Astrology: 12 ವರ್ಷಗಳ ನಂತರ ಕೃತಿಕ ನಕ್ಷತ್ರಕ್ಕೆ ಗುರುವಿನ ಪ್ರವೇಶ. ಈ ರಾಶಿಗಳಿಗೆ ಪ್ರಾರಂಭವಾಗಲಿದೆ ಅದೃಷ್ಟ.

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಗುರು ಗೃಹಸ್ಪತಿ ಕೃತಿಕ ನಕ್ಷತ್ರದಲ್ಲಿ ಗೋಚಾರ ಕಾಣಲಿದ್ದಾನೆ. ಈ ಸಂದರ್ಭದಲ್ಲಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಅದೃಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಆ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಅದೃಷ್ಟವಂತ ರಾಶಿಗಳು

ಮಿಥುನ ರಾಶಿ (Gemini)

ಮಿಥುನ ರಾಶಿಯವರು ಈ ಸಂದರ್ಭದಲ್ಲಿ ಗುರುವಿನ ಗೋಚಾರ ಫಲದಿಂದಾಗಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಗುರುವಿನ ಈ ಚಲನೆಯಿಂದಾಗಿ ಮಿಥುನ ರಾಶಿಯವರ ಸಮಾಜದಲ್ಲಿ ಪ್ರತಿಷ್ಠ ಹಾಗೂ ಗೌರವಗಳನ್ನು ಸಂಪಾದನೆ ಮಾಡಲಿದ್ದಾರೆ. ಸಾಕಷ್ಟು ಜನರ ನೆಚ್ಚಿನ ವ್ಯಕ್ತಿಗಳಾಗಿ ಕೂಡ ಮಿಥುನ ರಾಶಿಯವರಿಗೆ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತಾರೆ. ವಿಶೇಷವಾಗಿ ಈ ಸಂದರ್ಭದಲ್ಲಿ ಚುನಾವಣೆ ಇರುವ ಕಾರಣದಿಂದಾಗಿ ರಾಜಕೀಯದಲ್ಲಿ ಕೂಡ ಸಾಕಷ್ಟು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಸಾಕಷ್ಟು ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ಹೀಗಾಗಿ ಹಣದ ವಿಚಾರದಲ್ಲಿ ಮಿಥುನ ರಾಶಿಯವರು ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಬುಧನಿಗೆ ಸಂಬಂಧಪಟ್ಟಂತಹ ಕೆಲವೊಂದು ಮಂತ್ರಗಳನ್ನು ಪಠಣೆ ಮಾಡುವ ಮೂಲಕ ಹಾಗೂ ಅಗತ್ಯ ಇರುವವರಿಗೆ ಬೇಕಾಗಿರುವಂತಹ ವಸ್ತುಗಳನ್ನು ದಾನ ಮಾಡುವ ಮೂಲಕ ಪುಣ್ಯ ಸಂಪಾದನೆ ಮಾಡಬಹುದಾಗಿದೆ.

ಕರ್ಕ ರಾಶಿ (Cancer)

ಒಂದು ವೇಳೆ ಕರ್ಕ ರಾಶಿಯವರಲ್ಲಿ ಯಾರಾದರೂ ಸರ್ಕಾರಿ ಉದ್ಯೋಗಿಗಳು ಇದ್ರೆ ಖಂಡಿತವಾಗಿ ಅವರಿಗೆ ಈ ಸಂದರ್ಭದಲ್ಲಿ ಪ್ರಮೋಷನ್ ಸಿಗೋದು ಖಂಡಿತ. ಕೇವಲ ಸರ್ಕಾರಿ ನೌಕರರಿಗೆ ಮಾತ್ರವಲ್ಲದೆ ಕೆಲಸದಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಕೂಡ ಸಂಬಳ ಅಥವಾ ಪದವಿಗಳಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ಕರ್ಕ ರಾಶಿಯವರು ಕೂಡ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ನಡೆಸಲಿದ್ದಾರೆ. ಸಾಕಷ್ಟು ಆದಾಯದ ಮೂಲಗಳು ಹುಟ್ಟಿಕೊಂಡಿರುವ ಕಾರಣದಿಂದಾಗಿ ಕರ್ಕ ರಾಶಿಯವರಿಗೆ ಹಣದ ವಿಚಾರದಲ್ಲಿ ತಲೆಬಿಸಿ ಇಲ್ಲ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಅದೃಷ್ಟ ಅನ್ನೋದು ಅವರ ಬೆನ್ನ ಹಿಂದೆ ಇರುತ್ತದೆ.

ಧನು ರಾಶಿ(Sagittarius)

ಧನು ರಾಶಿಯವರಿಗೆ ಇದು ಅತ್ಯುತ್ತಮ ಲಾಭದಾಯಕ ಸಮಯವಾಗಿದ್ದು ಹಣದ ಲಾಭದ ಜೊತೆಗೆ ಸಮಾಜದಲ್ಲಿ ಜನರ ನಡುವೆ ಧನುರಾಶಿಯವರ ಗೌರವ ಕೂಡ ಹೆಚ್ಚಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಧನುರಾಶಿಯವರಿಗೆ ಅವರ ವರಿಷ್ಠ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ ಹಾಗೂ ಹೊಸ ಜವಾಬ್ದಾರಿಯನ್ನು ಕೂಡ ವಹಿಸಲಾಗುತ್ತದೆ. ಕೆಲಸದ ನಿಮಿತ್ತ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾದಂತಹ ಅವಕಾಶ ಕೂಡ ಹುಡುಕಿಕೊಂಡು ಬರುತ್ತದೆ ಅದು ವಿದೇಶಿ ಪ್ರಯಾಣ ಕೂಡ ಆಗಿರಬಹುದು. ಪ್ರತಿಯೊಂದು ವಿಚಾರಗಳಲ್ಲಿಯೂ ನಿಮ್ಮ ಪರಿಶ್ರಮದ ಫಲ ಸಕಾರಾತ್ಮಕವಾಗಿ ಕಂಡುಬರುತ್ತದೆ. ನಿಮ್ಮ ಕನಸಿನ ಮನೆ ಅಥವಾ ವಾಹನವನ್ನು ಖರೀದಿ ಮಾಡುವಂತಹ ಅವಕಾಶವನ್ನು ಕೂಡ ಗುರುವಿನ ಕೃಪೆಯಿಂದಾಗಿ ನೀವು ಈ ಸಮಯದಲ್ಲಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಂದಾಗಿ ಸಂತೋಷ ನೆಮ್ಮದಿ ಮತ್ತೆ ಮರುಕಳಿಸಲಿದೆ.

Comments are closed.