Goat Farming: ಕುರಿ ಬೇಕಾ ಕುರಿ? ಇಲ್ಲಿ ಎಷ್ಟು ಬೇಕಾದ್ರೂ ಕುರಿ ಕೊಂಡೊಯ್ಯಬಹುದು ಉಚಿತವಾಗಿ; ಒಂದು ರೂಪಾಯಿ ಕೊಡೋದ್ ಬೇಡ!

Goat Farming: ಒಂದು ಚಿಕ್ಕ ವಸ್ತುವನ್ನು ಬೇರೆಯವರಿಂದ ನಾವು ತೆಗೆದುಕೊಂಡು ಹೋಗಬೇಕೆಂದರೆ ಅದಕ್ಕೆ ಸಾಕಷ್ಟು ಕಸರತ್ತು ನಡೆಸಬೇಕು ಹಾಗೂ ಕೆಲವೊಮ್ಮೆ ಉಚಿತವಾಗಿ ಸಿಗೋದೇ ಇಲ್ಲ ಅದಕ್ಕೆ ಹಣವನ್ನ ನೀಡಿನೇ ನಾವು ತೆಗೆದುಕೊಂಡು ಹೋಗಬೇಕು. ಇಲ್ಲೊಂದು ಕಡೆಯಲ್ಲಿ ಕುರಿಯನ್ನು ಕೂಡ ನೀವು ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ಹಾಗಿದ್ರೆ ಈ ಸುದ್ದಿ ಏನು ಎಲ್ಲಿ ಉಚಿತವಾಗಿ ಕುರಿಗಳನ್ನು ತೆಗೆದುಕೊಂಡು ಹೋಗಬಹುದು ಅನ್ನೋ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಇಲ್ಲಿ ಬಂದರೆ ಕುರಿ ಫ್ರೀ

ನಾವು ಮಾತನಾಡೋಕೆ ಹೊರಟಿರೋದು ಇಟಲಿ ದೇಶದ ಅಲಿಕುಡಿ ಎನ್ನುವಂತಹ ಪುಟ್ಟ ದ್ವೀಪ ಪ್ರದೇಶದ ಬಗ್ಗೆ. ಇಲ್ಲಿ ವಾಸವಾಗಿರುವಂತಹ ಮನುಷ್ಯರ ಸಂಖ್ಯೆ ನೂರು ಆಗಿರಬಹುದು ಆದರೆ ಇಲ್ಲಿರುವ ಕುರಿಗಳ ಸಂಖ್ಯೆ ಮಾತ್ರ 6 ಪಟ್ಟು ದುಪ್ಪಟ್ಟಾಗಿದೆ. ಅಲ್ಲಿರುವಂತಹ ಬೆಳೆಗಳನ್ನು ಕೂಡ ಈ ಕುರಿಗಳು ನಾಶ ಮಾಡುವುದರಿಂದಾಗಿ ಅವುಗಳನ್ನು ನಿಯಂತ್ರಣ ಮಾಡೋದೇ ಇಲ್ಲಿನ ಸ್ಥಳೀಯರಿಗೆ ತಲೆ ಬಿಸಿ ವಿಚಾರವಾಗಿದೆ ಎಂದು ಹೇಳಬಹುದಾಗಿದೆ.

ಇದೇ ಕಾರಣಕ್ಕಾಗಿ ಆದ್ವಿಪದ ಮೇಯರ್ ಒಂದು ಉಪಾಯವನ್ನು ಕಂಡುಹಿಡಿದಿದ್ದು ಎಲ್ಲರೂ ಕೂಡ ಆ ಉಪಾಯಕ್ಕೆ ತಲೆದೂಗಿದ್ದಾರೆ. ಅದೇನೆಂದರೆ ಯಾರು ಬೇಕಾದರೂ ಕೂಡ ಈ ದೀಪಕ್ಕೆ ಬಂದು ಎಷ್ಟು ಬೇಕಾದರೂ ಕುರಿಗಳನ್ನು ದತ್ತು ತೆಗೆದುಕೊಂಡು ಹೋಗಬಹುದಾಗಿದೆ. ಆದರೆ ಈ ಕೆಲಸವನ್ನು ಏಪ್ರಿಲ್ ಹತ್ತರವರೆಗೆ ಮಾಡಬೇಕಾಗಿರುತ್ತದೆ. ಇದಕ್ಕೆ ಇರುವಂತಹ ಪ್ರಮುಖ ಕಾರಣ ಎಂದರೆ ಈ ದ್ವೀಪಕ್ಕೆ ಬಂದು ಅವರಿಗೆ ಬೇಕಾಗಿರುವಂತಹ ಕುರಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ 15 ದಿನಗಳ ಸಮಯ ಬೇಕಾಗಿರುತ್ತದೆ ಇದಕ್ಕಾಗಿ ಈ ರೀತಿ ನಿಯಮಗಳನ್ನು ಜಾರಿಗೆ ತರಲಾಗಿದೆ.

