Film: “ನನ್ನ ಈ ಒಂದು ನಿರ್ಧಾರನ ನನ್ನ ಗಂಡನೂ ಒಪ್ಕೊಂಡ” ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸರ್ಪ್ರೈಸಿಂಗ್ ವಿಚಾರ ಹೊರಹಾಕಿದ ನಟಿ ಹಿತಾ ಚಂದ್ರಶೇಖರ್!

Film: ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಲ್ಲಿ ಒಬ್ಬರಾಗಿರುವಂತಹ ಸಿಹಿ ಕಹಿ ಚಂದ್ರು ಅವರ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಅವರ ಮಗಳಾಗಿರುವಂತಹ ಹಿತ ಚಂದ್ರಶೇಖರ್ ಅವರು ಮತ್ತೊಬ್ಬ ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಕಿರಣ್ ಶ್ರೀನಿವಾಸ್ ಅವರನ್ನು ಮದುವೆಯಾಗಿ ಈಗಾಗಲೇ ನಾಲ್ಕು ವರ್ಷಗಳು ಪೂರ್ಣಗೊಂಡಿವೆ. ಇತ್ತೀಚಿಗೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ತೆಗೆದುಕೊಂಡಿರುವಂತಹ ನಿರ್ಧಾರದ ಬಗ್ಗೆ ಒಂದು ಆಶ್ಚರ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದು ಅದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಹಿತ ಚಂದ್ರಶೇಖರ್ ಇದರ ಬಗ್ಗೆ ಮಾತನಾಡುತ್ತಾ ಸದ್ಯಕ್ಕೆ ನಾನು ಮಕ್ಕಳನ್ನು ಹೊಂದುವಂತಹ ಯಾವುದೇ ಆಲೋಚನೆಯನ್ನು ಹೊಂದಿಲ್ಲ ಹಾಗೂ ಇದರ ಬಗ್ಗೆ ತಂದೆ ತಾಯಿ ಹಾಗೂ ಗಂಡ ಕೂಡ ಸಪೋರ್ಟಿವ್ ಆಗಿದ್ದಾರೆ ಅನ್ನುವುದಾಗಿ ಹೇಳಿಕೊಂಡಿದ್ದಾರೆ. ನಮ್ಮದೇ ಮಗು ಆಗಿರ್ಬೇಕಾಗಿಲ್ಲ ನಾಯಿಮರಿಯನ್ನು ಕೂಡ ಸಾಕಿ ಪೇರೆಂಟಿಂಗ್ ಮಾಡಬಹುದು ಎಂಬುದಾಗಿ ಹೇಳಿಕೊಂಡಿದ್ದಾರೆ. ವಯಸ್ಸಾದ ನಂತರ ಮಕ್ಕಳು ನೋಡಿಕೊಳ್ಳುತ್ತಾರಾ ಎನ್ನುವಂತಹ ಪ್ರಶ್ನೆಗೆ ಕೂಡ ಉತ್ತರಿಸುವ ಅವರು ಈಗ ಮಕ್ಕಳಿರುವವರು ವ್ರದ್ದಾಪ್ಯದಲ್ಲಿ ನೋಡಿಕೊಳ್ಳುವವರು ಇಲ್ಲದೆ ಒದ್ದಾಡುತ್ತಿರುವುದನ್ನು ಕೂಡ ನೀವು ನೋಡಬಹುದಾಗಿದೆ ಎಂಬುದಾಗಿ ಹೇಳಿದ್ದಾರೆ. ಇದು ನನ್ನ ಸ್ವಂತ ನಿರ್ಧಾರ ಹಾಗೂ ಇದಕ್ಕೆ ನನ್ನ ಕುಟುಂಬಸ್ಥರ ಒಪ್ಪಿಗೆ ಇದೆ ಎಂಬುದಾಗಿ ಹಿತ ಚಂದ್ರಶೇಖರ್ ಹೇಳಿದ್ದಾರೆ.

ನನ್ನ ಅಪ್ಪ ಅಮ್ಮ ಇಬ್ಬರು ಕೂಡ ಇದಕ್ಕೆ ಒಪ್ಪಿದ್ದಾರೆ ಹಾಗೂ ಈ ನಿರ್ಧಾರದ ಬಗ್ಗೆ ಬೇರೆ ಯಾರೇ ಪ್ರಶ್ನೆ ಮಾಡಿದರು ಕೂಡ ಅದು ನನಗೆ ಸಂಬಂಧ ಕೊಡುವುದಿಲ್ಲ ಯಾಕೆಂದರೆ ನನ್ನ ಜೀವನದಲ್ಲಿ ನನ್ನ ಅಪ್ಪ ಅಮ್ಮ ಮುಖ್ಯವಾಗಿ ಇರುತ್ತಾರೆ. ಅವರ ಒಪ್ಪಿಗೆ ಸಿಕ್ಕಿದ ಮೇಲೆ ಬೇರೆ ಯಾರ ಅಪ್ಪಣೆ ಕೂಡ ನನಗೆ ಬೇಕಾಗಿಲ್ಲ. ಇನ್ನು ನಾನು ಹಾಗೂ ನನ್ನ ಗಂಡ ಕೂಡ ವಯಸ್ಸಾದಾಗ ಪರಸ್ಪರ ಒಬ್ಬರನ್ನೊಬ್ಬರು ನೋಡಿಕೊಳ್ಳೋಣ ಎಂಬುದಾಗಿ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎನ್ನುವಂತಹ ಮಾತನ್ನು ಕೂಡ ಹಿತ ಚಂದ್ರಶೇಖರ್ ಆಡಿದ್ದಾರೆ.

ನಟಿಯಾಗಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿರುವಂತಹ ಹಿತ ಚಂದ್ರಶೇಖರ್ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫಾಲೋವರ್ಸ್ ಗಳ ಜೊತೆಗೆ ತಮ್ಮ ಜೀವನದ ಹಾಗೂ ಸಿನಿಮಾ ಜೀವನದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಕನೆಕ್ಟೆಡ್ ಆಗಿರುತ್ತಾರೆ. ಇತ್ತೀಚಿಗಷ್ಟೇ ರಾಪಿಡ್ ರಶ್ಮಿ ಅವರ ರಾಪಿಡ್ ಫೈಯರ್ ಕಾರ್ಯಕ್ರಮದಲ್ಲಿ ಅವರು ಕೇಳಿರುವಂತಹ ಪ್ರಶ್ನೆಗಳಿಗೆ ಹಿತ ಚಂದ್ರಶೇಖರ್ ರವರು ಈ ರೀತಿಯ ಉತ್ತರಗಳನ್ನು ನೀಡಿದ್ದು ಪ್ರತಿಯೊಬ್ಬರೂ ಕೂಡ ಅವರ ಸಂದರ್ಶನವನ್ನು ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ. ಇತ್ತೀಚಿಗೆ ಕೂಡ ಹಿತ ಚಂದ್ರಶೇಖರ್ ರವರು ಕೆಲವೊಂದು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Comments are closed.