Relationship: ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವಂತಹ ಪುರುಷರ ಜೊತೆಗೆ ಡೇಟಿಂಗ್ ಮಾಡಬಹುದಾ? ಮಾಡಿದ್ರೆ ಏನಾಗತ್ತೆ?

Relationship: ಸಾಮಾನ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ನಡೆಯುವಂತಹ ಮದುವೆಗಳು ಸಾಕಷ್ಟು ದೀರ್ಘಕಾಲದ ಬಾಳಿಕೆಯನ್ನು ಹೊಂದಿರುವುದು ಅತ್ಯಂತ ವಿರಳ ಎಂದು ಹೇಳಬಹುದಾಗಿದೆ. ಇನ್ನು ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರೋದು ಈಗಾಗಲೇ ಕಾನೂನಾತ್ಮಕವಾಗಿ ತಮ್ಮ ಜೀವನ ಸಂಗಾತಿಯಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವಂತಹ ವಿಚ್ಛೇದಿತ ಪುರುಷನನ್ನು ಮತ್ತೆ ಡೇಟಿಂಗ್ ಮಾಡೋದು ಸರಿನಾ ಎನ್ನುವಂತಹ ಪ್ರಶ್ನೆಗೆ ಉತ್ತರ ನೀಡೋಕೆ ಹೊರಟಿರೋದು. ಹಾಗಿದ್ರೆ ಬನ್ನಿ ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

ಈ ರೀತಿ ವಿವಾಹ ವಿಚಾರವನ್ನು ಪಡೆದುಕೊಂಡಿರುವಂತಹ ಪುರುಷರನ್ನು ಮತ್ತೆ ಪ್ರೀತಿಸುವುದು ಅಥವಾ ಮದುವೆ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಈ ಸಂದರ್ಭದಲ್ಲಿ ಅವರಿಗೆ ಸ್ವಲ್ಪಮಟ್ಟಿಗೆ ಸಮಯವನ್ನು ನೀಡಬೇಕಾಗಿರುತ್ತದೆ. ಈ ರೀತಿಯ ಘಟನೆಗಳಿಂದ ಹೊರಗೆ ಬಂದ ಕೂಡಲೇ ಅವರನ್ನು ಡೇಟಿಂಗ್ ಮಾಡುವುದಕ್ಕೆ ಹೋಗಬಾರದು. ಯಾಕೆಂದರೆ ಅವರು ತಮ್ಮ ಹಳೆಯ ಕುಟುಂಬ ಅಥವಾ ಹೆಂಡತಿಯ ನೆನಪಿನಲ್ಲಿ ಇರಬಹುದಾಗಿದೆ. ಅವರ ಜೊತೆಗೆ ಡೇಟಿಂಗ್ ಗೆ ಹೋಗುವುದು ಉತ್ತಮ ಎನ್ನಬಹುದಾಗಿದೆ. ಒಂದು ವೇಳೆ ವಿವಾಹ ವಿಚ್ಛೇದನ ಪಡೆದ ನಂತರ ಕೂಡ ಅವರು ತಮ್ಮ ಹಳೆಯ ಪತ್ನಿಯನ್ನ ಭೇಟಿಯಾಗೋದಕ್ಕೆ ಹೋಗ ಬಹುದಾದಂತಹ ಪರಿಸ್ಥಿತಿ ಬಂದಾಗ ಅದರಿಂದ ನಿಮಗೆ ಅಸೂಯೆ ಉಂಟಾಗುವಂತಹ ಸಾಧ್ಯತೆ ಕೂಡ ಇರುತ್ತೆ. ಹೀಗಾಗಿ ಅವರ ತಮ್ಮ ಹಳೆಯ ಪತ್ನಿಯನ್ನು ಮರೆಯೋದನ್ನ ನೀವು ಕಾಯ್ಬೇಕಾಗಿರುತ್ತದೆ.

ಕೆಲವೊಮ್ಮೆ ವಿವಾಹ ವಿಚ್ಛೇದನಗಳು ಅಂದುಕೊಂಡಕ್ಕಿಂತ ಹೆಚ್ಚಿನ ಸಮಯವನ್ನು ಪಡೆದುಕೊಳ್ಳುತ್ತದೆ ಕೊನೆಗೆ ವಿವಾಹ ವಿಚ್ಛೇದಿತ ಪುರುಷನಿಗೆ ಆತನ ಮಕ್ಕಳನ್ನು ನೋಡಿಕೊಳ್ಳುವ ಅಂತಹ ಜವಾಬ್ದಾರಿ ಕೂಡ ಸಿಗಬಹುದಾಗಿದೆ. ಅದನ್ನು ನೀವು ನಿರ್ವಹಿಸುವುದಕ್ಕೆ ಸಾಧ್ಯವಾದಲ್ಲಿ ಮಾತ್ರ ಅವರನ್ನು ಡೇಟಿಂಗ್ ಮಾಡುವ ಪ್ರಯತ್ನವನ್ನು ಮಾಡಬಹುದಾಗಿದೆ. ಕೆಲವೊಮ್ಮೆ ತಮ್ಮ ಹಳೆಯ ಪತ್ನಿಯ ದೂರುಗಳನ್ನು ಅಥವಾ ಅವರ ಬಗ್ಗೆ ಇರುವಂತಹ ಕೆಲವೊಂದು ಭಾವನೆಗಳನ್ನು ನಿಮ್ಮಲ್ಲಿ ಹೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಬಹುದು ಆಗ ನೀವು ಅವುಗಳನ್ನು ಒತ್ತಡದ ರೂಪದಲ್ಲಿ ತೆಗೆದುಕೊಳ್ಳದೆ ತಾಳ್ಮೆಯಿಂದ ಕೇಳಬೇಕಾಗಿರುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಸಮಾಜ. ಮದುವೆಯಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರುವಂತಹ ವ್ಯಕ್ತಿಯ ಜೊತೆಗೆ ನೀವು ಪ್ರೀತಿಯ ಮದುವೆ ಮಾಡುವುದಕ್ಕೆ ತಯಾರಾಗುತ್ತಿದ್ದೀರಿ ಅಂದ್ರೆ ಸಮಾಜದಲ್ಲಿ ಕೆಲವರು ಕೆಟ್ಟದಾಗಿ ಮಾತನಾಡುವವರು ಕೂಡ ಇರುತ್ತಾರೆ. ಡಿವೋರ್ಸ್ ಪಡೆದುಕೊಂಡಿರುವಂತಹ ಪುರುಷನನ್ನು ನೀವು ಡೇಟಿಂಗ್ ಮಾಡೋದಕ್ಕಿಂತ ಮುಂಚೆ ಎರಡು ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳಬೇಕು. ಮೊದಲನೇದಾಗಿ ಅವರ ಕಾನೂನು ಪ್ರಕರಣ ಯಾವ ಹಂತದಲ್ಲಿದೆ ಯಾವಾಗ ಮುಗಿಯಲಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಎರಡನೇದಾಗಿ ಯಾವ ಕಾರಣಕ್ಕಾಗಿ ಆ ಪುರುಷ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಎರಡು ಕಾರಣಗಳಿಗೆ ಸರಿಯಾದ ಉತ್ತರ ಸಿಕ್ಕಿದ್ದಲ್ಲಿ ಮಾತ್ರ ನೀವು ಅವರನ್ನು ಡೇಟಿಂಗ್ ಗೆ ಕರೆದುಕೊಂಡು ಹೋಗಬಹುದಾಗಿದೆ.

Comments are closed.