PM Kisan Scheme: ರೈತರಿಗೆ ಯುಗಾದಿ ಗಿಫ್ಟ್; ಪ್ರಧಾನ ಮಂತ್ರಿ ಕಿಸಾನ್ ಯೋಜನೆ 17ನೇ ಕಂತಿನ ಹಣದ ಬಗ್ಗೆ ಸಿಕ್ತು ಬಿಗ್ ಅಪ್ಡೇಟ್!

PM Kisan Scheme: ಪ್ರಧಾನಿಗಳಾಗಿರುವಂತಹ ಶ್ರೀ ನರೇಂದ್ರ ಮೋದಿ ಅವರು 2019ರ ಫೆಬ್ರವರಿಯಲ್ಲಿಯೇ ದೇಶದ ರೈತರಿಗಾಗಿ ಅವರ ಅನುಕೂಲಕ್ಕಾಗಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಪ್ರಾರಂಭಿಸುತ್ತಾರೆ. ಈ ಯೋಜನೆಯ ಮೂಲಕ ಅರ್ಹರಾಗಿರುವ ಅಂತಹ ಪ್ರತಿಯೊಬ್ಬ ರೈತರಿಗೂ ಕೂಡ ವರ್ಷಕ್ಕೆ ಆರು ಸಾವಿರ ರೂಪಾಯಿಗಳ ಆರ್ಥಿಕ ಸಹಾಯವನ್ನು ಮಾಡುವಂತಹ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಕಿಸಾನ್ ಯೋಜನೆ ಅಡಿಯಲ್ಲಿ ಸಿಗುವಂತಹ ಹಣವನ್ನು ಕೂಡ 6000ಗಳನ್ನು ಒಟ್ಟಿಗೆ ಹಾಕುವುದಿಲ್ಲ ಬದಲಾಗಿ ಮೂರು ಕಂತುಗಳಾಗಿ ವಿಭಜಿಸಿ ವರ್ಗಾಯಿಸಲಾಗುತ್ತಿದೆ. ಏಪ್ರಿಲ್ ನಿಂದ ಜುಲೈ ತಿಂಗಳ ಒಳಗೆ ಮೊದಲ ಕಂತು, ಆಗಸ್ಟ್ ನಿಂದ ನವೆಂಬರ್ ಒಳಗೆ ಎರಡನೇ ಕಂತು, ಡಿಸೆಂಬರ್ ನಿಂದ ಮಾರ್ಚ್ ಅವಧಿಯಲ್ಲಿ ಮೂರನೇ ಕಂತು ಹೀಗೆ ಪ್ರತಿಯೊಂದು ಅವಧಿಯಲ್ಲಿ ರೂ.2000 ಕಂತಿನ ಹಣವನ್ನು ಒಟ್ಟಾರೆಯಾಗಿ 6000 ರೂಪದಲ್ಲಿ ಹಣವನ್ನು ರೈತರಿಗೆ ನೀಡಲಾಗುತ್ತಿದೆ.

ಇನ್ನೂ ಕಿಸಾನ್ ಯೋಜನೆಯ 16ನೇ ಕಂತಿನ ಹಣವನ್ನು ಫೆಬ್ರವರಿ 28ರಂದು ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದಾಗಿ ಭಾರತದಲ್ಲಿರುವಂತಹ ಒಂಬತ್ತು ಕೋಟಿಗೂ ಹೆಚ್ಚಿನ ರೈತರು ಬರೋಬ್ಬರಿ 21000 ಕೋಟಿ ಹೆಚ್ಚಿನ ಹಣವನ್ನು ಪಡೆದುಕೊಂಡಿದ್ದಾರೆ. ಇನ್ನು 17ನೇ ಕಂತಿನ ಹಣದ ಬಗ್ಗೆ ಅತಿ ಶೀಘ್ರದಲ್ಲೇ ಘೋಷಣೆ ಅನೌನ್ಸ್ ಆಗಲಿದೆ ಎನ್ನುವಂತಹ ಕಾತುರತೆಯಲ್ಲಿ ರೈತರು ಇದ್ದಾರೆ.

ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ

ಈಗಾಗಲೇ ಫೆಬ್ರವರಿ ತಿಂಗಳದಲ್ಲಿ 16ನೇ ಕಂತಿನ ಹಣ ಹಾಕಿರುವುದರಿಂದಾಗಿ ಲೆಕ್ಕಾಚಾರ ಹಾಕಿ ನೋಡುವುದಾದರೆ 17ನೇ ಕಂತಿನ ಹಣ ಜೂನ್ ತಿಂಗಳಲ್ಲಿ ಬರಬೇಕಾಗಿತ್ತು ಆದರೆ ಈ ಸಂದರ್ಭದಲ್ಲಿ ಚುನಾವಣೆ ನಡೆಯುವ ಕಾರಣದಿಂದಾಗಿ ನೀತಿ ಸಂಹಿತೆ ಉಲ್ಲಂಘನೆ ಆಗಬಾರದು ಎನ್ನುವ ಕಾರಣಕ್ಕಾಗಿ ಇದು ಮುಂದುವರೆಯುವಂತಹ ಸಾಧ್ಯತೆ ಹೆಚ್ಚಾಗಿದೆ. ಇನ್ನು ಈ ಹಿಂದಿನ ಕಂತಿನ ಅಂದರೆ 16ನೇ ಕಂತಿನ ಹಣ ಜಮಾಾವಣೆ ಆಗದೆ ಹೋದಲ್ಲಿ ಸಂಬಂಧಪಟ್ಟಂತಹ ಇಲಾಖೆಗೆ ನೀವು ದೂರು ನೀಡಬಹುದಾಗಿದೆ.

011-24300606 ಈ ನಂಬರ್ ಗೆ ನೀವು ಕರೆ ಮಾಡುವ ಮೂಲಕ ಈ ವಿಚಾರದ ಬಗ್ಗೆ ದೂರು ನೀಡಬಹುದಾಗಿದೆ. [email protected] ಇದು ಅಧಿಕೃತ ವೆಬ್ಸೈಟ್ ಆಗಿದ್ದು ಇದರಲ್ಲಿ ಹೋಗಿ ದೂರು ನೀಡುವಂತಹ ಅವಕಾಶ ಕೂಡ ನೀಡಲಾಗಿದೆ. ಕೆಲವೊಮ್ಮೆ ಇ-ಕೆವೈಸಿ ಅಪ್ಡೇಟ್ ಅನ್ನು ಪೂರ್ಣಗೊಳಿಸದಿದ್ದರೆ ಆ ಸಂದರ್ಭದಲ್ಲಿ ಕೂಡ ರೈತರ ಖಾತೆಗೆ ಹಣ ಹಾಕುವುದು ವಿಳಂಬವಾಗುತ್ತದೆ. ಹೀಗಾಗಿ ಒಂದು ವೇಳೆ ಈ ರೀತಿಯ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ ಚೆಕ್ ಮಾಡಿಸಿ ಹಾಗೂ ಅಪ್ಡೇಟ್ ಮಾಡಿಸಿ ಹಣ ನಿಮ್ಮ ಖಾತೆಗೆ ಬರುತ್ತದೆ. ಇದರ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸುವುದು ಕೂಡ ಅತ್ಯಂತ ಪ್ರಮುಖ ಕೆಲಸ ಆಗಿದ್ದು ಈ ಎರಡು ಕೆಲಸಗಳನ್ನು ನೀವು ಸರಿಯಾಗಿ ಮಾಡಿದಲ್ಲಿ ಮಾತ್ರ ನಿಮ್ಮ ಖಾತೆಗೆ 16ನೇ ಕಂತಿನ ಹಣ ವರ್ಗಾವಣೆ ಆಗುತ್ತದೆ.

pmkisan.gov.in ಇದು ಅಧಿಕೃತ ಪೋರ್ಟಲ್ ಆಗಿದ್ದು ಹೊಸದಾಗಿ ಈ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಳ್ಳುವಂತಹ ರೈತರಿಗೆ ಇದು ಸಹಾಯಕವಾಗಲಿದೆ. ಇಲ್ಲಿ ನಿಮ್ಮ ಹೆಸರು ವಿಳಾಸ ಹಾಗೂ ಭೂಮಿಯ ವಿವರ ಸೇರಿದಂತೆ ಪ್ರತಿಯೊಂದು ಕೆಳಲಾಗುವಂತಹ ಮಾಹಿತಿಗಳನ್ನು ನಮೂದಿಸಿ ನಂತರ ನಿಮ್ಮ ಮೊಬೈಲ್ ನಂಬರಿಗೆ ಬರುವಂತಹ OTP ಅನ್ನು ಸಬ್ಮಿಟ್ ಮಾಡಬೇಕು. ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಇಲ್ಲಿ ಸರಿಯಾಗಿ ನಮೂದಿಸಿದ ನಂತರ ಆಧಾರ್ ಕಾರ್ಡ್ ನಲ್ಲಿರುವಂತೆ ಪ್ರತಿಯೊಂದು ವಿವರಗಳನ್ನು ಪೂರ್ತಿ ಮಾಡಬೇಕು. ಈ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿದ ನಂತರ ನಿಮ್ಮ ನೋಂದಾವಣೆ ಯಶಸ್ವಿಯಾಗುತ್ತದೆ.

Comments are closed.