HSRP: HSRP ನಂಬರ್ ಪ್ಲೇಟ್ ಹಾಕ್ದೆ ಇರೋರಿಗೆ ಸಿಕ್ತು ನೋಡಿ ಗುಡ್ ನ್ಯೂಸ್; ಏನ್ ಗೊತ್ತಾ?

HSRP: HSRP ನಂಬರ್ ಪ್ಲೇಟ್ ಗಳನ್ನು ಹಳೆಯ ವಾಹನಗಳಿಂದ ಪ್ರಾರಂಭಿಸಿ ಹೊಸ ವಾಹನಗಳವರೆಗೂ ಕೂಡ ಅಳವಡಿಸಿಕೊಳ್ಳುವುದು ಕಡ್ಡಾಯ ಎನ್ನುವಂತಹ ನಿಯಮವನ್ನು ಈಗಾಗಲೇ ರಾಜ್ಯ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿದೆ. ಹೀಗಾಗಿ ಟ್ರಾನ್ಸ್ಪೋರ್ಟ್ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಿ HSRP ನಂಬರ್ ಪ್ಲೇಟ್ ಪಡೆದುಕೊಳ್ಳುವುದು ಅತ್ಯಂತ ಕಡ್ಡಾಯವಾಗಿರುವುದು ರಾಜ್ಯದ ಎಲ್ಲಾ ಕಡೆಗಳಲ್ಲಿ ಸದ್ದು ಮಾಡುತ್ತಿದೆ. ಸಾಕಷ್ಟು ಸಮಯಗಳ ಹಿಂದೆನೇ ಈ ನಿಯಮವನ್ನು ಜಾರಿಗೆ ತಂದಿದ್ದರು ಕೂಡ ಜನರು ಇದುವರೆಗೂ ಕೂಡ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ HSRP ನಂಬರ್ ಪ್ಲೇಟ್ ಅನ್ನು ತಮ್ಮ ವಾಹನಗಳಿಗೆ ಅಳವಡಿಸಿಕೊಂಡಿಲ್ಲ. ಹೀಗಿದ್ರೂ ಕೂಡ ಸರ್ಕಾರದಿಂದ ಈಗ ಒಂದು ಗುಡ್ ನ್ಯೂಸ್ ಬಂದಿರೋದು ಅವರಿಗೆ ಮತ್ತಷ್ಟು ನಿರಾಳತೆಯನ್ನು ನೀಡಿದೆ.

ಈಗಾಗಲೇ ಸಾಕಷ್ಟು ಬಾರಿ ಅವಕಾಶ ನೀಡಲಾಗಿದೆ

ಮೊದಲಿಗೆ 2019 ಏಪ್ರಿಲ್ ತಿಂಗಳಿಗಿಂತ ಮುಂಚೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ವಾಹನಗಳಲ್ಲಿ 2023ರ ನವಂಬರ್ 17ರ ಒಳಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಬೇಕಾಗಿರುವುದು ಕಡ್ಡಾಯ ಎಂಬುದಾಗಿ ಘೋಷಿಸಲಾಗಿತ್ತು. ಇದಾದ ನಂತರ ಸಾಕಷ್ಟು ಜನರು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದೆ ಇರುವ ಕಾರಣಕ್ಕಾಗಿ 2024ರ ಫೆಬ್ರವರಿ 17 ಕೊನೆಯ ದಿನಾಂಕ ಎಂಬುದಾಗಿ ಹೇಳಲಾಗಿತ್ತು. ಆದರೆ ಈಗ ಈ ಸಂದರ್ಭದಲ್ಲಿ ಕೂಡ ರಾಜ್ಯದಲ್ಲಿ ಸಾಕಷ್ಟು ಕಡೆಗಳಲ್ಲಿ ಜನರು HSRP ನಂಬರ್ ಪ್ಲೇಟ್ ಗಳನ್ನು ಅಳವಡಿಸಿಲ್ಲ ಎನ್ನುವ ಕಾರಣಕ್ಕಾಗಿ ಸಾರಿಗೆ ಸಚಿವ ಆಗಿರುವಂತಹ ರಾಮಲಿಂಗಾರೆಡ್ಡಿ ಅವರು ಕೂಡ ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಮಾಡಿದ್ದು ಇದರ ದಿನಾಂಕವನ್ನು ಕೂಡ ಮುಂದೂಡಿದ್ದಾರೆ. ಹಾಗಿದ್ದರೆ HSRP ನಂಬರ್ ಪ್ಲೇಟ್ ಹಾಕೋದಕ್ಕೆ ಮುಂದುವರಿದ ಗಡುವು ಅಥವಾ ಕೊನೆಯ ದಿನಾಂಕ ಯಾವುದು ಎನ್ನುವ ಮಾಹಿತಿಯನ್ನು ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳುವುದಕ್ಕೆ ಕೊನೆಯ ದಿನಾಂಕ

HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವುದಕ್ಕೆ ಈಗಾಗಲೇ ನಾಲ್ಕು ಬಾರಿ ಗಡುವನ್ನು ವಿಸ್ತರಿಸಲಾಗಿದ್ದು ಕೊನೆಯ ಬಾರಿಯನ್ನುವಂತೆ ಮೇ 31ರ ಒಳಗೆ ಪ್ರತಿಯೊಬ್ಬರು ಕೂಡ ತಮ್ಮ ವಾಹನಗಳಿಗೆ ಈ ಸುರಕ್ಷಿತ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕು ಎನ್ನುವುದಾಗಿ ಸರ್ಕಾರ ಆದೇಶವನ್ನು ಹೊರಡಿಸಿದೆ. ಒಂದು ವೇಳೆ ಈ ನಿಯಮಗಳ ಹೊರತಾಗಿಯೂ ಕೂಡ ನೀವು ನಿಗದಿತ ಸಮಯದ ಒಳಗೆ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ನಿಮ್ಮ ವಾಹನದ ಲೈಸೆನ್ಸ್ ರದ್ದಾಗುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ ಒಂದು ವೇಳೆ ನೀವು ಯಾವುದೇ ಸಮಯದಲ್ಲಿ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡರೆ ಆ ಸಂದರ್ಭದಲ್ಲಿ ನಿಮ್ಮ ಮೇಲೆ ದೊಡ್ಡ ಮೊತ್ತದ ವಿಧಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸರಿಯಾದ ಸಮಯದ ಒಳಗೆ ನೀವು ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿ ಕೆಲಸವನ್ನು ಮಾಡಿ.

Comments are closed.