ಇಲ್ಲಿರುವಂತಹ ಜನರು ಕುರಿಯನ್ನ ಸೇವಿಸುವ ಕಾರಣಕ್ಕಾಗಿ ಅವುಗಳನ್ನ ಮುಗಿಸುವುದಕ್ಕೆ ಇಷ್ಟಪಡುತ್ತಿಲ್ಲ. ಆದರೆ ಗಣನೀಯವಾಗಿ ಈ ದ್ವೀಪ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕುರಿಯ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಅಲ್ಲಿನ ಜನವಸತಿ ಪ್ರದೇಶದಲ್ಲಿ ಕೂಡ ಇವುಗಳು ದಾಂದಲೆ ಎಬ್ಬಿಸುತ್ತಿವೆ. ಕುರಿಗಳನ್ನು ಸಾಕುವ ಕಾರಣಕ್ಕಾಗಿ ಈ ದ್ವೀಪ ಪ್ರದೇಶಕ್ಕೆ ತರಲಾಗಿತ್ತು ಆದರೆ ಈಗ ಅವುಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಈ ರೀತಿ ಉಚಿತವಾಗಿ ದತ್ತು ತೆಗೆದುಕೊಳ್ಳುವಂತಹ ಕೆಲಸವನ್ನು ಘೋಷಿಸಲಾಗಿದೆ. ಇಲ್ಲಿ ಕತ್ತೆಗಳನ್ನು ಕೂಡ ಸರಕು ಸಾಗಾಣಿಕೆ ಕೆಲಸಕ್ಕಾಗಿ ಬಳಸಲಾಗುತ್ತದೆ. ಇಲ್ಲಿಗೆ ತಲುಪೋದಕ್ಕೆ ಯಾವುದೇ ರೀತಿಯ ರಸ್ತೆ ಅಥವಾ ವಾಹನಗಳಿಲ್ಲ. ಕೇವಲ ದೋಣಿಯ ಮುಖಾಂತರ ಮಾತ್ರ ಈ ದ್ವೀಪ ಪ್ರದೇಶವನ್ನು ಪ್ರವೇಶಿಸಬಹುದಾಗಿದೆ.

ಈ ರೀತಿ ಉಚಿತವಾಗಿ ಕುರಿಯನ್ನು ದತ್ತು ತೆಗೆದುಕೊಳ್ಳಬಹುದು ಎಂಬುದಾಗಿ ತಿಳಿದಿರುವಂತಹ ಜನರು ಈ ದ್ವೀಪ ಪ್ರದೇಶಕ್ಕೆ ಹೆಚ್ಚಾಗಿ ಭಾವಿಸಿರುವಂತಹ ಸಾಧ್ಯತೆ ಕೂಡ ಇರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಒಂದು ವೇಳೆ ನೀವು ಕೂಡ ಇಟಲಿಯ ಈ ದ್ವೀಪ ಪ್ರದೇಶದ ಬಳಿ ಇದ್ದರೆ ಸುಲಭವಾಗಿ ನಿಮಗೆ ಬೇಕಾದಷ್ಟು ಕುರಿಯನ್ನು ದತ್ತು ತೆಗೆದುಕೊಳ್ಳಬಹುದಾಗಿದೆ.

Comments are closed.