಲಿ ಅವಕಾಶವನ್ನು ಪಡೆದುಕೊಳ್ಳುತ್ತಾಳೆ. ಕೇವಲ ಐದು ವರ್ಷ ಕೂಡ ಆಗದೇ ಇರುವ ರಿತು ಸಿಂಗ್ ಸೀತಾರಾಮ ಧಾರವಾಹಿಯಲ್ಲಿ ತಮ್ಮ ನಟನೆಯ ಮೂಲಕ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿದ್ದಾರೆ.

ಡ್ರಾಮಾ ಜೂನಿಯರ್ಸ್ ಮೂಲಕ ಸಿಕ್ಕಿರುವಂತಹ ಅವಕಾಶವನ್ನು ಬಳಸಿಕೊಂಡು ಸೀತಾರಾಮ ಧಾರವಾಹಿಯಲ್ಲಿ ತಮ್ಮ ಮುಗ್ಧ ನಟನೆಯ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುವುದಕ್ಕೆ ಈಕೆ ಯಶಸ್ವಿಯಾಗಿದ್ದಾಳೆ. ಅಭಿಮಾನಿ ಬಳಗವನ್ನು ಹೊಂದಿರುವುದು ಕೂಡ ಪ್ರತಿಯೊಬ್ಬರು ಮೆಚ್ಚಬೇಕಾಗಿರುವ ವಿಚಾರವಾಗಿದೆ. ಸಹಿ ಹಾಗೂ ರಾಮ್ ಇಬ್ರು ಕೂಡ ಜೊತೆಯಾಗಿರುವಂತಹ ದೃಶ್ಯಗಳು ಕೂಡ ಪ್ರೇಕ್ಷಕರಿಗೆ ತುಂಬಾನೇ ಇಷ್ಟ ಆಗುತ್ತೆ. ಇವರಿಬ್ರು ಜೊತೆಯಾಗಿರುವಂತಹ ದೃಶ್ಯಗಳು ಬೇರೆ ದೃಶ್ಯಗಳಿಗೆ ಹೋಲಿಸಿದರೆ ಧಾರವಾಹಿಯ ಪ್ರೇಕ್ಷಕರಿಗೆ ಹತ್ತಿರ ಅನ್ಸುತ್ತೆ.

ಇಂದಿನ ಸಮಯದಲ್ಲಿ ಕಿರುತೆರೆಯ ಧಾರವಾಹಿಗಳಲ್ಲಿ ಅತ್ಯಂತ ಹೆಚ್ಚು ಜನ ಮನ್ನಣೆಯನ್ನು ಪಡೆದುಕೊಂಡಿರುವಂತಹ ಬಾಲ ಕಲಾವಿದೆಯ ಪಾತ್ರ ಅಂದ್ರೆ ಅದು ಸೀತಾರಾಮ ಧಾರವಾಹಿಯ ಸಹಿ ಪಾತ್ರ. ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ರೀತು ಸಿಂಗ್ ಇಷ್ಟೊಂದು ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಅದರಲ್ಲೂ ವಿಶೇಷವಾಗಿ ಆಕೆ ಮೂಲತಃ ನೇಪಾಳದವಳಾಗಿದ್ದರೂ ಕೂಡ ಕನ್ನಡದ ಈ ಧಾರವಾಹಿಯಲ್ಲಿ ಇಂತಹ ಪಾತ್ರವನ್ನು ಪಡೆದುಕೊಂಡು ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿರುವುದು ಸಾಕಷ್ಟು ಜನರ ಮನಸ್ಸನ್ನು ಗೆದ್ದಿರುವಂತಹ ವಿಚಾರವಾಗಿದೆ. ಮುಂದಿನ ಭವಿಷ್ಯದಲ್ಲಿ ಆಕೆ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಯಾಕೆಂದ್ರೆ ಈ ಹಿಂದೆ ಕೂಡ ಕನ್ನಡ ಚಿತ್ರರಂಗದಲ್ಲಿ ಬಾಲಕಲಾವಿದೆಯರಾಗಿ ಕಾಣಿಸಿಕೊಂಡಂತಹ ನಟಿಯರು ನಂತರ ನಾಯಕ ನಟಿಯರಾಗಿರುವ ಉದಾಹರಣೆಯನ್ನು ಕೂಡ ನಾವು ನೋಡಬಹುದಾಗಿದೆ. ಇನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವಂತಹ ಸೀತಾರಾಮ ಧಾರವಾಹಿ ಕೂಡ ಅತ್ಯಂತ ಹೆಚ್ಚು ಗ್ರಾಹಕರ ಬಳಗವನ್ನು ಹೊಂದಿರುವಂತಹ ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಈ ಧಾರವಾಹಿಯನ್ನು ನೋಡುವಂತಹ ಪ್ರತಿಯೊಬ್ಬ ಪ್ರೇಕ್ಷಕರ ಫೇವರೆಟ್ ಸಹಿ ಆಗಿದ್ದಾಳೆ.

Comments are closed.